ವಯಸ್ಕರ ಚಿತ್ರ ನೋಡುವಾಗ ಸಿಕ್ಕಿ ಬಿದ್ದಿದ್ದ ಪರ್ರಿಕರ್‌ !


Team Udayavani, Nov 15, 2017, 4:05 PM IST

Manohar.jpg

ಪಣಜಿ : ಬಿಜೆಪಿಯ ಸಜ್ಜನ ಸರಳ ರಾಜಕಾರಣಿ, ಮಾಜಿ ರಕ್ಷಣಾ ಸಚಿವ, ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ತನ್ನ ತಾರುಣ್ಯದಲ್ಲಿ ಎಲ್ಲ ಪಡ್ಡೆಹುಡುಗರಂತೆ ವಯಸ್ಕರ ಚಿತ್ರಗಳನ್ನು ನೋಡುತ್ತಿದ್ದರಂತೆ. ಈ ಅನುಭವವನ್ನು ಮಕ್ಕಳ ದಿನಾಚರಣೆಯಂದು ಪರ್ರಿಕರ್‌ ಅವರೇ ಬಹಿರಂಗಪಡಿಸಿದ್ದಾರೆ.

ಪಣಜಿಯಲ್ಲಿ ಶಾಲಾ ಮಕ್ಕಳೊಂದಿಗೆ ಮಾತನಾಡಿದ ಪರ್ರಿಕರ್‌ ‘ನಾನು ಆ ಕಾಲದ ವಯಸ್ಕರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ನೀವೀಗ ಮನೆಗಳಲ್ಲಿ ಟಿವಿಯಲ್ಲಿ ಏನು ನೋಡುತ್ತಿದ್ದಿರೋ ಅದು ನನ್ನ ತಾರುಣ್ಯದ ಕಾಲದಲ್ಲಿ ವಯಸ್ಕರ ಚಿತ್ರ ವಾಗಿತ್ತು’ ಎಂದರು. 

‘ಆ ಕಾಲದಲ್ಲಿ ನಾನು ಮತ್ತು ನನ್ನ ಸಹೋದರ ವಯಸ್ಕರ ಚಿತ್ರ ನೋಡಲೆಂದು ಚಿತ್ರ ಮಂದಿರಕ್ಕೆ ತೆರಳಿದ್ದೆವು. ಇಂಟರ್ವಲ್‌ ವೇಳೆ ಚಿತ್ರಮಂದಿರದಲ್ಲಿ ಲೈಟ್‌ ಹಾಕಿದಾಗ ನಮ್ಮ ಸೀಟ್‌ ಪಕ್ಕದಲ್ಲೇ ನೆರೆಮನೆಯ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಆ ವ್ಯಕ್ತಿ ಪ್ರತಿ ದಿನ ನನ್ನ ತಾಯಿಯನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದ. ಆತನನ್ನು ನೋಡಿ ನಾನು, ನನ್ನ ಸಹೋದರನ ಬಳಿ ನಾವಿಂದು ಸತ್ತೆವು ಎಂದಿದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು. 

ಕೂಡಲೇ ತಮ್ಮ ಅವಧೂತ್‌ ಮತ್ತು ನಾನು  ಚಿತ್ರಮಂದಿರದಿಂದ ಪಲಾಯನಗೈದು ಮನೆಗೆ ಹೋಗಿ ಒಂದು ಕಥೆ ಕಟ್ಟಿದೆವು. ‘ಅಮ್ಮಾ ನಾವಿಂದು ಸಿನಿಮಾಗೆಂದು ಹೋಗಿದ್ದೆವು, ಆದರೆನಮಗೆ ಅಲ್ಲಿ ಹೋದ ಬಳಿಕ ಆ ಚಿತ್ರ ಅಸಹ್ಯ ಎಂದು ತಿಳಿದು ಅರ್ಧದಲ್ಲೇ ವಾಪಾಸ್‌ ಬಂದೆವು’ ಎಂದು ಪಾರಾಗಿದ್ದೆವು.

ಮರು ದಿನ ಆ ವ್ಯಕ್ತಿ ಬಂದು ‘ನಿಮ್ಮ ಮಕ್ಕಳು ಚಿತ್ರ ನೋಡಲು ತೆರಳಿದ್ದರು’ ಎಂದು ಚಾಡಿ ಹೇಳಿದ. ಅದಕ್ಕೆ ನಮ್ಮ ತಾಯಿ ಪ್ರತಿಕ್ರಿಯಿಸಿ ‘ನನಗೆ ಗೊತ್ತು ನನ್ನ ಮಕ್ಕಳು ಹೋಗಿ ವಾಪಾಸ್‌ ಬಂದಿದ್ದು, ನೀನೇಕೆ ಆ ಚಿತ್ರ ನೋಡಲು ಹೋಗಿದ್ದೆ ಎಂದು ಆತನನ್ನೇ ಮರು ಪ್ರಶ್ನಿಸಿ ಶಾಕ್‌ ನೀಡಿದರು’ ಎಂದು ಪರ್ರಿಕರ್‌ ತಮ್ಮ ಅನುಭವವನ್ನು ಸಂಕೋಚವಿಲ್ಲದೆ ಬಿಚ್ಚಿಟ್ಟರು. 

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.