ಉಪರಾಷ್ಟ್ರಪತಿಗೂ ಮೋಸಮಾಡಿದ್ದ ಸುಳ್ಳು ಜಾಹೀರಾತು!
Team Udayavani, Dec 30, 2017, 1:04 PM IST
ನವದೆಹಲಿ: ಸುಳ್ಳು ಜಾಹೀರಾತುಗಳಿಂದ ಉಪ ರಾಷ್ಟ್ರಪತಿಯೇ ಮೋಸ ಹೋಗಿದ್ದಾರೆ! ಅಚ್ಚರಿಯಾದರೂ ಇದು ಸತ್ಯ. ಖುದ್ದು ವೆಂಕಯ್ಯ ನಾಯ್ಡು ಅವರೇ ರಾಜ್ಯಸಭೆಯಲ್ಲಿ ಈ ವಿಚಾರ ತಿಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಉಪರಾಷ್ಟ್ರಪತಿಯಾದ ಹೊಸತರಲ್ಲಿ
ತೂಕ ಇಳಿಸುವ ಮಾತ್ರೆಗಳ ಜಾಹೀರಾತೊಂದನ್ನು ನೋಡಿದ್ದರಂತೆ. ತಕ್ಷಣವೇ ಅವನ್ನು ಕೊಳ್ಳಲು ಮುಂದಾದ ಅವರು, ಅವುಗಳಿಗೆ ನಿಗದಿಗೊಳಿಸಲಾಗಿದ್ದ 1000 ರೂ.ಗಳನ್ನು ಪಾವತಿಸಿದರಂತೆ. ಕೆಲವೇ ದಿನಗಳಲ್ಲಿ ಅವರಿಗೆ ಇ-ಮೇಲ್ ಕಳುಹಿಸಿದ ಆ ಕಂಪನಿಯು, ತೂಕವನ್ನು ಕೆಲವೇ ದಿನಗಳಲ್ಲಿ ಇಳಿಸುವ ಮ್ಯಾಜಿಕ್ ಮಾತ್ರೆಗಳೂ ಇದ್ದು ಅವಕ್ಕೆ ಮತ್ತೆ 1000 ರೂ. ಪಾವತಿಸಬೇಕು.
ಮ್ಯಾಜಿಕ್ ಮಾತ್ರೆಗಳಿಗೆ ಹಣ ಪಾವತಿಸಿದರೆ ಮಾತ್ರ ಈ ಹಿಂದೆ ಆರ್ಡರ್ ಮಾಡಿರುವ ಮಾತ್ರೆಗಳನ್ನು ಕಳುಹಿಸಲಾಗುವುದು ಎಂದು ಬರೆದಿತ್ತಂತೆ. ಇದರಿಂದ ಅನುಮಾನಗೊಂಡ ನಾಯ್ಡು, ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದರಂತೆ. ಆಗ, ನಡೆದ ತನಿಖೆಯಲ್ಲಿ ಆ ಕಂಪನಿ ಭಾರತದ್ದಾಗಿರದೇ ಅಮೆರಿಕದ್ದು ಎಂದು ಗೊತ್ತಾಯಿತಂತೆ! ಇದನ್ನು ಹೇಳಿದ ನಾಯ್ಡು, ಇಂಥ ಸುಳ್ಳು ಜಾಹೀರಾತುಗಳನ್ನು ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.