ರಚನಾತ್ಮಕ ವಿಮರ್ಶೆಗೆ ಸ್ವಾಗತ
Team Udayavani, Aug 31, 2019, 6:00 AM IST
ಹೊಸದಿಲ್ಲಿ: ಸಾರ್ವಜನಿಕ ಜೀವನದಲ್ಲಿ ನಾಗರಿಕತೆ ಎನ್ನುವುದು ಇರಬೇಕು. ರಚನಾತ್ಮಕ ವಿಮರ್ಶೆಗಳನ್ನು ಸ್ವಾಗತಿಸಲು ನಾನು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊಚ್ಚಿಯಲ್ಲಿ “ಮಲಯಾಳ ಮನೋರಮ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಭಿನ್ನ ಅಭಿಪ್ರಾಯಗಳು ಇದ್ದ ಹೊರತಾ ಗಿಯೂ ಸಮಾಜದಲ್ಲಿ ಮಾತುಕತೆಗಳು ಮುಂದುವರಿಯಬೇಕು.
ಭಿನ್ನ ಅಭಿಪ್ರಾಯ ಹೊಂದಿರುವವರು ಎಲ್ಲ ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ ಇತರರ ಅಭಿಪ್ರಾಯಗಳನ್ನು ಆಲಿಸುವಂಥ ಮನಸ್ಥಿತಿ ಇರಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
“ಕಾರ್ಯಕ್ರಮದಲ್ಲಿ ಭಾಗವಹಿಸಿರುವವರ ಬಗ್ಗೆ ಮತ್ತು ಅವರು ಯಾವ ರೀತಿ ಯೋಚಿಸುತ್ತಾರೆ ಎನ್ನುವುದು ನನಗೆ ತಿಳಿಯದೇ ಇದ್ದರೂ, ಒಂದು ವಿಚಾರದಲ್ಲಿ ಸಾಮ್ಯತೆ ಇದೆ. ಜನರು ರಚನಾತ್ಮಕವಾಗಿ ಮಾಡುವ ವಿಮರ್ಶೆಯನ್ನು ಯಾವತ್ತೂ ಸ್ವಾಗತಿಸುತ್ತೇನೆ’ ಎಂದಿದ್ದಾರೆ ಮೋದಿ. ಜನರ ಜತೆ ಇರಲು ಬಯಸುವ ನಾನು, ಜನರ ಮತ್ತು ಸಂಘಟನೆಗಳ ನಡುವೆ ಚರ್ಚೆಗಳು ನಡೆಯಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ.
ಹೊಸ ಮಾದರಿಯ ಭಾರತದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿ “ಹಲವು ವರ್ಷ ಗಳವರೆಗೆ ಆಕಾಂಕ್ಷೆ ಎನ್ನುವುದು ಅಪರಾಧ ವನ್ನು ಸೂಚಿಸುವ ಶಬ್ದವಾಗಿತ್ತು. ಹಲವು ಜನರ ನಡುವೆ ಸಂಪರ್ಕ ಬೆಳೆದಾಗ ಅದು ನಿವಾರಣೆಯಾಯಿತು’ ಎಂದರು. ಸರಕಾರದ ವ್ಯವಸ್ಥೆಯಲ್ಲಿ ಮಾಡಿರುವ ಹಲವು ಬದಲಾವಣೆ ಗಳನ್ನು ಉಲ್ಲೇಖೀಸಿದ ಅವರು, ಈ ವ್ಯವಸ್ಥೆಯನ್ನು ಹಿಂದೆಲ್ಲ ಅಸಾಧ್ಯವೆಂದೇ ಭಾವಿಸಲಾಗಿತ್ತು. ಆದರೆ ಅದನ್ನು ನಾವು ಸಾಧ್ಯ ವಾ ಗಿಸಿದೆವು ಎಂದಿದ್ದಾರೆ. ಸ್ವದೇಶದಲ್ಲಿರುವ ಜನರ ಬಗ್ಗೆ ಮಾತ್ರ ಕೇಂದ್ರ ಸರಕಾರ ಕಾಳಜಿ ವಹಿಸದೆ ವಿದೇಶಗಳಲ್ಲಿನ ಭಾರತೀಯರ ಬಗ್ಗೆಯೂ ಆಸ್ಥೆ ವಹಿಸಿದೆ. ಅದಕ್ಕೆ ಕ್ರೈಸ್ತ ಧರ್ಮ ಗುರು ಟಾಮ್ ಉಳನ್ನ ಲಿÇ …ರನ್ನು ಐಸಿಸ್ ಉಗ್ರ ಸಂಘಟನೆಯ ಕಪಿಮುಷ್ಟಿಯಿಂದ ಬಿಡಿಸಿದ್ದೇ ಸಾಕ್ಷಿ ಎಂದರು.
ಮೋದಿಗೆ ತರೂರ್ ಬೆಂಬಲ!
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಟೀಕೆ ಹೊರತಾಗಿಯೂ ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರಧಾನಿ ಮೋದಿಯನ್ನು ಹೊಗಳುವುದನ್ನು ಮುಂದುವರಿಸಿದ್ದಾರೆ. “ಮಲಯಾಳ ಮನೋರಮ’ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ “ಮಾತೃ ಭಾಷೆಯ ಹೊರತಾಗಿನ ಭಾಷೆಯಿಂದ ದಿನಕ್ಕೊಂದು ಹೊಸ ಪದ ಕಲಿಯಬೇಕು’ ಎಂದು ಸಲಹೆ ನೀಡಿದ್ದರು. ಅದನ್ನು ಶ್ಲಾ ಸಿ ತರೂರ್ ಟ್ವೀಟ್ ಮಾಡಿದ್ದಾರೆ. ನಮ್ಮದಲ್ಲದ ಹೊರತಾಗಿನ ಭಾಷೆಯ ಶಬ್ದವನ್ನು ಕಲಿಯಬೇಕು ಎಂದು ಪ್ರಧಾನಿ ಭಾಷಣ ಮುಕ್ತಾಯಗೊಳಿಸಿದ್ದಾರೆ. ಇದು ನಿಜಕ್ಕೂ ಮೆಚ್ಚುಗೆಯ ವಿಚಾರ ಎಂದು ಬರೆದುಕೊಂಡಿದ್ದಾರೆ. ಅದಕ್ಕಾಗಿ ಅವರು ಪ್ರತಿದಿನ ಒಂದು ಶಬ್ದವನ್ನು ಹಿಂದಿ, ಮಲಯಾಳಂ, ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡುವುದಾಗಿ ಹೇಳಿಕೊಂಡಿದ್ದು, ಬಹುತ್ವ (ಪೂÉರಲಿಸಂ) ಎಂಬ ಶಬ್ದದಿಂದ ಶುರು ಮಾಡಿದ್ದಾರೆ.
ಗಂಭೀರ ಕಾಯಿಲೆಗಳ ಗುಣಪಡಿಸಲು ಪುರಾತನ-ಆಧುನಿಕ ಜ್ಞಾನಗಳ ಸಮ್ಮಿಳನ ಅಗತ್ಯ
ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಪುರಾತನ ಜ್ಞಾನವನ್ನು ಹಾಲಿ ದಿನಮಾನಕ್ಕೆ ಅನುಗುಣವಾಗಿ ಲಿಂಕ್ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಭಾರತೀಯ ವೈದ್ಯಪದ್ಧತಿಯಲ್ಲಿ ಅಪೂರ್ವ ಸಾಧನೆ ಮಾಡಿದ 12 ಮಂದಿ ಸಾಧಕರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಹಾಗೂ ಯೋಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ, ಅದಕ್ಕೆ ಸಂಪೂರ್ಣ ದೇಶಿಯ ವ್ಯವಸ್ಥೆಯನ್ನು ಅವಲಂಬಿಸ- ಬೇಕಾಗಿದೆ. ಅದಕ್ಕಾಗಿ ಪುರಾತನ ಮತ್ತು ಆಧುನಿಕ ಕ್ರಮಗಳನ್ನು ಸಮ್ಮಿಳನಗೊಳಿಸಿ ಮುಂದುವರಿಯ ಬೇಕಾದ ಅಗತ್ಯವಿದೆ ಎಂದಿದ್ದಾರೆ. ಈ ಉದ್ದೇಶಕ್ಕಾಗಿ ನಮಗೆ ಸಾವಿರಾರು ವರ್ಷಗಳಿಂದ ಕೊಡುಗೆಯಾಗಿ ಬಂದಿರುವ ಸಾಹಿತ್ಯಗಳಿವೆ. ವೇದಗಳಲ್ಲಿಯೂ ಗಂಭೀರ ಕಾಯಿಲೆಗಳ ಬಗ್ಗೆ ಉಲ್ಲೇಖವಿದೆ. ದುರ ದೃಷ್ಟವಶಾತ್ ಪುರಾತನ ಮತ್ತು ಆಧುನಿಕ ವ್ಯವಸ್ಥೆ ಗಳನ್ನು ಸಮ್ಮಿಳನಗೊಳಿಸುವಲ್ಲಿ ನಿರೀಕ್ಷಿತ ಪ್ರಯತ್ನ ಗಳಾಗಿಲ್ಲ ಎಂದೂ ಮೋದಿ ಹೇಳಿದ್ದಾರೆ.
ಕೇಂದ್ರ ಸರಕಾರ 12 ಸಾವಿರ ಆಯುಷ್ ಕೇಂದ್ರ ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಈ ಪೈಕಿ ಹರ್ಯಾಣದಲ್ಲಿ ಹತ್ತು ಕೇಂದ್ರಗಳನ್ನು ಶುರು ಮಾಡಲಾಗಿದೆ. ಒಂದು ದೇಶ; ಒಂದು ತೆರಿಗೆ ಮಾದರಿಯಲ್ಲಿ “ಆಯುಷ್ ಗ್ರಿಡ್’ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಆಯುಷ್ಮಾನ್ ಭಾರತ ಯೋಜನೆಗೆ ಸೇರುವ ಮೂಲಕ ದೇಶವಾಸಿಗಳು 12 ಸಾವಿರ ಕೋಟಿ ರೂ. ಮೊತ್ತವನ್ನು ಬೊಕ್ಕಸಕ್ಕೆ ಉಳಿತಾಯ ಮಾಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.