ಮೂರು ವರ್ಷಗಳಲ್ಲಿ ಚೀನಕ್ಕೆ ಆರ್ಥಿಕ ಹಿಂಜರಿತ; ಭಾರತಕ್ಕಿಲ್ಲ ಆತಂಕ
Team Udayavani, Jun 22, 2018, 9:40 AM IST
ಹೊಸದಿಲ್ಲಿ: ಮುಂದಿನ ಮೂರು ವರ್ಷಗಳಲ್ಲಿ ಹಾಂಕಾಂಗ್ ಮತ್ತು ಚೀನ ಮಾರುಕಟ್ಟೆಗಳು ಆರ್ಥಿಕ ಹಿಂಜರಿತದತ್ತ ಸರಿಯಲಿವೆ. ಏಷ್ಯಾ ದೇಶಗಳಾಗಿರುವ ಭಾರತ ಮತ್ತು ದಕ್ಷಿಣ ಕೊರಿಯಾಗಳಿಗೆ ಈ ಆತಂಕ ಇಲ್ಲ. ಅವುಗಳು ಸುರಕ್ಷಿತವಾಗಿವೆ ಎಂದು ನೊಮುರಾ ಸಿಂಗಾಪುರ್ ಲಿಮಿಟೆಡ್ ನಡೆಸಿದ ಅಧ್ಯಯನದಲ್ಲಿ ವ್ಯಕ್ತವಾಗಿದೆ.
ಸದ್ಯ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳೇ ಅಭಿವೃದ್ಧಿ ಹೊಂದಿದ ದೇಶಗಳ ಮಾರುಕಟ್ಟೆಗಿಂತ ಅಪಾಯದಲ್ಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ‘ಹಾಂಕಾಂಗ್ ಮತ್ತು ಚೀನದ ಅರ್ಥ ವ್ಯವಸ್ಥೆ ಮುಂದಿನ 3 ವರ್ಷಗಳಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ. ಎರಡೂ ದೇಶಗಳಲ್ಲಿ ದೇಶೀಯವಾಗಿ ಹಲವು ವಸ್ತುಗಳಿಗೆ ಬೇಡಿಕೆ ಕುಸಿಯಲಿದೆ. 1997-98ನೇ ವಿತ್ತೀಯ ವರ್ಷದಲ್ಲಿ ಏಷ್ಯಾದ ಹಣಕಾಸು ವ್ಯವಸ್ಥೆ ಅನುಭವಿಸಿದ್ದ ಪರಿಸ್ಥಿತಿಯನ್ನೇ ಅನುಭವಿಸಲಿದೆ’ ಎಂದು ನೋಮುರಾ ಸಂಸ್ಥೆಯ ಸುಬ್ಬರಾಮನ್ ಮತ್ತು ಮೈಕೆಲ್ ಲೂ ನಡೆಸಿದ ಅಧ್ಯಯದಲ್ಲಿ ಪ್ರಸ್ತಾವಿಸಿದ್ದಾರೆ. 1990ರ ಬಳಿಕ ಜಗತ್ತಿನ 30 ದೇಶಗಳ ಅರ್ಥ ವ್ಯವಸ್ಥೆ, ಅಭಿವೃದ್ಧಿಯಾಗುತ್ತಿರುವ ಅರ್ಥ ವ್ಯವಸ್ಥೆಗಳನ್ನು ಅಧ್ಯಯನ ನಡೆಸಿದ ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್ ನಡೆಸಿದ ಅಧ್ಯಯನವನ್ನು ಆಧರಿಸಿ ನೊಮುರಾದ ಆರ್ಥಿಕ ವಿಶ್ಲೇಷಕರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಥಾಯ್ಲೆಂಡ್, ಕೊಲಂಬಿಯಾ ಮತ್ತು ಫಿಲಿಪ್ಪೀನ್ಸ್ ಕ್ರಮವಾಗಿ 21, 20 ಮತ್ತು 19ನೇ ಸ್ಥಾನಗಳನ್ನು ಹೊಂದಿ ಹಣಕಾಸು ವಹಿವಾಟುಗಳಿಗೆ ತೃಪ್ತಿದಾಯಕ ವಲ್ಲದ ಸ್ಥಾನಗಳನ್ನು ಪಡೆದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.