ಹೊಸ ನಿಯಮಗಳು: ನಾಳೆಯಿಂದ ಏನೇನು ಬದಲಾವಣೆ?
Team Udayavani, Jan 31, 2022, 12:18 PM IST
ಹೊಸದಿಲ್ಲಿ: ಫೆಬ್ರವರಿ 1ರಿಂದ ದೇಶದಲ್ಲಿ ಕೆಲವು ವಿಚಾರಗಳಲ್ಲಿ ಬದಲಾವಣೆಯಾಗುತ್ತಿದೆ. ಅವುಗಳ ವಿವರ ಇಲ್ಲಿದೆ.
ಮಿತಿ ಹೆಚ್ಚಳ
ಫೆ.1ರಿಂದ ಎಸ್‌ಬಿಐ ಗ್ರಾಹಕರು 5 ಲಕ್ಷ ರೂ.ಗಳವರೆಗಿನ ಐಎಂಪಿಎಸ್ ವಹಿವಾಟಿಗೆ ಸೇವಾ ಶುಲ್ಕ ಪಾವತಿಸಬೇಕಾಗಿಲ್ಲ. ಈವರೆಗೆ 2 ಲಕ್ಷದವರೆಗಿನ ವಹಿವಾಟಿಗೆ ಸೇವಾ ಶುಲ್ಕದಿಂದ ವಿನಾಯ್ತಿಯಿತ್ತು. ಆದರೆ, ಸೋಮವಾರದಿಂದ ನೆಟ್ ಬ್ಯಾಂಕಿಂಗ್, ಮೊಬೈಲ್ ಮತ್ತು ಯೋನೋದಲ್ಲಿ 5 ಲಕ್ಷ ರೂ.ವರೆಗೆ ಉಚಿತವಾಗಿ ಐಎಂಪಿಎಸ್ ಮೂಲಕ ವಹಿವಾಟು ನಡೆಸಬಹುದು.
ದಂಡದ ಬಿಸಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನ ಇಎಂಐ ಅಥವಾ ಇತರೆ ವಹಿವಾಟಿನ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, 250 ರೂ. ದಂಡ ತೆರಬೇಕಾಗುತ್ತದೆ. ಈವರೆಗೆ ಈ ದಂಡದ ಮೊತ್ತ 100 ರೂ. ಆಗಿತ್ತು.
ಶುಲ್ಕ ಜಾರಿ
2 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಐಎಂಪಿಎಸ್ ಆನ್‌ಲೈನ್ ಹಣ ವರ್ಗಾವಣೆಯ ಪ್ರತಿ ವಹಿವಾಟಿನ ಮೇಲೆ 20 ರೂ. + ಜಿಎಸ್‌ಟಿ ಶುಲ್ಕ ವಿಧಿಸಲು ಎಸ್‌ಬಿಐ ನಿರ್ಧರಿಸಿದೆ.
ಮಾಹಿತಿ ಕಡ್ಡಾಯ
ಬ್ಯಾಂಕ್ ಆಫ್ ಬರೋಡಾದಲ್ಲಿ ಚೆಕ್ ಕ್ಲಿಯರೆನ್ಸ್‌ಗೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ಬರಲಿದೆ. 10 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಣದ ವಹಿವಾಟಿನ ಚೆಕ್ ಗಳಿಗೆ ಈ ನಿಯಮ ಅನ್ವಯವಾಗಲಿದೆ. ಅದರಂತೆ, ಚೆಕ್‌ನ ಸಂಪೂರ್ಣ ಮಾಹಿತಿಯನ್ನು ಬ್ಯಾಂಕಿಗೆ ನೀಡಿದರೆ ಮಾತ್ರ ಚೆಕ್ ಕ್ಲಿಯರ್ ಆಗಲಿದೆ.
ದರ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಫೆ.1ರಂದು ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು.
ಶಾಲೆ ಪುನಾರಂಭ
ಕೊರೊನಾ 3ನೇ ಅಲೆಯ ಹೊಡೆತದಿಂದ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಈಗ ಸೋಂಕು ಇಳಿಮುಖವಾದ ಹಿನ್ನೆಲೆಯಲ್ಲಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೋಮವಾರದಿಂದ ಶಾಲೆ-ಕಾಲೇಜುಗಳು ಪುನಾರಂಭಗೊಳ್ಳಲಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.