ಅಂಚೆ ಗ್ರಾಹಕರಿಗೆ “ಇ-ಪಾಸ್‌ಬುಕ್’ ಸೌಲಭ್ಯ: ಕುಳಿತಲ್ಲೇ ಖಾತೆ ಮಾಹಿತಿ ಲಭ್ಯ
Team Udayavani, Oct 14, 2022, 7:30 AM IST
ನವದೆಹಲಿ: ನೀವು ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳ ಗ್ರಾಹಕರೇ? ಹಾಗಿದ್ದರೆ, ಇನ್ನು ಮುಂದೆ ನೀವು ಎಲ್ಲಿಂದ ಬೇಕಿದ್ದರೂ, ಯಾವಾಗ ಬೇಕಿದ್ದರೂ, ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಇಲ್ಲದೆಯೇ, ನಿಮ್ಮ ಖಾತೆಯ ಮಾಹಿತಿಯನ್ನು ಪಡೆಯಬಹುದು!
ಅದಕ್ಕೆಂದೇ ಸರ್ಕಾರವು “ಇ-ಪಾಸ್‌ಬುಕ್’ ಸೌಲಭ್ಯವನ್ನು ಒದಗಿಸಿದೆ. ಅ.12ರಿಂದಲೇ ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ಇ-ಪಾಸ್‌ಬುಕ್ ಸೇವೆಯನ್ನು ಪರಿಚಯಿಸಲಾಗಿದೆ. ಈ ಮೂಲಕ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಇ-ಪಾಸ್‌ಬುಕ್ ಫೀಚರ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದು.
ತಮ್ಮ ರಾಷ್ಟ್ರೀಯ ಉಳಿತಾಯ ಯೋಜನೆಗಳ ಬ್ಯಾಲೆನ್ಸ್ ಎಷ್ಟಿದೆ ಎಂದು ನೋಡುವುದು, ಸುಕನ್ಯ ಸಮೃದ್ಧಿ, ಪಿಪಿಎಫ್ ಮುಂತಾದ ಯೋಜನೆಗಳ ಮಿನಿ ಸ್ಟೇಟ್‌ಮೆಂಟ್ ಪಡೆಯುವುದು ಸೇರಿದಂತೆ ಅನೇಕ ಸೇವೆಗಳನ್ನು ಇ-ಪಾಸ್‌ಬುಕ್ ಫೀಚರ್ ಮೂಲಕ ಪಡೆಯಬಹುದು.
ಪ್ರಕ್ರಿಯೆ ಹೇಗೆ? :
- www.indiapost.gov.in ಅಥವಾ www.ippbonline.com ನಲ್ಲಿ ನೀಡಲಾದ “ಇ-ಪಾಸ್‌ಬುಕ್’ ಲಿಂಕ್ ಅನ್ನು ಒತ್ತಿ. ಮೊಬೈಲ್ ಸಂಖ್ಯೆ ನಮೂದಿಸಿ. ಲಾಗಿನ್ ಆಗಿ, ಒಟಿಪಿ ನಮೂದಿಸಿ, ಸಬ್‌ಮಿಟ್ ಎಂಬ ಆಯ್ಕೆ ಒತ್ತಿ.
- ನಂತರ “ಇ-ಪಾಸ್‌ಬುಕ್’ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಯೋಜನೆಯ ಹೆಸರನ್ನು ಆಯ್ಕೆ ಮಾಡಿ, ಅಲ್ಲಿ ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಿ. ಬಳಿಕ ಒಟಿಪಿ ನಮೂದಿಸಿ, ದೃಢೀಕರಿಸಿ.
- ಈಗ ನಿಮ್ಮ ಮುಂದೆ “ಬ್ಯಾಲೆನ್ಸ್ ಎಂಕ್ವೈರಿ’, “ಮಿನಿ ಸ್ಟೇಟ್‌ಮೆಂಟ್’, “ಫುಲ್ ಸ್ಟೇಟ್‌ಮೆಂಟ್’ ಎಂಬ ಆಯ್ಕೆಗಳು ಬರುತ್ತವೆ. ನಿಮಗೆ ಯಾವ ಸೇವೆ ಬೇಕೋ, ಆ ಆಯ್ಕೆಯನ್ನು ಆಯ್ದುಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.