ನಾಳೆಯಿಂದ ಏನೇನು ನಿಯಮ ಬದಲು?
Team Udayavani, Mar 31, 2022, 8:25 AM IST
ಇದೇ ಎ. 1ರಿಂದ 2022-23ನೇ ಆರ್ಥಿಕ ವರ್ಷ ಆರಂಭವಾಗಲಿದೆ. ಹಲವಾರು ಯೋಜನೆಗಳಲ್ಲಿನ ನಿಯಮಗಳು ಬದಲಾವಣೆಯಾಗಲಿವೆ. ಆಧಾರ್-ಪ್ಯಾನ್ ಲಿಂಕ್ ಮಾಡದವರಿಗೆ ದಂಡ ಪ್ರಯೋಗವಾಗಲಿದೆ. ಬದಲಾಗಲಿರುವ 5 ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇಪಿಎಫ್ ಬಡ್ಡಿ ಮೇಲೆ ತೆರಿಗೆ
ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ (ಇಪಿಎಫ್) ವಾರ್ಷಿ ಕವಾಗಿ ಜಮೆಯಾಗುವ ಹಣದ ಮೇಲೆ ತೆರಿಗೆ ವಿನಾಯಿತಿ ಮಿತಿ ವಿಧಿಸಿರುವ ಕೇಂದ್ರ ಸರಕಾರ. ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಿಗೆ ನಿಗದಿ. ಈ ಮಿತಿ ದಾಟಿದಲ್ಲಿ ಆ ಜಮೆಯಾಗುವ ಮೊತ್ತದ ಮೇಲೆ ಬರುವ ಬಡ್ಡಿಯ ಮೇಲೆ ತೆರಿಗೆ.
ತೆರಿಗೆ ವಿನಾಯಿತಿಗೆ ಕೊಕ್
ಮೊದಲ ಬಾರಿಗೆ ಗೃಹ ಸಾಲ ಪಡೆದು ಮನೆ ಕೊಳ್ಳುವವರಿಗೆ ನೀಡಲಾಗುತ್ತಿದ್ದ ತೆರಿಗೆ ವಿನಾಯಿತಿ ಸೌಲಭ್ಯಕ್ಕೆ ಕೊಕ್. 2019-20ರ ಬಜೆಟ್‌ನಲ್ಲಿ ಈ ಸೌಲಭ್ಯ ಘೋಷಿಸಲಾಗಿತ್ತು. ಅದರಂತೆ, ಮೊದಲ ಬಾರಿ ಗೃಹ ಸಾಲ ಪಡೆದು ಮನೆ ಕೊಳ್ಳು ವವರಿಗೆ 1.50 ಲಕ್ಷದ ಆದಾಯ ತೆರಿಗೆ ವಿನಾಯ್ತಿ ನೀಡುವುದಾಗಿ ಕೇಂದ್ರ ಹೇಳಿತ್ತು. ಎ. 1ರಿಂದ ಆರಂಭವಾ ಗುವ 2022-23ರ ವಿತ್ತೀಯ ವರ್ಷದಲ್ಲಿ ಈ ಸೌಲಭ್ಯ ರದ್ದಾಗಲಿದೆ.
ಬಡ್ಡಿ ಬೇಕಾದರೆ ಖಾತೆ ತೆರೆಯಬೇಕು!
ಎ. 1ರಿಂದ ಅಂಚೆ ಕಚೇರಿಗಳಲ್ಲಿರುವ ಮಾಸಿಕ ಆದಾಯ ಯೋಜನೆ (ಎಂಐಎಸ್), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್), ಅಂಚೆ ಕಚೇರಿ ಟರ್ಮ್ ಠೇವಣಿ (ಟಿಡಿ) ಮೇಲಿನ ಬಡ್ಡಿಯನ್ನು ನಗದು ರೂಪದಲ್ಲಿ ನೀಡುವ ಸೌಲಭ್ಯ ನಿಲ್ಲಲಿದೆ. ಈ ಸೌಲಭ್ಯ ಪಡೆಯಲು ಈ ಯೋಜನೆಗಳ ಫಲಾನುಭವಿಗಳು ಅಂಚೆ ಕಚೇರಿ ಯಲ್ಲಿ ಅಥವಾ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುವುದು ಕಡ್ಡಾಯವಾಗಲಿದ್ದು, ಆ ಖಾತೆಗಳಿಗೆ ಬಡ್ಡಿ ಹಣ ಜಮೆಯಾಗುತ್ತದೆ. ಉಳಿತಾಯ ಖಾತೆಗಳನ್ನು ತೆರೆಯದೇ ಅದರ ವಿವರಗಳನ್ನು ಸಂಬಂಧಿಸಿದ ಅಂಚೆ ಕಚೇರಿಗೆ ನೀಡದೇ ಇದ್ದಲ್ಲಿ ಬಡ್ಡಿ ಜಮೆಯನ್ನು ತಡೆ ಹಿಡಿಯಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.
ಅನಿಲ ಬೆಲೆ ಹೆಚ್ಚಳ
ಪ್ರತಿ ತಿಂಗಳಿನಂತೆ ಈ ತಿಂಗಳೂ ಅಡುಗೆ ಅನಿಲ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಎಪ್ರಿಲ್‌ನ ಮೊದಲ ವಾರದಲ್ಲೇ ಪರಿಷ್ಕರಣೆ ಯಾಗುವ ಸಾಧ್ಯತೆಗಳಿವೆ.
ಜಿಎಸ್‌ಟಿ ನಿಯಮ ಬದಲು
ಸರಕು ಮತ್ತು ಸೇವಾ ತೆರಿಗೆಗಳಡಿ (ಜಿಎಸ್‌ಟಿ) ನೀಡಲಾಗುತ್ತಿರುವ 50 ಕೋಟಿ ರೂ.ವರೆಗಿನ ಇ- ಚಲನ್‌ಗಳ ಮಿತಿಯನ್ನು 20 ಕೋಟಿ ರೂ.ಗಳಿಗೆ ಇಳಿಸಲಾಗಿದೆ.
ಮತ್ತೇನಿದೆ?
-10 ಲಕ್ಷ ರೂ. ಮೇಲ್ಪಟ್ಟ ವ್ಯವಹಾರದ ಚೆಕ್‌ಗಳ ಪರಿಶೀಲನೆ ಕಡ್ಡಾಯಗೊಳಿಸಿದ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ).
-ಕ್ರಿಪ್ಟೋ ಕರೆನ್ಸಿಗಳಿಂದ ಬರುವ ಆದಾಯದ ಮೇಲೆ ಶೇ. 3ರಷ್ಟು ತೆರಿಗೆ.
-ನೋವು ನಿವಾರಕ, ಆ್ಯಂಟಿ ಬಯೋಟಿಕ್ಸ್, ಫಿನೋಬಾರ್ಬಿಟೋನ್, ಫಿನಿಟೋಯಿನ್ ಸೋಡಿಯಂ, ಅರಿತ್ರೋಮೈಸಿನ್, ಸಿಪ್ರೋಫ್ಲೋಕ್ಸಾಸಿನ್, ಆ್ಯಂಟಿ ವೈರಲ್ ಔಷಧಗಳ ಬೆಲೆ ಹೆಚ್ಚಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.