ಶಾಲೆಗಳಲ್ಲಿನ್ನು ಬಿಸಿ ತಿಂಡಿ, ಒಗ್ಗರಣೆ ಘಮಲು!
Team Udayavani, Apr 11, 2019, 6:00 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳಲ್ಲಿ ಸದ್ಯದಲ್ಲೇ ವಾರಕ್ಕೆರಡು ಬಾರಿ ಘಮಘಮ ಅಡುಗೆ ತಯಾರಾಗಲಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ರೂಪುಗೊಳ್ಳುವ ಈ ಅಡುಗೆಯನ್ನು ವಿದ್ಯಾರ್ಥಿಗಳೇ ತಯಾರಿಸುತ್ತಾರೆ. ಇದಕ್ಕೆ ಕಾರಣ ಇಷ್ಟೇ. ತನ್ನ ಪಠ್ಯ ಅಳವಡಿಸಿಕೊಂಡಿರುವ ಎಲ್ಲಾ ಶಾಲೆಗಳ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅಡುಗೆ ಕಲೆಯ ತರಗತಿಗಳನ್ನು ಕಡ್ಡಾಯವಾಗಿ ನಡೆಸಬೇಕೆಂದು ಸಿಬಿಎಸ್‌ಇ ಆದೇಶಿಸಿದೆ. ವಾರಕ್ಕೆರಡು ಬಾರಿ ಈ ತರಗತಿಗಳು ಕಡ್ಡಾಯವಾಗಿ ನಡೆಯಲೇಬೇಕು. ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೊಳ್ಳುವಂತೆ ಮಾಡಲು ಮಂಡಳಿ ಸೂಚಿಸಿದೆ. ಜತೆಗೆ, ಎಲ್ಲಾ ತರಗತಿಗಳಲ್ಲಿ ಸಂಗೀತ, ನೃತ್ಯ, ಪ್ರದರ್ಶನ ಕಲೆಗಳು ಹಾಗೂ ರಂಗಭೂಮಿಗೆ ಸಂಬಂಧಪಟ್ಟಂತೆ ಯಾವುದಾದರೊಂದು ಕಲೆಯ ತರಗತಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳ ಬೇಕು ಎಂದೂ ಮಂಡಳಿ ಹೇಳಿದೆ.
“ಇಂಗು-ತೆಂಗು’ ತಲೆಬಿಸಿ ಏಕೆ?: ವಿದ್ಯಾರ್ಥಿಗಳನ್ನು ನಳಪಾಕ, ಭೀಮಪಾಕ ತಜ್ಞರನ್ನಾಗಿಸುವ ಉದ್ದೇಶ ಖಂಡಿತವಾಗಿಯೂ ಮಂಡಳಿಗಿಲ್ಲ. ಬದಲಿಗೆ, ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ ಧಾನ್ಯ, ತರಕಾರಿ, ಹಣ್ಣು-ಹಂಪಲು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಬಳಕೆ ಹಾಗೂ ಅವುಗಳ ಮೌಲ್ಯ ಅರ್ಥ ಮಾಡಿಸುವುದು. ದೇಸೀ ತಳಿಗಳ ಬಗ್ಗೆ ಅರಿವು
ಮೂಡಿಸುವುದು. ಜತೆಗೆ, ಬೀಜಗಳಿಂದ ಎಣ್ಣೆ ತೆಗೆಯುವಿಕೆ, ಕ್ರಮಬದಟಛಿವಾದ ಕೃಷಿ ಪದ್ಧಗಳ ಬಗ್ಗೆಯೂ ಜ್ಞಾನ ದೊರೆಯುವಂತೆ ಮಾಡುವ ಉದ್ದೇಶವನ್ನು ಮಂಡಳಿ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಹಾರ ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಸಿಬಿಎಸ್‌ಇಯ
ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“”6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಇದು ಕಡ್ಡಾಯವಾಗಲಿದ್ದು, ಬಾಲಕಿಯರು, ಬಾಲಕರು ಸಮಪ್ರಮಾಣದಲ್ಲಿ ಈ ತರಗತಿಗಳಲ್ಲಿ
ಭಾಗಿಯಾಗಬೇಕು. ಈ ತರಗತಿಗಳ ಫಲಿತಾಂಶದಲ್ಲಿ ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತೋರುವ ಸಾಧನೆಯ ಆಧಾರದಲ್ಲಿ ಗ್ರೇಡ್‌ಗಳನ್ನು ನೀಡಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಶಾಲೆಗಳಿಗೆ ಮುಕ್ತ ಆಯ್ಕೆ
ಸಮರ್ಪಕವಾಗಿ ಅಡುಗೆ ತರಗತಿಗಳನ್ನು ನಡೆಸಲು ಆಯಾ ಶಾಲೆಗಳು ತಮ್ಮದೇ ಆದ ವಿಧಾನವನ್ನು ರೂಪಿಸಲು ಮುಕ್ತ ಅವಕಾಶವಿದೆ ಎಂದು ಸಿಬಿಎಸ್‌ಇ ಹೇಳಿದೆ. ಪ್ರಾತ್ಯಕ್ಷಿಕೆ ಮಾದರಿಯಲ್ಲಿ ಅಡುಗೆ ಮಾಡಿ ತೋರಿಸಲು ತನ್ನದೇ ಆದ ಅಡುಗೆ ಮನೆಯ ಮಾದರಿಯನ್ನು ಶಾಲೆಯಲ್ಲಿ
ನಿರ್ಮಿಸಬೇಕು. ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ
ಅಳವಡಿಸಿಕೊಳ್ಳಲೇಬೇಕಿರುತ್ತದೆ. ಒಟ್ಟಾರೆಯಾಗಿ, ಅಡುಗೆ
ಕಲೆಯನ್ನು ವಿದ್ಯಾರ್ಥಿಗಳು ಖುಷಿಯಿಂದ ಕಲಿಯುವಂಥ
ವಾತಾವರಣ ನಿರ್ಮಿಸಬೇಕು ಎಂದು ಸಿಬಿಎಸ್‌ಇ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.