ವಾಟ್ಸ್‌ಆ್ಯಪ್ ಸಂದೇಶ ಸಾಕ್ಷ್ಯವಾಗಲ್ಲ
Team Udayavani, Jul 19, 2017, 4:00 AM IST
ನವದೆಹಲಿ: ಮೂಲ ಸಂದೇಶ ಅಥವಾ ಅಥವಾ ಅದರ ನಕಲು ಪ್ರತಿಯಿಲ್ಲದ ಹೊರತಾಗಿ ವಾಟ್ಸ್‌ಆ್ಯಪ್‌ನ ಫಾರ್ವರ್ಡ್ ಮೆಸೇಜ್‌ಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ಆತ್ಮಹತ್ಯೆ ಪತ್ರದಲ್ಲಿ ಮಾಡಿದ್ದಾರೆ ಎನ್ನಲಾದ ಕೆಲವು ಆರೋಪಗಳ ಕುರಿತಂತೆ ಕೇಸು ದಾಖಲಿಸಲು ಅರುಣಾಚಲ ಪ್ರದೇಶ ಸರ್ಕಾರ, ಅಲ್ಲಿನ ಪೊಲೀಸರು, ದೆಹಲಿ ಪೊಲೀಸರು ಹಾಗೂ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪುಲ್ ಅವರ ಆತ್ಮಹತ್ಯೆ ಪತ್ರ ಇಂಗ್ಲಿಷ್‌ನಿಂದ ಹಿಂದಿಗೆ ತರ್ಜುಮೆ ಮಾಡಿದ ಟೈಪಿಂಗ್ ಪ್ರತಿಯಾಗಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಇದನ್ನೇ ಅರ್ಜಿದಾರರು, ಆರೋಪಕ್ಕೆ ಸಾಕ್ಷ್ಯವೆಂದು ಕೋರ್ಟ್‌ಗೆ ಹಾಜರು ಪಡಿಸಿದ್ದರು. ಆದರೆ ವಾಟ್ಸ್‌ಆ್ಯಪ್‌ನ ಈ ಫಾರ್ವರ್ಡ್ ಮೆಸೇಜ್‌ನ ಪ್ರತಿಯನ್ನು 1872ರ ಸಾಕ್ಷ್ಯ ಕಾಯ್ದೆ ಅಡಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ವಾಟ್ಸ್‌ಆ್ಯಪ್‌ನಲ್ಲಿ ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿಯ ಬಗ್ಗೆ ಅಥವಾ ಸಂದೇಶ ಹುಟ್ಟಿಕೊಂಡ ಮೂಲದ ಬಗ್ಗೆ ಮಾಹಿತಿಗಳು ಇಲ್ಲವಾದ್ದರಿಂದ ಅರ್ಜಿದಾರರು ಸ್ವೀಕರಿಸಿದ ಪ್ರತಿಯನ್ನೇ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…