ಜನರಿಗೆ ಬೇಕಿರುವುದು ಸ್ವಚ್ಛ ಭಾರತವಲ್ಲ ಸಚ್ ಭಾರತ
Team Udayavani, Aug 18, 2017, 8:20 AM IST
ಹೊಸದಿಲ್ಲಿ: “ದೇಶದ ಜನತೆಗೆ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ,’ ಎಂದು ಆರೋಪಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, “”ಸ್ವಚ್ಛ ಭಾರತ’ ನಿರ್ಮಿಸುವುದು ಪ್ರಧಾನಿ ನರೇಂದ್ರ ಮೋದಿ ಅವರು ಕನಸು. ಆದರೆ ಜನರಿಗೆ ಬೇಕಿರುವುದು “ಸಚ್’ (ಸತ್ಯ) ಭಾರತ,’ ಎನ್ನುವ ಮೂಲಕ ಕೇಂದ್ರದ ವಿರುದ್ಧದ ವಾಗ್ಧಾಳಿ ಮುಂದುವರಿಸಿದ್ದಾರೆ.
ಗುರುವಾರ ಬಿಹಾರ ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್ ಆಯೋಜಿಸಿದ್ದ ವಿಪಕ್ಷಗಳ ಮುಖಂಡರ ಸಭೆಯಲ್ಲಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ “ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ವಿರುದ್ಧ ಹರಿ ಹಾಯ್ದ ರಾಹುಲ್, “ಪ್ರಧಾನಿ “ಮೇಕ್ ಇನ್ ಇಂಡಿಯಾ’ ಮಂತ್ರ ಜಪಿಸುತ್ತಾರೆ. ಆದರೆ ಭಾರತ ದಲ್ಲಿ ಸಿಗುವ ಬಹುತೇಕ ಉತ್ಪನ್ನಗಳು ಚೀನದಲ್ಲಿ ತಯಾರಾಗುತ್ತವೆ,’ ಎಂದು ಟೀಕಿಸಿದ್ದಾರೆ.
“ಕಪ್ಪುಹಣವನ್ನು ದೇಶಕ್ಕೆ ತಂದು ಜನರ ಖಾತೆಗೆ ಜಮೆ, ಉದ್ಯೋಗ ಸೃಷ್ಟಿ ಸೇರಿದಂತೆ 2014ರ ಚುನಾವಣೆ ವೇಳೆ ನೀಡಿದ್ದ ಯಾವ ಆಶ್ವಾಸನೆೆಯನ್ನೂ ಬಿಜೆಪಿ ಈಡೇರಿಸಿಲ್ಲ. ಬದಲಿಗೆ ಮೋದಿಜಿ ಹೋದಲ್ಲೆಲ್ಲಾ “ಸ್ವತ್ಛ ಭಾರತ’ದ ಮಾತನಾಡುತ್ತಾರೆ. ಆದರೆ ನಮಗೆ ಸ್ವತ್ಛ ಭಾರತ ಕ್ಕಿಂತ ಮುಖ್ಯವಾಗಿ ಬೇಕಿರುವುದು “ಸಚ್ ಭಾರತ’, ಪ್ರಧಾನಿಯವರ ಸುಳ್ಳುಗಳಲ್ಲ,’ ಎಂದಿದ್ದಾರೆ. ಇದೇ ವೇಳೆ ಸಂಘ ಪರಿವಾರದ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ ರಾಹುಲ್, “ಆರ್‌ಎಸ್‌ಎಸ್‌ನವರು ದೇಶದ ಸಂವಿಧಾನವನ್ನೇ ಬದಲಿಸುವ ಸಂಚು ನಡೆಸುತ್ತಿದ್ದಾರೆ. ಅವರು “ಭಾರತ ನನ್ನದು’ ಎಂದರೆ ನಾವು “ನಾನು ಭಾರತಕ್ಕೆ ಸೇರಿದವನು’ ಎನ್ನುತ್ತೇವೆ. ಇದುವೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸ,’ ಎಂದು ಹೇಳಿದ್ದಾರೆ.
ಒಂದಾದ ವಿಪಕ್ಷಗಳು
ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ರಾಹುಲ್ ಆರೋಪಿಸಿರುವ ಬೆನ್ನಲ್ಲೇ ಈ ವಿಷಯವಾಗಿ ಪ್ರಧಾನಿ ಮೋದಿ ನೇತೃ ತ್ವದ ಬಿಜೆಪಿ ಸರಕಾರದ ವಿರುದ್ಧ ಸಾಂ ಕ ಹೋರಾಟ ನಡೆಸಲು ವಿರೋಧ ಪಕ್ಷಗಳ 12ಕ್ಕೂ ಹೆಚ್ಚು ಮುಖಂಡರು ಒಂದಾಗಿದ್ದಾರೆ. ಕಾರ್ಯಕ್ರಮದಲ್ಲಿ ಯೆಚೂರಿ, ಡಿ.ರಾಜಾ, ಫಾರೂಕ್ ಅಬ್ದುಲ್ಲಾ ಮತ್ತಿತರರು ಭಾಗಿಯಾಗಿದ್ದರು. ಇದೇ ವೇಳೆ, ಈ ಸಮ್ಮೇಳನವನ್ನು “ಭಯಪೀಡಿತ ಜನರ ಮೈತ್ರಿ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.