ಕಣಿವೆ ರಾಜ್ಯದಲ್ಲಿ ಮುಂದೇನಾಗಬಹುದು?


Team Udayavani, Aug 4, 2019, 5:20 AM IST

x-48

ತಮ್ಮೂರುಗಳಿಗೆ ವಾಪಸಾಗಲು ಶ್ರೀನಗರ ರೈಲು ನಿಲ್ದಾಣದಲ್ಲಿ ಜಮಾಯಿಸಿರುವ ಯಾತ್ರಿಕರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳು ಹಲವು ಊಹಾಪೋಹಗಳಿಗೆ ಇಂಬು ನೀಡಿವೆ. ಕೆಲವರು ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370 ಮತ್ತು 35ಎ ವಿಧಿಯನ್ನು ರದ್ದು ಮಾಡಲು ಕೇಂದ್ರ ಸರಕಾರ ಈ ಮೂಲಕ ಅಡಿಪಾಯ ಹಾಕುತ್ತಿದೆ ಎಂದು ಹೇಳಿದರೆ, ಇನ್ನೂ ಕೆಲವರು ಜಮ್ಮು – ಕಾಶ್ಮೀರವನ್ನು ಮೂರು ಪ್ರತ್ಯೇಕ ರಾಜ್ಯವನ್ನಾಗಿ ವಿಭಜಿಸುವುದೇ ಸರಕಾರದ ಪ್ಲ್ರಾನ್‌ ಎಂದು ಹೇಳುತ್ತಿದ್ದಾರೆ. ಈ ಎಲ್ಲ ಊಹಾಪೋಹಗಳ ಸಾಧ್ಯತೆ ಮತ್ತು ಬಾಧ್ಯತೆಗಳ ಬಗೆಗಿನ ಒಂದಿಷ್ಟು ವಿವರ ಇಲ್ಲಿದೆ.

1 ವಿಭಜನೆ
ಅನುದಾನಗಳನ್ನು ಬಟವಾಡೆ ಮಾಡಲು ಮತ್ತು ಸಮಾನವಾಗಿ ಅಭಿವೃದ್ಧಿ ಮಾಡಲು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರದೇಶಗಳನ್ನು ಪ್ರತ್ಯೇಕ ಆಡಳಿತಾತ್ಮಕ ಘಟಕಗಳನ್ನಾಗಿ ವಿಭಜಿಸುವುದು. ಎರಡು ವಲಯಗಳಾದ ಹಿಂದೂ ಬಾಹುಳ್ಯದ ಜಮ್ಮು ಮತ್ತು ಬೌದ್ಧರ ಪ್ರಾಬಲ್ಯದ ಲಡಾಖ್‌ನಲ್ಲಿ ಮುಸ್ಲಿಂ ಬಾಹುಳ್ಯದ ಕಣಿವೆ ಪ್ರದೇಶವು ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಈ ಎರಡು ಭಾಗಗಳು ರಾಜ್ಯದ ಶೇ.85ರಷ್ಟು ಭೂಪ್ರದೇಶವನ್ನು ಮತ್ತು ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿವೆ. ಒಂದು ವೇಳೆ ರಾಜ್ಯವನ್ನು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಎಂದು ಮೂರು ಭಾಗಗಳಾಗಿ ವಿಭಜನೆ ಮಾಡಿದ್ದೇ ಆದಲ್ಲಿ ಭಯೋತ್ಪಾದನೆಯು ಕಾಶ್ಮೀರಕ್ಕೆ ಮಿತಿಗೊಳ್ಳುತ್ತದೆ.
ಪರಿಣಾಮ: ಈ ರೀತಿ ಮೂರು ವಿಭಾಗಗಳಾಗಿ ವಿಭಜಿಸುವುದು ಇತರೆ ಎರಡು ಪ್ರದೇಶಗಳ ಮೇಲೆ ಕಾಶ್ಮೀರದ ಪ್ರಭಾವವನ್ನು ಕಡಿಮೆ ಮಾಡುವ ತಂತ್ರ ಎಂದು ರಾಜಕಾರಣಿಗಳು ನೋಡುತ್ತಿದ್ದಾರೆ.

2 ವಿಧಿ 370, 35ಎ
ಭಾರತದ ಸಂವಿಧಾನದಲ್ಲಿರುವ ಈ ಎರಡು ವಿಧಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುತ್ತವೆ. ಜಮ್ಮು ಕಾಶ್ಮೀರದಲ್ಲಿ ಸಂಸತ್ತಿನ ಶಾಸನಾತ್ಮಕ ಅಧಿಕಾರವನ್ನು ವಿಧಿ 370 ನಿರ್ಬಂಧಿಸುತ್ತದೆ. ಸಂವಿಧಾನದ ಅನುಚ್ಛೇದ 1ರಲ್ಲಿ ಉಲ್ಲೇಖೀಸಿರುವ 35ಎ ವಿಧಿ 370ರ ಪರಿಣಾಮವಾಗಿದೆ. ಇವುಗಳು ರಾಜ್ಯದ ಖಾಯಂ ನಾಗರಿಕರು ಮತ್ತು ಅವರ ಹಕ್ಕುಗಳನ್ನು ಜಮ್ಮು- ಕಾಶ್ಮೀರ ಶಾಸನ ಸಭೆಯು ವಿವರಿಸುವ ಅಧಿಕಾರವನ್ನು ನೀಡುತ್ತದೆ. ಈ ವಿಧಿಗಳನ್ನು ರದ್ದುಗೊಳಿಸುವುದಕ್ಕೆ ರಾಜ್ಯದ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧವಿದ್ದರೂ, ಇದನ್ನು ಕೇಂದ್ರ ಸರಕಾರ ರದ್ದುಗೊಳಿಸುವ ಸಾಧ್ಯತೆ ಇದೆ.

ಪರಿಣಾಮ: ದೇಶದಲ್ಲಿ ಸಂಪೂರ್ಣವಾಗಿ ರಾಜ್ಯವು ಮಿಳಿತವಾಗುವುದನ್ನು ಈ ಎರಡು ವಿಧಿಗಳು ತಡೆಯು ತ್ತವೆ ಎಂದು ಕೇಂದ್ರ ಸರಕಾರ ಭಾವಿಸಿದೆ. ಹೀಗಾಗಿ, ಈ 2 ವಿಧಿಗಳನ್ನು ರದ್ದು ಮಾಡಿದ್ದೇ ಆದಲ್ಲಿ, ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಇತರೆ ರಾಜ್ಯಗಳ ಮಾದರಿಯಲ್ಲಿ ದೇಶದಲ್ಲಿ ಮಿಳಿತವಾಗುತ್ತದೆ.

3 ಕ್ಷೇತ್ರ ಹಂಚಿಕೆ
ಜಮ್ಮು ಮತ್ತು ಲಡಾಖ್‌ನ ಮೇಲೆ ಕಾಶ್ಮೀರಕ್ಕೆ ಹೆಚ್ಚುವರಿ ಅನುಕೂಲ ಒದಗಿಸುವ ಕ್ಷೇತ್ರ ಹಂಚಿಕೆಯು ತುಂಬಾ ಹಿಂದಿನಿಂದ ಬಾಕಿ ಇರುವ ಕ್ರಮ ಎಂದು ಸರಕಾರ ಭಾವಿಸಿದೆ. 87 ಚುನಾಯಿತ ಸದಸ್ಯರ ವಿಧಾನಸಭೆ ಯಲ್ಲಿ ಕಾಶ್ಮೀರವು 46 ವಿಧಾನ ಸಭೆ ಕ್ಷೇತ್ರಗಳು (ಶೇ. 52.87) ಪ್ರತಿನಿಧಿತ್ವ ಹೊಂದಿವೆ. ಜಮ್ಮು ಮತ್ತು ಲಡಾಖ್‌ 37 ಮತ್ತು 4 ಹೊಂದಿದೆ. ಕ್ಷೇತ್ರ ಹಂಚಿಕೆ ಮೂಲಕ ಕಾಶ್ಮೀರಕ್ಕಿಂತ ಜಮ್ಮು ಮತ್ತು ಲಡಾಖ್‌ ಹೆಚ್ಚು ಅಥವಾ ಸಮಾನ ಕ್ಷೇತ್ರಗಳನ್ನು ಪಡೆದರೆ, ಜಮ್ಮು ಸೇರಿ 2 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚುತ್ತದೆ.
ಪರಿಣಾಮ: ಕ್ಷೇತ್ರ ಹಂಚಿಕೆಯಿಂದ ಕಾಶ್ಮೀರ ಕೇಂದ್ರಿತ ರಾಜಕೀಯ ಕೊನೆಗಾಣುತ್ತದೆ. ಮುಸ್ಲಿಂ ಕೇಂದ್ರಿತ ಕಣಿವೆ ಪಕ್ಷಗಳು ಪ್ರಾಮುಖ್ಯ ಕಳೆದುಕೊಳ್ಳುತ್ತವೆ ಮತ್ತು ಅಧಿಕಾರ ಕೇಂದ್ರವು ಜಮ್ಮು ಮತ್ತು ಲಡಾಖ್‌ಗೆ ತಿರುಗುತ್ತದೆ. ಕೆಲವು ಬಿಜೆಪಿ ನಾಯಕರ ಪ್ರಕಾರ ಕಣಿವೆಯು ಸಂಖ್ಯಾತ್ಮಕವಾಗಿ ಹೆಚ್ಚು ಪ್ರಾತಿನಿಧ್ಯ ಹೊಂದಿದೆ. ಆದರೆ ಜಮ್ಮುವಿನ ಸರಾಸರಿ ಜನಸಂಖ್ಯೆ ಪ್ರತಿ ವಿಧಾನಸಭೆಗೆ 1.45 ಲಕ್ಷ ಆಗಿದ್ದು, ಕಾಶ್ಮೀರದಲ್ಲಿ ಇದು 1.5 ಲಕ್ಷ ಆಗಿದೆ. ಹೀಗಾಗಿ ಈ ಹೇಳಿಕೆ ನಿಲ್ಲುವುದಿಲ್ಲ.

4 ಆರ್ಥಿಕತೆಗೆ ಪ್ರೋತ್ಸಾಹ
ಸರಕಾರವು ಶ್ರೀನಗರದಲ್ಲಿ ಮೊದಲ ಬಾರಿಗೆ ಹೂಡಿಕೆ ಸಮ್ಮೇಳನ ಆಯೋಜಿಸಿದ್ದು, ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಜಮ್ಮುವಿನಲ್ಲೂ ನಡೆಯಲಿದೆ. ದಶಕಗಳಿಂದಲೂ ನಡೆಯುತ್ತಿರುವ ಒಳನುಸುಳುವಿಕೆಯ ಅನಂತರ ರಾಜ್ಯಕ್ಕೆ ಅತ್ಯಂತ ಅಗತ್ಯವಾದ ಹೂಡಿಕೆ, ಉದ್ಯೋಗ ತರುವ ಉದ್ದೇಶವನ್ನು ಇದು ಹೊಂದಿದೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ ಅನ್ನು ಎಸ್‌ಬಿಐ ಜೊತೆ ವಿಲೀನಗೊಳಿಸುವ ಸಾಧ್ಯತೆಯಿದೆ.

ಪರಿಣಾಮ: ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರದ ಆಡಳಿತ ಹೇರಲಾಗಿದೆ ಮತ್ತು ಇನ್ನೂ ಇದು ಬಾಧಿತ ಪ್ರದೇಶವಲ್ಲ ಎಂಬ ದೃಷ್ಟಿಕೋನವನ್ನು ಚದುರಿಸಲು ಇಂತಹ ಕ್ರಮ ಜಾರಿಗೊಳಿಸಬಹುದಾಗಿದೆ. ಹಣಕಾಸು ಪ್ಯಾಕೇಜ್‌ಗಳು/ಭರವಸೆಗಳನ್ನು ಒಳಗೊಂಡ ಇಂತಹ ಆರ್ಥಿಕ ಕ್ರಮಗಳು ಈ ಹಿಂದೆ ವಿಫ‌ಲವಾಗಿವೆ. ದೀರ್ಘ‌ಕಾಲದಿಂದಲೂ ಚಾಲ್ತಿಯಲ್ಲಿದ್ದ ಉಗ್ರ ಚಟುವಟಿಕೆಗಳು ರಾಜ್ಯದ ಕೃಷಿ ಆಧರಿತ ಆರ್ಥಿಕತೆಯನ್ನು ಹಾಳು ಮಾಡಿದೆ. ಸಂಘರ್ಷವು ರಾಜ್ಯ ಕರಕುಶಲ, ಉಣ್ಣೆ ಮತ್ತು ರೇಷ್ಮೆ ಉದ್ಯಮವನ್ನೂ ಹಾಳು ಮಾಡಿದೆ.

5 ಆಡಳಿತ
ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಮಹತ್ವದ ಕ್ರಮ ಎಂದೇ ಪರಿಗಣಿಸಲಾಗಿದೆ. ತಳಮಟ್ಟದಲ್ಲಿರುವ ಜನರಿಗೂ ಮೂಲ ಸೇವೆ ಹಾಗೂ ಸೌಲಭ್ಯಗಳನ್ನು ತಲುಪಿಸುವುದು ಮತ್ತು ರಾಜ್ಯದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದರ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕೈಗೊಂಡಿರುವ “ಬ್ಯಾಕ್‌ ಟು ವಿಲೇಜ್‌’ ಯೋಜನೆ ಜನರ ಮನ ಗೆದ್ದಿದೆ. ಕುಗ್ರಾಮ ಗಳಲ್ಲಿ ಸರ್ಕಾರಿ ಅಧಿಕಾರಿಗಳು ವಾಸಿಸುವಂಥ ಈ ಯೋಜನೆಯನ್ನು ಉತ್ತಮವಾಗಿ ಸ್ವೀಕರಿಸಲಾಗಿದೆ.

ಪರಿಣಾಮ: ರಾಜ್ಯದಲ್ಲಿ ಸೇನೆಯನ್ನು ನವದೆಹಲಿ ಹಿಂಪಡೆಯುವವರೆಗೂ ಮತ್ತು ಕಣಿವೆಯ ಹೊರಗೆ ಕಾಶ್ಮೀರ ವಿರೋಧಿ ಮನಸ್ಥಿತಿಯನ್ನು ನಿವಾರಿಸುವವರೆಗೂ ಜನರ ಮನಸನ್ನು ಗೆಲ್ಲುವ ತಂತ್ರಗಳು ಕೈಗೂಡುವುದಿಲ್ಲ ಎಂದು ಪರಿಣಿತರು ಹೇಳುತ್ತಾರೆ.

6 ಹೊಸ ನಾಯಕತ್ವ
ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಯು ನಿಷೇಧಿಸಿದ ಪಂಚಾಯತ್‌ ಚುನಾವಣೆ ಯಲ್ಲಿ ಕೆಲವು ಹೊಸ ಮುಖಗಳು ಕಂಡುಬಂದಿವೆ.
ಪರಿಣಾಮ: ಅವಿರೋಧವಾಗಿ ಆಯ್ಕೆಯಾದ ಬಹುತೇಕ ಹೊಸ ಪಂಚಾಯತ್‌ ಪ್ರತಿನಿಧಿಗಳು ಬಿಜೆಪಿ ಪರವಾಗಿದ್ದಾರೆ ಮತ್ತು ಈ ಪೈಕಿ ಕೆಲವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಬಿಜೆಪಿ ಭಾವಿಸಿದೆ. ಕಳೆದ ವರ್ಷದ ಜೂನ್‌ನಿಂದಲೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದೆ.

ದಾಳಿಯ ಆರೋಪ ಸುಳ್ಳೇ ಸುಳ್ಳು ಎಂದ ಸೇನೆ
ಗಡಿ ನಿಯಂತ್ರಣ ರೇಖೆಯ ಪ್ರಾಂತ್ಯಗಳಲ್ಲಿ ಭಾರತೀಯ ಸೇನೆಯು ಕ್ಲಸ್ಟರ್‌ ಸ್ಫೋಟಕಗಳನ್ನು ಉಪಯೋಗಿಸಿ, ಮುಗ್ಧ ನಾಗರಿಕರನ್ನು ಕೊಲ್ಲಲಾರಂಭಿಸಿದೆ ಎಂದು ಪಾಕಿಸ್ಥಾನದ ಹೇಳಿಕೆಯನ್ನು ಭಾರತೀಯ ಸೇನೆ ಖಂಡಿಸಿದೆ. ನುಸುಳುಕೋರರ ವಿರುದ್ಧದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ತೀವ್ರಗೊಳಿಸಿದೆಯಷ್ಟೆ. ಉಗ್ರರನ್ನು ಸದೆಬಡಿಯಲು ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆಯೇ ವಿನಃ ಕ್ಲಸ್ಟರ್‌ ಸ್ಫೋಟಕಗಳನ್ನು ಬಳಸುತ್ತಿಲ್ಲ ಎಂದು ಹೇಳಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಅಮಾಯಕರನ್ನು ಕೊಲ್ಲುತ್ತಿರುವ ಭಾರತ, ಜಿನೇವಾ ಒಪ್ಪಂದವನ್ನು ಉಲ್ಲಂ ಸುತ್ತಿದೆ ಎಂದು ಪಾಕಿಸ್ಥಾನ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಟ್ವೀಟ್‌ ಮಾಡಿದ್ದರು.

ಹೆಚ್ಚಿನ ದರ ಹೇರಬೇಡಿ
ಜಮ್ಮು-ಕಾಶ್ಮೀರದ ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಕೆಲವು ವಿಮಾನ ಸೇವಾ ಸಂಸ್ಥೆಗಳು ಟಿಕೆಟ್‌ ದರವನ್ನು ಹೆಚ್ಚಿಸಿವೆ. ಶ್ರೀನಗರದಿಂದ ದೆಹಲಿ ನಡುವಿನ ವಿಮಾನ ಸೇವೆ ನೀಡುವ ಕಡಿಮೆ ದರದ ಇಂಡಿಗೋ, ಸ್ಪೈಸ್‌ ಜೆಟ್‌, ಗೋ ಏರ್‌, ಏರ್‌ ಏಷ್ಯಾ ಸಂಸ್ಥೆಗಳ ಟಿಕೆಟ್‌ ಬೆಲೆ ಮೂಲತಃ 3,000 ರೂ. ಇದ್ದದ್ದು, ಈಗ 10,000 ರೂ.ಗಳಿಂದ 22,000 ರೂ.ಗಳಿಗೆ ಹೆಚ್ಚಾಗಿದೆ. ಹಾಗೆಯೇ, ಶ್ರೀನಗರದಿಂದ ಜಮ್ಮು ನಡುವಿನ ವಿಮಾನ ಸೇವೆಯ ದರ 16,000 ರೂ.ಗಳಿಗೆ ಏರಿದೆ. ಶ್ರೀನಗರದಿಂದ ಅಮೃತಸರ, ಚಂಡೀಗಡ, ಜೈಪುರಕ್ಕೆ ತೆರಳಲು ಸಹ 10,000 ರೂ.ಗಳಿಂದ 19,000 ರೂ.ಗಳನ್ನು ಪ್ರಯಾಣಿಕರು ತೆರಬೇಕಿದೆ.

ಪುತ್ರನ ಸಾವಿಗೆ ಪ್ರತೀಕಾರ?
ಉಗ್ರ ಮಸೂದ್‌ ಅಜರ್‌ನ ಸಹೋದರ ಇಬ್ರಾಹಿಂ ಅಜರ್‌ ಪಿಒಕೆಯಲ್ಲಿ ಪ್ರತ್ಯಕ್ಷವಾಗಿದ್ದು ಕೂಡ ಭದ್ರತೆ ಹೆಚ್ಚಿಸಲು ಕಾರಣ ಎನ್ನಲಾಗಿದೆ. 1999ರ ಏರ್‌ಇಂಡಿಯಾ ವಿಮಾನ ಅಪಹರಣ ಹಾಗೂ ಹಲವು ದೇಶಗಳಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲಿನ ದಾಳಿ ಪ್ರಕರಣಗಳಲ್ಲಿ ಭಾರತಕ್ಕೆ ಈತ ಬೇಕಾಗಿದ್ದಾನೆ. ಈತನ ಪುತ್ರ ಉಸ್ಮಾನ್‌ ಹೈದರ್‌ನನ್ನು ಇತ್ತೀಚೆಗೆ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದವು. ಇದರಿಂದ ಕ್ರುದ್ಧನಾಗಿರುವ ಇಬ್ರಾಹಿಂ, ತನ್ನ ಪುತ್ರನ ಸಾವಿಗೆ ಪ್ರತಿಕಾರ ತೀರಿಸಿಯೇ ಸಿದ್ಧ ಎಂದು ಶಪಥ ಮಾಡಿದ್ದಾನೆ. ಅದಕ್ಕಾಗಿ ಐವರು ಉನ್ನತ ತರಬೇತಿ ಪಡೆದಿರುವ ಜೈಶ್‌ ಉಗ್ರರನ್ನು ಭಾರತದೊಳಕ್ಕೆ ನುಸುಳಿಸಲು ಯತ್ನಿಸಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಜೆಇಎಂ ಹಾಗೂ ಲಷ್ಕರ್‌ ಜೊತೆಗೆ ಸಂಪರ್ಕದಲ್ಲಿದ್ದಾನೆ. ಹಿಜ್ಬುಲ್‌ ಮುಜಾಹಿದ್ದೀನ್‌ಗೂ ತನ್ನ ಕೃತ್ಯಗಳಿಗೆ ನೆರವು ನೀಡುವಂತೆ ಆತ ಮನವಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಪಾಕ್‌ ಮೊಸಳೆ ಕಣ್ಣೀರು
ಜಮ್ಮು ಕಾಶ್ಮೀರದಲ್ಲಿ ಬಿಗುವಿನ ವಾತಾವರಣ ಉಂಟಾಗಿರುವ ಈ ಸಂದರ್ಭದಲ್ಲಿ ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗಿರುವ ಪಾಕಿಸ್ಥಾನ, “ಪ್ರಕ್ಷುಬ್ಧ ಗೊಂಡಿರುವ ಜಮ್ಮು ಕಾಶ್ಮೀರದ ಜನತೆಯ ಬೆನ್ನಿಗೆ ಪಾಕಿಸ್ಥಾನದ ನಾಗರಿಕರು ನಿಂತಿದ್ದಾರೆ. ಕಣಿವೆಯ ಜನರನ್ನು ಅಪಾಯಕ್ಕೆ ಒಡ್ಡುವ ಬದಲು, ಭಾರತವು ವಾಸ್ತವವನ್ನು ಎದುರಿಸಲು ಸಿದ್ಧವಾಗಬೇಕು’ ಎಂದು ಪಾಕಿಸಾನದ ಸಚಿವ ಫ‌ವಾದ್‌ ಹುಸೇನ್‌ ಟ್ವೀಟ್‌ ಮಾಡಿದ್ದಾರೆ.

ನಾಲ್ವರು ಉಗ್ರರು ಹತ
ಬಾರಾಮುಲ್ಲಾ ಹಾಗೂ ಶೋಪಿಯಾನ್‌ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಜೈಶ್‌-ಎ-ಮೊಹಮ್ಮದ್‌ಗೆ ಸೇರಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆ ತಿಳಿಸಿದೆ. ಉಗ್ರರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಬಾರಾಮುಲ್ಲಾ ಜಿಲ್ಲೆಯ ಸಪೋರ್‌ ಟೌನ್‌ಶಿಪ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾದರೆ, ಶೋಪಿಯಾನ್‌ ಜಿಲ್ಲೆಯ ಪ್ರಕರಣದಲ್ಲಿ ಮತ್ತಿಬ್ಬರನ್ನು ಹೊಡೆದುರುಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಸರಕಾರ ಸ್ಪಷ್ಟನೆ ನೀಡಲಿ: ನ್ಯಾಷನಲ್‌ ಕಾನ್ಫರೆನ್ಸ್‌
“ಸಂವಿಧಾನದ 370ನೇ ವಿಧಿ ಹಾಗೂ 35 ಎ ವಿಧಿ ರದ್ದು ಮಾಡುವುದಿಲ್ಲ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ. ಆದರೆ, ಇದೇ ವಿಚಾರದ ಬಗ್ಗೆ ಸೋಮವಾರ ಕೇಂದ್ರ ಸರಕಾರವು ಸಂಸತ್‌ನಲ್ಲೇ ಸ್ಪಷ್ಟಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಸಂಸತ್‌ನಲ್ಲಿ ಸರಕಾರದ ಸ್ಪಷ್ಟನೆ ಕೋರುವಂತೆ ಪಕ್ಷದ ಸಂಸದರಿಗೆ ನಾವು ಸೂಚಿಸಿದ್ದೇವೆ. ರಾಜ್ಯದ ಜನರಲ್ಲಿನ ಆತಂಕ ದೂರ ಮಾಡಿ, ನಿರಾಳತೆ ಮೂಡಿಸಬೇಕೆಂದರೆ ಕೇಂದ್ರ ಸರಕಾರವೇ ಹೇಳಿಕೆ ನೀಡಬೇಕಾಗುತ್ತದೆ’.

ನಮ್ಮ ತಂಟೆಗೆ ಬರದಿರಿ: ಪಿಡಿಪಿ
“ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತು ಕೇಂದ್ರ ಸರಕಾರ ಸ್ಪಷ್ಟನೆ ನೀಡದೇ ಇರುವುದು ಖಂಡನೀಯ. ಬದ್ಗಾಂನ ಕಾರ್ಯಕರ್ತರನ್ನು ಭೇಟಿಯಾಗಿ, ಜಮ್ಮು-ಕಾಶ್ಮೀರಕ್ಕಿರುವ ವಿಶೇಷ ಸಾಂವಿಧಾನಿಕ ಸ್ಥಾನಮಾನದ ಕುರಿತು ಜಾಗೃತಿ ಮೂಡಿಸುತ್ತೇವೆ. ಜಮ್ಮು-ಕಾಶ್ಮೀರದ ಜನರು ಒಗ್ಗಟ್ಟಾದರೆ, ರಾಜ್ಯಕ್ಕಿರುವ ವಿಶೇಷ ಸ್ಥಾನಮಾನಕ್ಕೆ ಕೈ ಹಾಕಲು ಯಾರಿಂದಲೂ ಸಾಧ್ಯವಿಲ್ಲ’.

ಭ್ರಷ್ಟ ನಾಯಕರಿಗೆ ಮಾತ್ರ ಭಯ: ಬಿಜೆಪಿ
“ಎನ್‌ಸಿ, ಪಿಡಿಪಿ ಮತ್ತು ಕಾಂಗ್ರೆಸ್‌ ನಾಯಕರು ಉದ್ದೇಶಪೂರ್ವಕವಾಗಿ ಕಣಿವೆ ರಾಜ್ಯದ ಜನರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ನಿಜವಾಗಿ ಭಯ ಹುಟ್ಟಿರುವುದು ಈ ನಾಯಕರಿಗೇ ಹೊರತು ಜನಸಾಮಾನ್ಯರಿಗಲ್ಲ. ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶದ ಜನಸಾಮಾನ್ಯರು ಸುರಕ್ಷಿತವಾಗಿದ್ದಾರೆ. ಜಮ್ಮು-ಕಾಶ್ಮೀರದ ಜನರ ಗಾಯಗಳಿಗೆ ಪ್ರಧಾನಿ ಮೋದಿ ಮುಲಾಮು ಹಚ್ಚುತ್ತಿದ್ದಾರೆ’.

ಹಿಂದೆಂದೂ ರದ್ದಾಗಿರಲಿಲ್ಲ: ಕಾಂಗ್ರೆಸ್‌
“ರಾಜ್ಯದಲ್ಲಿ ಭಯೋತ್ಪಾದನೆಯು ಗರಿಷ್ಠ ಮಟ್ಟಕ್ಕೆ ತಲುಪಿದ್ದಾಗಲೂ, ಅಮರನಾಥ ಯಾತ್ರೆ ರದ್ದಾಗಿರಲಿಲ್ಲ. ಹಿಂದಿನ ಯಾವ ಸರಕಾರಗಳೂ ಯಾತ್ರೆ ರದ್ದು ಮಾಡುವ, ಯಾತ್ರಿಕರನ್ನು ವಾಪಸ್‌ ತೆರಳುವಂತೆ ಸೂಚಿಸುವ ಕೆಲಸ ಮಾಡಿರಲಿಲ್ಲ. ಕಣಿವೆ ರಾಜ್ಯದ ಪರಿಸ್ಥಿತಿಯು ಆತಂಕಕಾರಿಯಾಗಿದೆ. ಸಾವಿರಾರು ಮಂದಿಗೆ ತೊಂದರೆಯಾಗುತ್ತಿದೆ. ಇತರ ವಿದ್ಯಾರ್ಥಿಗಳನ್ನೂ ಸ್ಥಳಾಂತರಿಸಲಾಗುತ್ತಿದೆ’.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

modi (4)

ಇಲಾಖಾ ಮುಖ್ಯಸ್ಥರಿಗೆ “ಮನ್‌ ಕೀ ಬಾತ್‌’ ಕೇಳುವುದು ಕಡ್ಡಾಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.