ಮಾಹಿತಿ ಮೂಲವನ್ನೇ ಕೊಡಿ: ವಾಟ್ಸ್‌ಆ್ಯಪ್‌ಗೆ ಒತ್ತಡ ಹೇರಲು ಸರಕಾರ ಚಿಂತನೆ
Team Udayavani, Nov 2, 2019, 6:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಪೆಗಸಸ್ ಸ್ಪೈ ಸಾಫ್ಟ್ವೇರ್ ಮೂಲಕ ಭಾರತ ಸಹಿತ 20 ದೇಶಗಳ ರಾಷ್ಟ್ರಗಳಲ್ಲಿ ವಾಟ್ಸ್ ಆ್ಯಪ್ ಬಳಕೆದಾರರ ಮೇಲೆ ಕನ್ನ ಹಾಕಿದ್ದ ಬಗ್ಗೆ ಮಾಹಿತಿ ನೀಡದೇ ಇರುವುದಕ್ಕೆ ಕೇಂದ್ರ ಸರಕಾರ ಅಸಂತೋಷಗೊಂಡಿದೆ. ಮಾಹಿತಿಯ ಮೂಲ ಪತ್ತೆ ಮಾಡುವುದರ ಬಗ್ಗೆಯೇ ಸಂಸ್ಥೆಯಿಂದ ಖಚಿತ ಭರವಸೆ ಪಡೆದುಕೊಳ್ಳುವ ಬಗ್ಗೆ ಕೂಡ ಸರಕಾರ ಚಿಂತನೆ ನಡೆಸಿದೆ.
ನಾಗರಿಕರ ಖಾಸಗಿತನ ರಕ್ಷಿಸುವ ನಿಟ್ಟಿನಲ್ಲಿ ವಾಟ್ಸ್‌ಆ್ಯಪ್ ಜತೆಗೆ ಜೂನ್‌ನಿಂದ ಚರ್ಚಿಸಲಾಗುತ್ತಿದ್ದರೂ ಸಂಸ್ಥೆ ಮಾಹಿತಿ ನೀಡಿಯೇ ಇರಲಿಲ್ಲ ಎಂದು ಹಿರಿಯ ಅಧಿಕಾರಿ ಶುಕ್ರವಾರ ಹೇಳಿದ್ದಾರೆ. ಕನ್ನ ಹಾಕಲಾಗಿರುವ ಮಾಹಿತಿ ಬಹಿರಂಗದ ಸಮಯವನ್ನೂ ಕೇಂದ್ರ ಪ್ರಶ್ನೆ ಮಾಡಿದೆ. ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸೂಕ್ತ ಕಾನೂನು ರಚಿಸಲು ಸುಪ್ರೀಂಕೋರ್ಟ್‌ನಿಂದ 3 ತಿಂಗಳ ಸಮಯ ಕೋರಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಬರಲಿದೆ ಫಿಂಗರ್‌ಪ್ರಿಂಟ್ ಲಾಕ್
ಆ್ಯಂಡ್ರಾಯ್ಡ ವ್ಯವಸ್ಥೆ ಇರುವ ಮೊಬೈಲ್‌ಗಳಲ್ಲಿ ವಾಟ್ಸ್‌ಆ್ಯಪ್ ಅನ್ನು ಬಳಸುವವರು ಫಿಂಗರ್ ಪ್ರಿಂಟ್ ಲಾಕ್ ಅನ್ನು ಅಳವಡಿಸಲಾಗಿದೆ. ಗ್ರಾಹಕರ ಖಾಸಗಿತನ ರಕ್ಷಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಭಾರತದಲ್ಲಿ ಶೀಘ್ರವೇ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಲಾಗಿದೆ.
ಚಾಟ್ ಮಾಡಿರುವುದು, ಸಂದೇಶ ರವಾನೆಯನ್ನು ಹ್ಯಾಕ್ ಆಗುವುದರಿಂದ ರಕ್ಷಿಸಲು ಈ ವ್ಯವಸ್ಥೆ ನೆರವಾಗಲಿದೆ. ಈ ವ್ಯವಸ್ಥೆಯನ್ನು ಹೊಂದಲು ಗ್ರಾಹಕರು ಮೊದಲು ವಾಟ್ಸ್ ಆ್ಯಪ್ ಅಪ್‌ಡೇಟ್ ಮಾಡಬೇಕು. ಅನಂತರ ಸೆಟ್ಟಿಂಗ್ಸ್‌ಗೆ ಹೋಗಿ ಪ್ರೈವೆಸಿನಲ್ಲಿ ಫಿಂಗರ್ ಪ್ರಿಂಟ್‌ನಲ್ಲಿ ಲಾಕ್‌ನಲ್ಲಿ ಗ್ರಾಹಕರು ತಮ್ಮ ಬೆರಳನ್ನು ಇರಿಸಿ ತಮಗೆ ಬೇಕಾದ ಸಮಯಕ್ಕೆ ಅನುಗುಣವಾಗಿ ಆ್ಯಪ್ ಅನ್ನು ಅಲ್‌ಲಾಕ್ ಮಾಡಿಕೊಳ್ಳುವ ವ್ಯವಸ್ಥೆ ಪರಿಚಯಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.