ಜುಲೈ ಮುಗಿದಿದೆ,ಲಸಿಕೆಗಳ ಕೊರತೆ ಇನ್ನೂ ನೀಗಿಲ್ಲ : ಕೇಂದ್ರದ ವಿರುದ್ಧ ರಾಹುಲ್ ಟ್ವೀಟಾಸ್ತ್ರ
Team Udayavani, Aug 1, 2021, 10:58 AM IST
ನವ ದೆಹಲಿ : ಮೂರನೇ ಅಲೆಯ ಭೀತಿಯಿಂದ ದೇಶದಲ್ಲಿ ಮತ್ತೆ ಕೋವಿಡ್ ಲಸಿಕೆಯ ಹಾಹಾಕಾರ ಎದ್ದಿದೆ. ದೇಶದ ಹಲವು ರಾಜ್ಯಗಳಲ್ಲಿ ಲಸಿಕೆಯ ಕೊರತೆ ಇದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದವರು ಈಗ ಎರಡನೇ ಡೋಸ್ ಪಡೆಯುವುದಕ್ಕೆ ಅರ್ಹತೆಯನ್ನು ಪಡೆದಿದ್ದಾರೆ, ಇನ್ನೂ ಕೂಡ ಕೆಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆಯ ಕೊರತೆ ನೀಗಿಲ್ಲ ಎಂದು, ಬೇಕಾದಷ್ಟು ಲಸಿಕೆಗಳು ರಾಜ್ಯಗಳಿಗೆ ಪೂರೈಕೆಯಾಗುತ್ತಿಲ್ಲ.
ಇದನ್ನೂ ಓದಿ : ಸತತ 5ನೇ ದಿನವೂ ಕೋವಿಡ್ ಪ್ರಕರಣ ಹೆಚ್ಚಳ.! ಕಳೆದ 24 ಗಂಟೆಗಳಲ್ಲಿ 41, 831 ಪ್ರಕರಣಗಳು ಪತ್ತೆ
ಈ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಜುಲೈ ಮುಗಿದು ಹೋಗಿದೆ, ಇನ್ನೂ ಲಸಿಕೆ ಕೊರತೆ ನೀಗಿಲ್ಲ ಎಂದು ಲಸಿಕೆಯ ಕೊರತೆಯ ವಿಸ್ತೃತ ವರದಿಯ ವೀಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿದ್ದಾರೆ.
जुलाई चला गया है, वैक्सीन की कमी नहीं गयी।#WhereAreVaccines https://t.co/0hGVAv78x4 pic.twitter.com/QKyHBMR6X4
— Rahul Gandhi (@RahulGandhi) August 1, 2021
ಈ ಹಿಂದೆ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಟಿಯಲ್ಲಿ ಕೇಂದ್ರದ ಸರ್ಕಾರದ ಮಾಜಿ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಜುಲೈ ಅಂತ್ಯದೊಳಗೆ ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಕೋವಿಡ್ ಲಸಿಕೆಗಳನ್ನು ಪೂರೈಸಲಾಗುತ್ತದೆ ಎಂದು ಭರವಸೆಯನ್ನು ನೀಡಿದ್ದರು.
ಕೇಂದ್ರ ಸರ್ಕಾರ ಭರವಸೆ ಈಡೇರದ ಹಿನ್ನೆಲೆಯಲ್ಲಿ ಹಾಗೂ ದೇಶದಾದ್ಯಂತಯ ಕೋವಿಡ್ ಲಸಿಕೆಗಳ ಕೊರತೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಟ್ವೀಟ್ಬಾಣ ಬಿಟ್ಟಿದ್ದಾರೆ.
ಇದನ್ನೂ ಓದಿ : ಗಾಯಗೊಂಡರೂ ಹೋರಾಡಿದ ಬಾಕ್ಸರ್ ಸತೀಶ್ ಕುಮಾರ್ ಗೆ ಸೋಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.