ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಹೆಚ್ಚಿದ ಆತಂಕ
Team Udayavani, Oct 30, 2022, 7:35 AM IST
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಆಫ್ರಿಕನ್ ಹಂದಿ ಜ್ವರ ಈಗ ಕೇರಳದಲ್ಲೂ ಆತಂಕ ಹೆಚ್ಚಿಸುತ್ತಿದೆ. ಕೊಟ್ಟಾಯಂ ಬಳಿಕ ತ್ರಿಶೂರ್‌ನ ಕಾಡಂಗೋಡೆಯಲ್ಲಿ 40 ಹಂದಿಗಳು ಈ ವೈರಸ್‌ಗೆ ಬಲಿಯಾಗಿವೆ. ಹೀಗಾಗಿ, 600ಕ್ಕೂ ಅಧಿಕ ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.
ಏನಿದು ಜ್ವರ?
ಇದು ಶೇ.100ರಷ್ಟು ಮರಣ ಸಾಧ್ಯತೆಯಿರುವ ವೈರಲ್ ರೋಗ. ಇದು ಮನುಷ್ಯರಿಗೆ ಹರಡುವುದಿಲ್ಲ. ಆದರೆ, ಒಂದು ಹಂದಿಯಿಂದ ಮತ್ತೂಂದು ಹಂದಿಗೆ ಹರಡುತ್ತದೆ. ಹಂದಿಗಳ ನಡುವೆ ಪರಸ್ಪರ ದೈಹಿಕ ಸಂಪರ್ಕ ಮತ್ತು ಶರೀರದ ದ್ರವಗಳ ವಿನಿಮಯದಿಂದ ವೈರಸ್ ವ್ಯಾಪಿಸುತ್ತದೆ. ಅಲ್ಲದೇ, ಸರಿಯಾಗಿ ಬೇಯಿಸದ ಸೋಂಕಿತ ಆಹಾರವನ್ನು ಹಂದಿಗಳಿಗೆ ನೀಡುವುದರಿಂದಲೂ ಇದು ಹಬ್ಬುತ್ತದೆ.
ರೋಗಲಕ್ಷಣಗಳು
ವಿಪರೀತ ಜ್ವರ, ಹಸಿವಿಲ್ಲದಿರುವಿಕೆ, ದೌರ್ಬಲ್ಯ, ಚರ್ಮದಲ್ಲಿ ಕೆಂಪು ಮಚ್ಚೆ, ವಾಂತಿ -ಭೇದಿ, ಕೆಮ್ಮು ಮತ್ತು ಉಸಿರಾಟದ ತೊಂದರೆ. ಆರಂಭದಲ್ಲಿ ಹಂದಿಗಳ ತಾಪಮಾನ 40.5 ಡಿ.ಸೆ.ಗೆ ತಲುಪಲಿದೆ. ನಂತರ ಅವುಗಳು ಸಪ್ಪೆಯಾಗಿ, ಆಹಾರ ಸೇವಿಸುವುದನ್ನು ಸ್ಥಗಿತಗೊಳಿಸುತ್ತವೆ.
ಕೇರಳ ಸರ್ಕಾರ ಕೈಗೊಂಡ ಕ್ರಮಗಳು
– ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಆದೇಶ
– ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿಗಳ ಸಾಗಣೆ ಸ್ಥಗಿತ
– ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿ ಮಾಂಸ, ಮೇವು ಸಾಗಣೆ ಸ್ಥಗಿತ
– ಇಂಥ ಪ್ರದೇಶದ ಸುತ್ತಲಿನ 10 ಕಿ.ಮೀ. ಅನ್ನು ರೋಗ ನಿಗಾ ವಲಯ ಎಂದು ಘೋಷಣೆ
ಪರಿಣಾಮವೇನು?
ಸೋಂಕಿತ ಹಂದಿಗಳು ಸಾಯಲಾರಂಭಿಸುತ್ತವೆ. ಈ ಸೋಂಕು ಮನುಷ್ಯರಿಗೆ ಹಬ್ಬುವುದಿಲ್ಲ. ಆದರೆ, ಭಾರೀ ಸಂಖ್ಯೆಯ ಹಂದಿಗಳು ಸೋಂಕಿಗೆ ಬಲಿಯಾಗುವ ಕಾರಣ, ಹಂದಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗುತ್ತದೆ. ಇದು ಹಂದಿ ಸಾಕಣೆಯನ್ನೇ ಉದ್ಯಮವಾಗಿಸಿಕೊಂಡವರಿಗೆ ಭಾರೀ ಹೊಡೆತ ನೀಡುತ್ತದೆ. ಈ ವೈರಸ್‌ಗೆ ಲಸಿಕೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.