ಆಧಾರ್ ಇದ್ದರೆ ತಪ್ಪೇನು?
Team Udayavani, Feb 8, 2018, 8:15 AM IST
ನವದೆಹಲಿ: ಆಧಾರ್ ಸಂಬಂಧಿ ದೂರುಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಪೀಠವು ದೇಶಕ್ಕೊಂದೇ ಗುರುತಿನ ಚೀಟಿಯಾಗಿ ಆಧಾರ್ ಇದ್ದರೆ ತಪ್ಪೇನು? ನಾವೆಲ್ಲರೂ ಭಾರತೀಯರೇ ಅಲ್ಲವೇ ಎಂದು ಅಭಿಪ್ರಾಯಪಟ್ಟಿದೆ. ಆಧಾರ್ ಇಲ್ಲದಿದ್ದರೆ ವ್ಯಕ್ತಿಯನ್ನು ದೇಶವಿರೋಧಿ ಎಂದು ಪರಿಗಣಿಸುವ ಅಪಾಯವಿದೆ ಎಂದು ಆಧಾರ್ ವಿರೋಧಿಸಿ ವಾದ ಮಂಡಿಸಿದ ನ್ಯಾಯವಾದಿ ಕಪಿಲ್ ಸಿಬಲ್ಗೆ ನ್ಯಾಯಮೂರ್ತಿ ಅಶೋಕ್ ಭೂಷಣ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಆಧಾರ್ನಿಂದಾಗಿ ಒಂದು ದೇಶ ಒಂದು ಗುರುತು ಎಂಬ ಸಿದ್ಧಾಂತ ರೂಪುಗೊಂಡಿದೆ. ಇದರಿಂದಾಗಿ ವ್ಯಕ್ತಿಯು ಸರ್ಕಾರ ನೀಡಿದ ಯಾವುದೇ ಇತರ ಗುರುತಿನ ಚೀಟಿಯನ್ನು ಸಲ್ಲಿಸುವಂತಿಲ್ಲ. ಆಧಾರ್ ಒಂದೇ ಎಲ್ಲ ದಾಖಲೆಗಳಿಗಿಂತ ಪ್ರಮುಖವಾಗಲಿದೆ. ಇದು ಇಲ್ಲದಿದ್ದರೆ ವ್ಯಕ್ತಿ ಸಾಮಾಜಿಕವಾಗಿ ಮೃತನಾಗುತ್ತಾನೆ ಎಂದರು. ಇದಕ್ಕೆ ಪ್ರತಿಕ್ರಿಯಿ ಸಿದರೆ, ಇಡೀ ದೇಶಕ್ಕೆ ಒಂದೇ ಗುರುತಿನ ಚೀಟಿ ಇದ್ದರೆ ತಪ್ಪೇನು ? ನಾವೆಲ್ಲರೂ ಭಾರತೀಯರೇ ಅಲ್ಲವೆ ಎಂದು ನ್ಯಾ.ಭೂಷಣ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿ ಯಿಸಿದ ಕಪಿಲ್ ಸಿಬಲ್, ನಾವು ಭಾರತೀ ಯರು ಹೌದು. ಆದರೆ ನಾವು ಆಧಾರ್ಗೆ ಮಾತ್ರ ಸೀಮಿತವಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ವಿಷಯದ ಮೇಲೆ ಚರ್ಚೆ ನಡೆಸಿ. ದೃಷ್ಟಿಕೋನವನ್ನು ಇಲ್ಲಿ ಪ್ರಸ್ತಾಪಿಸುವುದು ಬೇಡ ಎಂದರು. ಸಬ್ಸಿಡಿಯನ್ನು ಹೊರತಾಗಿಸಿಯೂ ಇತರ ಸೇವೆಗಳಿಗೆ ಆಧಾರ್ ಬಳಸಬಹುದಾಗಿದ್ದು, ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೂ ಆಧಾರ್ ಲಿಂಕ್ ಮಾಡಲಾಗುತ್ತಿದೆ. ವ್ಯಕ್ತಿಯ ಗುರುತು ಮಾಡಲೂ ಆಧಾರ್ ಬಳಸಬಹುದಾಗಿದೆ ಎಂದು ಸಿಬಲ್ ಈ ವೇಳೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.