ನೈಟಿ ತೊಟ್ಟರೆ 2 ಸಾವಿರ ರೂಪಾಯಿ ದಂಡ!
Team Udayavani, Nov 11, 2018, 6:00 AM IST
ರಾಜಮಂಡ್ರಿ (ಆಂಧ್ರಪ್ರದೇಶ): ಈ ಹಳ್ಳಿಯಲ್ಲಿ ಹೆಂಗಸರು ಹಗಲು ಹೊತ್ತಿನಲ್ಲಿ ನೈಟಿ ಧರಿಸಿದರೆ ಅವರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ! ಪಶ್ಚಿಮ ಗೋದಾವರಿ ಜಿಲ್ಲೆಯ ತೋಕಲ ಪಲ್ಲಿ ಎಂಬ ಗ್ರಾಮದಲ್ಲಿ 9 ತಿಂಗಳಿಂದ ಇಂಥದ್ದೊಂದು ನಿಯಮ ಜಾರಿ ಯಲ್ಲಿದೆ. ಈ ಊರಿನ ಮುಖ್ಯಸ್ಥೆ ಫ್ಯಾಂಟ ಸಿಯಾ ಮಹಾಲಕ್ಷ್ಮೀ ಅವರೇ ಈ ಆದೇಶ ನೀಡಿದ್ದಾರೆ. ನಿಯಮದಂತೆ, ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಹೆಂಗಸರು ನೈಟಿ ತೊಟ್ಟು ಹೊರಬಂದರೆ ದಂಡ ಹಾಕಲಾಗುತ್ತದೆ. ದಂಡ ಕಟ್ಟದಿದ್ದರೆ ಬಹಿಷ್ಕಾರ ವಿಧಿಸಲಾಗುತ್ತದೆ. ಅಲ್ಲದೆ, ಈ ನಿಯಮ ಮೀರುವ ಹೆಂಗಸನ್ನು ಎಳೆದು ತಂದು ಪಂಚಾಯ್ತಿ ಹಾಕಬಹುದು. ಈ ಕೆಲಸ ಮಾಡಿದಾತನಿಗೆ 1 ಸಾವಿರ ರೂ. ಪುರಸ್ಕಾರ ನೀಡಲಾಗುತ್ತದೆ! ಹಳ್ಳಿಗರಿಗೆ ಈ ನಿಯಮ ಬೇಸರ ತಂದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅಥವಾ ವಿಲಕ್ಷಣ ಬಟ್ಟೆ ಬರೆ ಮಹಿಳೆಯರ ಪಾಲಿಗೆ ಅಪಾಯ ಎಂದೆನಿಸಿವೆ. ಹಳ್ಳಿಯ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಈ ಅವಶ್ಯಕವಿದೆ ಎಂದು ಹೆಂಗಸರೇ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.