![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 6, 2022, 8:39 AM IST
ಹೊಸದಿಲ್ಲಿ: ಬುಧವಾರ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸಂಭವಿಸಿದ ಪ್ರಧಾನಿಯವರ ಭದ್ರತಾ ಲೋಪದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಭದ್ರತಾ ಲೋಪ ಎಂದರೆ ಏನು, ಅದಕ್ಕೆ ಯಾರು ಹೊಣೆ ಎಂಬ ಬಗ್ಗೆ ಮಾಹಿತಿ ಇದೆ.
ಎಸ್‌ಪಿಜಿಯದ್ದೇ ಹೊಣೆ: ಪ್ರಧಾನಿಯವರ ಭದ್ರತೆ, ರಕ್ಷಣೆಯ ಜವಾಬ್ದಾರಿ ವಿಶೇಷ ಭದ್ರತಾ ತಂಡ(ಎಸ್‌ಪಿಜಿ)ಯದ್ದಾಗಿರುತ್ತದೆ.
ಸಂಚಾರದ ವೇಳೆ ಹೊಣೆ ಯಾರದ್ದು?: ಸುಧಾರಿತ ಭದ್ರತಾ ಸಂಪರ್ಕ(ಎಎಸ್‌ಎಲ್) ಕೂಡ ಎಸ್‌ಪಿಜಿ ಜವಾಬ್ದಾರಿಯಾಗಿರುತ್ತದೆ. ಪ್ರಧಾನಿಯವರು ಸಂಚರಿಸ ಬೇಕಾದ ಮಾರ್ಗ, ಕಾರ್ಯಕ್ರಮ ನಡೆಯುವ ಸ್ಥಳದ ಸ್ಯಾನಿಟೈಸೇಷನ್, ಕ್ಷಣಕ್ಷಣದ ಮಾಹಿತಿ ಕಲೆ ಹಾಕಿಕೊಳ್ಳುವುದು ಅವರೇ ಆಗಿರುತ್ತಾರೆ. ಆದರೆ ಬೇರೆ ರಾಜ್ಯಗಳಿಗೆ ತೆರಳಿದಾಗ ಈ ಕೆಲಸಗಳನ್ನು ರಾಜ್ಯದ ಪೊಲೀಸ್ ಇಲಾಖೆ ಮಾಡುತ್ತದೆ ಮತ್ತು ಅದರ ಮೇಲ್ವಿಚಾರಣೆಯನ್ನು ಎಸ್‌ಪಿಜಿ ವಹಿಸಿಕೊಂಡಿರುತ್ತದೆ.
ರಾಜ್ಯ ಪೊಲೀಸರ ಜವಾಬ್ದಾರಿಯೇನು?: ರಾಜ್ಯದ ಪೊಲೀಸರು ಪ್ರಧಾನಿಯವರು ತೆರಳಬೇಕಾದ ಮಾರ್ಗವನ್ನು ಎಸ್‌ಪಿಜಿ ಜೊತೆ ಚರ್ಚಿಸಿ ಮೊದಲೇ ನಿರ್ಧರಿಸಿರುತ್ತದೆ. ಹಾಗೆಯೇ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿರುತ್ತದೆ. ಪ್ರಧಾನಿ ವಾಹನದ ಸುತ್ತ ಎಸ್‌ಪಿಜಿ ಇರುತ್ತದೆಯಾದರೂ ಅವರ ಸುತ್ತ ಪೊಲೀಸರು ಇರಬೇಕು.
ಎಸ್‌ಪಿಜಿ ಅಧಿಕಾರಿ ಮೊದಲು: ಪ್ರಧಾನಿಯವರು ತೆರಳುವ ಮಾರ್ಗದಲ್ಲಿ ಪ್ರಧಾನಿಗಿಂತ ಮೊದಲು ಎಸ್‌ಪಿಜಿ ಅಧಿಕಾರಿ ತೆರಳಿ ಪರಿಶೀಲಿಸಬೇಕು.
ವಾಯು ಪ್ರಯಾಣದಲ್ಲಿ ಹೇಗೆ?: ಪ್ರಧಾನಿ ಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಎರಡು ಮಾರ್ಗಗಳನ್ನು ನಿರ್ಧರಿಸಲಾಗಿರುತ್ತದೆ. ಎಸ್‌ಪಿಜಿ, ಪೊಲೀಸರು, ಗುಪ್ತಚರ ಇಲಾಖೆಯ ಅಧಿಕಾರಿಗಳೆಲ್ಲರೂ ಮೊದಲೇ ಸಂಚಾರದ ಅಭ್ಯಾಸ ಮಾಡಿರುತ್ತಾರೆ.
ಇದು ಮೊದಲ ಪ್ರಕರಣವೇ?: 2006ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸಂಭವಿಸಿತ್ತು. ಅವರು ತಿರುವನಂತಪುರಕ್ಕೆ ತೆರಳಿದ್ದಾಗ ರಾಜಭವನಕ್ಕೆ ಹೋಗಬೇಕಾಗಿದ್ದ ವಾಹನ ಬೇರೆಡೆ ತೆರಳಿತ್ತು.
ಹಲವು ಸಂಶಯಗಳು
ಪಂಜಾಬ್ ಮುಖ್ಯಮಂತ್ರಿ ಪ್ರಧಾನಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿರಲಿಲ್ಲ.
ಸಿಎಂ ಮತ್ತು ಡಿಜಿಪಿ ಫೋನ್ ಕರೆಗಳನ್ನೇ ಸ್ವೀಕರಿಸಲಿಲ್ಲ
ಫ್ಲೈ ಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿಯವರನ್ನು ಎಸ್‌ಪಿಜಿ ಸಹಿತ ಕಾಯುವಂತೆ ಮಾಡಲಾಯಿತು.
ಪ್ರಧಾನಿಯವರ ಕಾರಿನ 2-3 ಮೀಟರ್ ಅಂತರದಲ್ಲಿ 2-3 ಮೀಟರ್ ಅಂತರದಲ್ಲಿ 10-15 ಮಂದಿ ಬಂದಿದ್ದರು.
ಘಟನೆಯ ಕೆಲವೇ ನಿಮಿಷದ ಒಳಗೆ ಕಾಂಗ್ರೆಸ್ ನಾಯಕರು ಸಂಭ್ರಮಿಸಿ ಟ್ವೀಟ್ ಮಾಡಿದ್ದು.
ಘಟನೆ ನೆಡೆದ ಸ್ಥಳ ಪಾಕಿಸ್ತಾನ ಗಡಿಯಿಂದ ಫಿರೋಜ್‌ಪುರ ತೀರಾ ಸನಿಹದಲ್ಲಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.