ಮೋದಿ ಮುಂದಿರುವ ಸವಾಲುಗಳೇನು?


Team Udayavani, May 30, 2019, 6:10 AM IST

savalu

ಭಾರತೀಯ ಪ್ರಜಾತಂತ್ರದ ಇತಿಹಾಸದಲ್ಲೇ ಅಭೂತಪೂರ್ವ ಎಂಬಂತೆ ನರೇಂದ್ರ ಮೋದಿಎರಡನೇ ಬಾರಿಗೆ ಜನರ ವಿಶ್ವಾಸ ಗೆದ್ದು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇಂಥ ಆಯ್ಕೆ ಈ ಹಿಂದೆ ನಡೆದದ್ದು ನೆಹರೂ ಕಾಲದಲ್ಲಿ; ಅದು ಬಿಟ್ಟರೆ ಇನ್ನೊಂದು ಬಾರಿಗೆ ಆರಿಸಿ ಬಂದ ಇಂದಿರಾ ಗಾಂಧಿಯವರ ವಿಜಯವನ್ನೂ ಈ ಚುನಾವಣೆ ಮೀರಿಸಿದೆ.

ಮೋದಿ ಅವರ ಪ್ರಚ ಲಿತ ಚುನಾವಣಾ ಆಶ್ವಾಸನೆಗಳಿಗಿಂತಲೂ ಮಿಗಿಲಾಗಿ ಸಮಗ್ರ ಭಾರತೀಯರ ಭವಿಷ್ಯದ ಆಶಯಗಳು ಈ ಬಾರಿಯ ಫ‌ಲಿತಾಂಶದಲ್ಲಿ ತುಂಬಿ ನಿಂತಿವೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಜತೆಗೆ, ‘ಸಬ್‌ ಕಾ ವಿಶ್ವಾಸ್‌’ ಉಳಿಸಿಕೊಳ್ಳುವಿಕೆ ಮತ್ತು ಅದಕ್ಕೆ ತಕ್ಕುದಾಗಿ ಕಾರ್ಯನಿರ್ವಹಿಸುವುದು ಮೋದಿಯವರ ಮುಂದಿರುವ ಬಹುದೊಡ್ಡ ಸವಾಲು.

ರಾಜಕೀಯವಾಗಿ, ಸಂವಿಧಾನದ ಗೆರೆಗಳ ಮಧ್ಯದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ರಾಜಧರ್ಮ ಪಾಲನೆ, ಪ್ರಜೆಗಳ ಹಕ್ಕು ಬಾಧ್ಯತೆಗಳ ರಕ್ಷಣೆ- ಸುರಕ್ಷೆ, ಸುಭಿಕ್ಷೆ ದೇಶದಲ್ಲಿ ಕಳೆದ ಐದು ವರ್ಷಗಳ ಭರವಸೆಯ ಅಲೆಯೇರಿ ಕಾರ್ಯರೂಪಕ್ಕೆ ಬರಬೇಕು. ಆಡಳಿತ ಯಂತ್ರವನ್ನು ವಿಶ್ವವಿದ್ಯಾನಿಲಯ ಸಂಸ್ಕೃತಿಯಿಂದ ಹೊರತಂದು ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ಜೋಡಿಸುವುದು ಮತ್ತೂಂದು ಸವಾಲು. ಸಮಗ್ರ ರಾಜಕಾರಣಿಗಳ ವಲಯವನ್ನು ಸಾತ್ವಿಕ, ಪರಿಶುದ್ಧ, ಪಾರದರ್ಶಕತೆಯೊಂದಿಗೆ ಮುನ್ನಡೆಸುವಂತಹದ್ದು ಅಷ್ಟೇ ದೊಡ್ಡ ಜವಾಬ್ದಾರಿ. ಅರ್ಥಾತ್‌ ‘ಬ್ಯುರಾಕ್ರಸಿ ಟು ಬಿ ಫಿಟ್ಟೆಡ್‌ ಇನ್‌ ಟು ಡೆಮಾಕ್ರಟಿಕ್‌ ಫ್ರೇಮ್‌ ವರ್ಕ್‌’ ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಪೂರ್ವದ, ಅದರಲ್ಲಿಯೂ 1942ರಿಂದ 47ರ ಕಾಲಘಟ್ಟದ ಆಶಯಗಳನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರತಿಫ‌ಲಿಸುವಲ್ಲಿ ಜನ ತಂತ್ರದ ಹೊಸ ಮೈಲುಗಲ್ಲು ಹೊಂದುವಲ್ಲಿಯೂ ಮೋದಿ ಯವರ ನೇತಾರಿಕೆ ತುಂಬಿ ಬರಬೇಕಾಗಿದೆ.

ವ್ಯಕ್ತಿಗತ ಆದಾಯ, ಕೌಟುಂಬಿಕ ಸಂಪನ್ಮೂಲದ ಸಂವರ್ಧನೆ, ರಾಷ್ಟ್ರೀಯ ಆದಾಯದ ಏರಿಕೆ, ಹಣದುಬ್ಬರಕ್ಕೆ ಕಡಿವಾಣ – ಈ ಎಲ್ಲ ಕ್ಷೇತ್ರಗಳಲ್ಲಿ ತಳಸ್ಪರ್ಶಿ ಸುಧಾರಣೆ ತೀರಾ ಅತ್ಯಗತ್ಯ. ಕೃಷಿ ಬದುಕಿನ ಸರ್ವತೋಮುಖ ಅಭಿ ವೃದ್ಧಿ, ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳ ಬೆಳವಣಿಗೆ, ನೆಲ, ಜಲ, ವಾಯು, ಸಾರಿಗೆ ಸಂಪರ್ಕದ ಕ್ಷಿಪ್ರ ಪ್ರಗತಿ, ನಗರ ಮತ್ತು ಗ್ರಾಮಗಳ ಬೆಳವಣಿಗೆಯಲ್ಲಿ ಸಮತೋಲನ, ವಸತಿ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವಿಕೆ, ದೇಶೀ, ವಿದೇಶೀ ಬಂಡವಾಳಗಳ ಆಕರ್ಷಣೆ, ಹೂಡಿಕೆ, ತನ್ಮೂಲಕ ನಿರುದ್ಯೋಗ ಸಮಸ್ಯೆಗೆ ಗಣನೀಯವಾಗಿ ಪರಿಣಾ ಮಕಾರಿ ಪರಿಹಾರ, ಬ್ಯಾಂಕಿಂಗ್‌ ಉದ್ಯ ಮದ ಪ್ರಗತಿಶೀಲ ನೀತಿ ನಿರೂಪಣೆ ಇವೆಲ್ಲ ಆರ್ಥಿಕ ಸವಾಲುಗಳು.

ವಿಶ್ವದ ಎರಡನೆಯ ಅತ್ಯಂತ ಜನಸಂಖ್ಯಾ ಬಾಹುಳ್ಯದ ದೇಶ ನಮ್ಮದು. ಮಾನವ ಸಂಪನ್ಮೂಲದ, ಅದರಲ್ಲೂ ಯುವಶಕ್ತಿಯ ಸದ್ಬಳಕೆ ಭಾರತದ ಚಿತ್ರಣವನ್ನೇ ಬದಲಿ ಸಬಲ್ಲುದು. ಕೌಶಲ – ಕೌಶಲೇತರ ಕಾರ್ಮಿಕ ವರ್ಗಕ್ಕೆ ವಿಶೇಷ ಪ್ರೋತ್ಸಾಹ, ಶಿಕ್ಷಣ – ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ, ತಾಂತ್ರಿಕತೆ ವೈದ್ಯಕೀಯ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲೂ ಜಾಗತಿಕ ಮಟ್ಟಕ್ಕೆ ಭಾರತವನ್ನು ಏರಿಸಬೇಕಿದೆ.

ನಮ್ಮ ರಕ್ಷಣಾ ಸಾಮರ್ಥ್ಯ ಅತ್ಯಂತ ಉತ್ಕೃಷ್ಟ ನೆಲೆಯಲ್ಲಿ ಸಂಪನ್ನಗೊಳ್ಳಬೇಕು. ಏಕೆಂದರೆ ಸುಮಾರು 8 ರಾಷ್ಟ್ರಗಳ ಜತೆಗೆ ನೆಲ, ಜಲ, ಗಡಿಯನ್ನು ಹಂಚಿ ಕೊಂಡಿದ್ದೇವೆ. ವಿಶ್ವದರ್ಜೆಯ ರಕ್ಷಣಾವ್ಯೂಹ ಹೊಂದಲು ಹೊಸ ಸರಕಾರದ ದೃಢ ಹೆಜ್ಜೆ ಆವಶ್ಯಕ. ಜತೆಗೆ ನಾವು ಅಂತಾರಾಷ್ಟ್ರೀಯ ಸಂಬಂಧಗಳನ್ನು ಇನ್ನಷ್ಟು ಸಂವರ್ಧಿಸಿಕೊಳ್ಳಬೇಕು.

ಉಗ್ರವಾದದ ವಿರುದ್ಧ ಅದೇ ರೀತಿ, ಅಂತಾರಾಷ್ಟ್ರೀಯ ಶಾಂತಿ ನೆಲೆಗೊಳ್ಳುವಲ್ಲಿಯೂ ಮೋದಿ ಅವರಿಗೆ ದೇಶಕ್ಕೆ ಈ ಬಾರಿ ವಿಶ್ವದ ಅತ್ಯುನ್ನತ ಅವಕಾಶ ನಿರ್ಮಾಣ ಗೊಂಡಿದೆ. ಮೋದಿ ಅವರು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹೊಂದಿರುವ ಮಾನ್ಯತೆಯನ್ನು ಸದವಕಾಶವಾಗಿ ಬಳಸಿಕೊಳ್ಳಬೇಕಿದೆ.

ಶ್ರೀ ರಾಮ ಜನ್ಮಭೂಮಿ, ಕಾಶ್ಮೀರ ಸಮಸ್ಯೆ, ಚೀನದ ಬಗೆಗಿನ ಅರುಣಾಚಲ ಪ್ರದೇಶದ ಗಡಿ ಸಮಸ್ಯೆ – ಇಂತಹ ಸೂಕ್ಷ್ಮ ಸಂಗತಿಗಳನ್ನು ಸೌಹಾರ್ದ ಯುತವಾಗಿ ಮತ್ತು ಶಾಶ್ವತವಾಗಿ ಪರಿಹರಿಸಲು ಈ ನೂತನ ಸರಕಾರಕ್ಕೆ ಸಾಧ್ಯವಿದೆ.

ಕೇಂದ್ರ-ರಾಜ್ಯಗಳ ಮಧ್ಯೆ ಸೌಹಾರ್ದಯುತ ಪಥ ಕಲ್ಪಿಸುವಲ್ಲಿ ಮೋದಿ ಅವರ ಮುತ್ಸದ್ದಿತನ ಪ್ರಧಾನ ಎನಿಸಲಿದೆ. ನಮಗೆ ಇಂದು ಮತ್ತು ಮುಂದೆಯೂ ಬೇಕಾದುದು ಸಹಕಾರಿ ಸಂಯುಕ್ತ ರಾಜ್ಯ ಪದ್ಧತಿ ( ಕೋಆಪರೇಟಿವ್‌ ಫೆಡರಲಿಸಂ) ವಿನಾ ಸಂಘರ್ಷಾತ್ಮಕ ಸಂಯುಕ್ತ ರಾಜ್ಯ (ಕಾನ್ಫಿಕ್ಟಿವ್‌ ಫೆಡರಲಿಸಂ) ಪದ್ಧತಿ ಅಲ್ಲ.

ಕಳೆದ ನಿನ್ನೆಗಳ ರಾಜಕೀಯ ಇಂದಿನ ಇತಿಹಾಸ, ಪ್ರಚಲಿತ ರಾಜಕೀಯವು ಭವಿಷ್ಯದ ಇತಿಹಾಸ (ಪಾಸ್ಟ್‌ ಪಾಲಿಟಿಕ್ಸ್‌ ಈಸ್‌ ಎ ಪ್ರಸೆಂಟ್ ಹಿಸ್ಟರಿ, ಪ್ರಸೆಂಟ್ ಪಾಲಿಟಿಕ್ಸ್‌ ಈಸ್‌ ಎ ಫ್ಯೂಚರ್‌ ಹಿಸ್ಟರಿ) ಎಂಬ ಆಂಗ್ಲ ಉಕ್ತಿಯೊಂದಿದೆ. ಮುಂದಿನ ಐದು ವರ್ಷಗಳ ರಾಜಕೀಯವು ದೇಶದ ಸುವರ್ಣ ಯುಗವಾಗಿ ದಾಖಲಾ ಗುವಂತೆ ಕಾರ್ಯನಿರ್ವ ಹಿಸ ಬೇಕಿದೆ ನರೇಂದ್ರ ಮೋದಿ ಮತ್ತವರ ಸರಕಾರ.

– ಡಾ| ಪಿ. ಅನಂತಕೃಷ್ಣ ಭಟ್, ಸಂವಿಧಾನ ತಜ್ಞರು

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.