Watch: ಕ್ಷುಲ್ಲಕ ಕಾರಣ…ವಿವಾಹ ಮಂಟಪದಲ್ಲೇ ಮುಖ, ಮೂತಿ ನೋಡದೇ ಹೊಡೆದಾಡಿಕೊಂಡ ವಧು-ವರ!
ಇದು ವಿವಾಹವೋ ಅಥವಾ ವಿಚ್ಛೇದನವೋ ಅಂತ ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
Team Udayavani, Dec 15, 2022, 12:29 PM IST
ನವದೆಹಲಿ: ವಿವಾಹ ಸಮಾರಂಭದಲ್ಲಿ ಕೆಲವೊಮ್ಮೆ ವಧು ಅಥವಾ ವರನ ಕಡೆಯವರ ಗಲಾಟೆಯಿಂದ ಮದುವೆಗೆ ಅಡ್ಡಿಯುಂಟಾದ ಘಟನೆ ಬಗ್ಗೆ ಕೇಳಿರುತ್ತೀರಿ. ಇಲ್ಲವೇ ವಧು ವಿವಾಹ ನಿರಾಕರಿಸುವುದು, ವರ ನಿರಾಕರಿಸಿ ಮದುವೆ ಮುರಿದು ಬೀಳುವ ಪ್ರಸಂಗವೂ ನಡೆಯುತ್ತಿರುತ್ತದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ವಧು ಮತ್ತು ವರ ವಿವಾಹ ಮಂಟಪದಲ್ಲೇ ಮಾರಾಮಾರಿ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪಕ್ಷ ಹಗಲು ರಾತ್ರಿ ಕಟ್ಟಿ ಬೆಳೆಸಿದವರಲ್ಲಿ ನಾನೂ ಒಬ್ಬ, ನನ್ನ ಯಾರೂ ಕಡೆಗಣಿಸಿಲ್ಲ: ಯಡಿಯೂರಪ್ಪ
ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರ ಬಹಿರಂಗಗೊಂಡಿಲ್ಲ. ವಿಡಿಯೋ ಕ್ಲಿಪ್ ನಲ್ಲಿ, ವರ ಮತ್ತು ವಧು ವಿವಾಹ ಮಂಟಪದಲ್ಲಿ ನಿಂತಿದ್ದು, ಈ ಸಂದರ್ಭದಲ್ಲಿ ಅವರ ಸಂಬಂಧಿಕರು ಸುತ್ತ-ಮುತ್ತ ಸೇರಿರುವುದು ಸೆರೆಯಾಗಿದೆ.
ಸಂಪ್ರದಾಯದಂತೆ ವರ ವಧುವಿಗೆ ಸಿಹಿಯನ್ನು ತಿನ್ನಿಸುವ ದೃಶ್ಯವಿದ್ದು, ಈ ಸುಂದರ ಗಳಿಗೆ ಎಂಬುದು ಏಕಾಏಕಿ ಜಟಾಪಟಿಗೆ ತಿರುಗಿಬಿಟ್ಟಿತ್ತು.ಅದಕ್ಕೆ ಕಾರಣ ವರ ವಧುವಿಗೆ ಸಿಹಿ ತಿಂಡಿಯನ್ನು ಬಲವಂತವಾಗಿ ಬಾಯಿಗೆ ತುರುಕಿಸಲು ಯತ್ನಿಸಿದಾಗ, ವಧು ಬಲವಾಗಿ ವರನನ್ನು ಹಿಂದೆ ತಳ್ಳುತ್ತಾಳೆ. ತಕ್ಷಣವೇ ಆಕೆ ವರನ ಕೆನ್ನೆಗೆ ಹೊಡೆಯುತ್ತಾಳೆ, ಆಗ ಸಿಟ್ಟುಗೊಂಡ ವರ, ವಧುವಿನ ಕೆನ್ನೆಗೆ ಬಾರಿಸುತ್ತಾನೆ.
ಹೀಗೆ ಸಂಬಂಧಿಕರು, ಅತಿಥಿಗಳ ಸಮ್ಮುಖದಲ್ಲೇ ವರ ಮತ್ತು ವಧು ಮಂಟಪದಲ್ಲೇ ಮಾರಾಮಾರಿ ಹೊಡೆದಾಡಿಕೊಂಡ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಸಂಬಂಧಿಕರು ಗಲಾಟೆಯನ್ನು ಶಮನಗೊಳಿಸಲು ಮುಂದಾಗಿದ್ದರು. ಆದರೂ ವಧು ವರನನ್ನು ಕೆಳಕ್ಕೆ ಎಳೆದು ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಘಟನೆಯ ಬಳಿಕ ವಿವಾಹ ನಡೆಯಿತೇ, ಸಂಧಾನ ನಡೆಯಿತಾ ಅಥವಾ ಮದುವೆ ಮುರಿದು ಬಿತ್ತಾ? ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
Kalesh B/w Husband and Wife in marriage ceremony pic.twitter.com/bjypxtJzjt
— Ghar Ke Kalesh (@gharkekalesh) December 13, 2022
ವಿವಾಹ ದಿನದಂದೇ ವಧು, ವರ ಹೊಡೆದಾಡಿಕೊಂಡ ಪ್ರಸಂಗದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮಾಷೆಯ ಟ್ವೀಟ್ ಗಳೊಂದಿಗೆ ಕಾಲೆಳೆದಿದ್ದಾರೆ. ಇದು ವಿವಾಹವೋ ಅಥವಾ ವಿಚ್ಛೇದನವೋ ಅಂತ ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕೊನೆಗೂ ಇವರಿಬ್ಬರ ವಿವಾಹ ನಡೆಯಿತೇ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.