ಲೆನಿನ್ ಪ್ರತಿಮೆ ಇರಿಸಿದವರೇ ತೆಗೆಸಿದ್ದಾರೆ:ಬಿಜೆಪಿ ನಾಯಕ ವಿವಾದ
Team Udayavani, Mar 9, 2018, 11:26 AM IST
ಹೊಸದಿಲ್ಲಿ : ತ್ರಿಪುರದ ಬೆಲೋನಿಯಾದಲ್ಲಿ ನಡೆದಿದ್ದ ಪ್ರತಿಮೆ ಧ್ವಂಸ ಕುರಿತಾದ ವರದಿಗಳನ್ನು ತಪ್ಪೆಂದು ಹೇಳಿರುವ ಬಿಜೆಪಿಯ ರಾಮ ಮಾಧವ್ ಅವರ “ಲೆನಿನ್ ಪ್ರತಿಮೆಯನ್ನು ಸ್ಥಾಪಿಸಿದವರೇ ಅದನ್ನು ತೆಗೆದಿದ್ದಾರೆಯೇ ಹೊರತು ಪ್ರತಿಮೆ ಧ್ವಂಸ ಕೃತ್ಯ ನಡೆದಿಲ್ಲ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಸಿಪಿಎಂ ನ ಮಾಣಿಕ್ ಸರ್ಕಾರ್ ಅವರು ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಅವಕಾಶ ಮಾಡಿಕೊಟ್ಟ ಮರುದಿನವೇ ಬಲೋನಿಯಾ ಕಾಲೇಜು ಚೌಕದಲ್ಲಿದ್ದ ವ್ಲಾದಿಮಿರ್ ಲೆನಿನ್ ಅವರ ಪ್ರತಿಮೆಯನ್ನು ಬುಲ್‌ಡೋಜರ್ ಮೂಲಕ ಕಿತ್ತೆಸೆಯಲಾದ ವಿಡಿಯೋ ಚಿತ್ರಿಕೆ ದೇಶಾದ್ಯಂತ ಭಾರೀ ಸುದ್ದಿ ಮಾಡಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
“ಲೆನಿನ್ ಪ್ರತಿಮೆಯನ್ನು ಯಾರು ಸ್ಥಾಪಿಸದ್ದರೋ ಅವರೇ ಅದನ್ನು ತೆಗೆಸಿದ್ದಾರೆ. ಇದು ಪ್ರತಿಮೆ ಧ್ವಂಸದ ಕೃತ್ಯವಲ್ಲ. ತ್ರಿಪುರದಲ್ಲಿ ಎಲ್ಲಿಯೂ ಯಾವುದೇ ಪ್ರತಿಮೆಯನ್ನು ಧ್ವಂಸ ಮಾಡಲಾಗಿಲ್ಲ. ಲೆನಿನ್ ಪ್ರತಿಮೆ ಧ್ವಂಸ ಮಾಡಲಾಯಿತೆಂಬ ಮಾಹಿತಿ ಸರಿಯಲ್ಲ. ಖಾಸಗಿ ಜಾಗದಲ್ಲಿ ಆ ಪ್ರತಿಮೆಯನ್ನು ಹಾಕಿಸಿದವರೇ ಅದನ್ನು ತೆಗೆಸಿದ್ದಾರೆ. ಆದುದರಿಂದ ಇದು ಪ್ರತಿಮೆ ಭಂಜನೆ ಕೃತ್ಯವಲ್ಲ’ ಎಂದು ರಾಮ ಮಾಧವ್ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಚಿತ್ರವೆಂದರೆ ಲೆನಿನ್ ಪ್ರತಿಮೆ “ಧ್ವಂಸ’ ವರದಿ ಎಲ್ಲೆಡೆ ಹರಡುತ್ತಲೇ ಪೆರಿಯಾರ್, ಡಾ. ಬಿ ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಶ್ಯಾಮಪ್ರಸಾದ್ ಮುಖರ್ಜಿ ಅವರ ಪ್ರತಿಮೆಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದರು. ಅದಾಗಿ ಈಗ ಹನುಮಾನ್ ದೇವರ ವಿಗ್ರಹ ಕೂಡ ದುಷ್ಕರ್ಮಿಗಳ ದಾಳಿಗೆ ಗುರಿಯಾದ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.