ಮೋದಿ ಸ್ವಾತಂತ್ರ್ಯ ಭಾಷಣದ ವೇಳೆ ತೇಲಿ ಬಂದ ಕರಿ ಗಾಳಿಪಟ
Team Udayavani, Aug 15, 2017, 4:23 PM IST
ಹೊಸದಿಲ್ಲಿ : ಇಲ್ಲಿನ ಐತಿಹಾಸಿಕ ಕೆಂಪು ಕೋಟೆಯ ಮೇಲಿನಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಸ್ವಾತಂತ್ರ್ಯ ದಿನದ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕಪ್ಪು ಗಾಳಿಪಟವೊಂದು ಹಾರಿ ಬಂದು ವೇದಿಕೆಯ ಕೆಳಭಾಗದಲ್ಲಿ ಬಿತ್ತು. ಪರಿಣಾಮವಾಗಿ ಮೋದಿ ಅವರ ಭಾಷಣಕ್ಕೆ ಕೊಂಚ ಕಾಲ ತಡೆ ಉಂಟಾಯಿತು.
ಕಪ್ಪು ಗಾಳಿಪಟ ನಿಧಾನವಾಗಿ ತೇಲಿಕೊಂಡು ಬಂದು ವೇದಿಕೆಯ ಕೆಳಭಾಗದಲ್ಲಿ ಬಿತ್ತು; ಅದರಿಂದ ಏನೂ ತೊಂದರೆ, ಅಡಚಣೆ ಉಂಟಾಗಲಿಲ್ಲ; ಪ್ರಧಾನಿ ಮೋದಿ ಒಂದಿನಿತೂ ವಿಚಲಿತರಾಗದೆ ನಿರಾತಂಕವಾಗಿ ತಮ್ಮ ಭಾಷಣವನ್ನು ಮುಂದುವರಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಪ್ರಧಾನಿ ಮೋದಿ ಅವರು ಸುಮಾರು 54 ನಿಮಿಷಗಳ ಕಾಲ ನಿರರ್ಗಳ ಭಾಷಣ ಮಾಡಿದರು. ಆದರೆ 2014ರ ಬಳಿಕದಲ್ಲಿ ಅವರು ಮಾಡಿರುವ ಕಡಿಮೆ ಅವಧಿಯ ಭಾಷಣವೆಂದು ಇದು ದಾಖಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ