ಗೋರಕ್ಷಣೆಯ ಹಿಂಸಾಚಾರಗಳ ಬಿಸಿ ಮೋದಿಗೂ ತಟ್ಟಿದೆ: ಶಿವಸೇನೆ
Team Udayavani, Jul 20, 2017, 10:35 AM IST
ಮುಂಬಯಿ: ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಬೆಳೆಯತ್ತಿರುವ ಹಿಂಸಾಚಾರದ ಘಟನೆಗಳಿಗೆ ಶಿವಸೇನೆಯು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಾಗ, ಈ ಸ್ವಯಂಘೋಷಿತ ಗೋರಕ್ಷಕರು ಎಲ್ಲಿಗೆ ಹೋಗಿದ್ದರು ? ಎಂದು ಕೇಳಿದೆ.
ಗೋರಕ್ಷಣೆಯ ಹೆಸರಿನಲ್ಲಿ ಆರಂಭವಾದ ಈ ಹಿಂಸಾಚಾರಗಳ ಬಿಸಿಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ತಟ್ಟಿದೆ ಎಂದು ಆಡಳಿತಾರೂಢ ಎನ್‌ಡಿಎ ಮಿತ್ರಪಕ್ಷ ಶಿವಸೇನೆಯು ಬುಧವಾರ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.
ಪಾಕಿಸ್ಥಾನ ಕೂಡ ರಾಷ್ಟ್ರವನ್ನು ಗೆೋರಕ್ಷಣೆಯ ಹೆಸರಿನಲ್ಲಿ ವಿಭಜಿಸಲು ಬಯಸುತ್ತಿದೆ ಎಂದು ಪಕ್ಷ ನುಡಿದಿದೆ.
ಗೋರಕ್ಷಣೆಯ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಇತ್ತೀಚಿನ ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ ಶಿವಸೇನೆಯಿಂದ ಈ ಹೇಳಿಕೆ ಹೊರಬಂದಿರುವುದಾಗಿದೆ.
ರಾಷ್ಟ್ರದಾದ್ಯಂತ ಗೋರಕ್ಷಕರು ಸೃಷ್ಟಿಸಿರುವ ದಾಂಧಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟೀಕೆ ಎದುರಿಸಬೇಕಾಯಿತು. ಪ್ರಧಾನಿ ಅವರ ಕಟು ಎಚ್ಚರಿಕೆಯ ಹೊರತಾಗಿಯೂ ಹಿಂಸೆಯ ಘಟನೆಗಳು ನಿಲ್ಲುತ್ತಿಲ್ಲ ಎಂದು ಶಿವಸೇನೆ ಸಂಪಾದಕೀಯದಲ್ಲಿ ನುಡಿದಿದೆ.
ದೇಶದಾದ್ಯಂತ ನಿರಂತರವಾಗಿ ಮುಸಲ್ಮಾನರ ಮೇಲೆ ಗೋಮಾಂಸ ಸಾಗಣೆಯ ಸಂಶಯದ ಮೇರೆಗೆ ದಾಳಿ ನಡೆಸಿ, ಅವರ ಪ್ರಾಣ ತೆಗೆದುಕೊಳ್ಳಲಾಗುತ್ತಿದೆ. ಜನರು ಇದನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ಭಾರತದಲ್ಲಿ ಜನರು ಗೋರಕ್ಷಣೆಯ ಹೆಸರಿನಲ್ಲಿ ವಿಭಜನೆಯಾಗಬೇಕೆಂದು ಪಾಕಿಸ್ಥಾನ ಬಯಸುತ್ತಿದೆ. ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರುವ ಸಮಯದಲ್ಲಿ ದೇಶದ ಆಂತರಿಕ ಜಗಳವು ರಾಷ್ಟ್ರದ ಏಕತೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಶಿವಸೇನೆ ಅಭಿಪ್ರಾಯವಾಗಿದೆ.
ಪ್ರಧಾನಮಂತ್ರಿ ಮೋದಿ ಅವರ ಗೃಹ ರಾಜ್ಯ ಗುಜರಾತ್‌ನಲ್ಲೂ ಗೋರಕ್ಷಕರು ಹಸುವಿನ ರಕ್ಷಣೆಯ ಹೆಸರಿನಲ್ಲಿ ಜನರನ್ನು ನಿಷ್ಕರುಣೆಯಿಂದ ಕೊಂದಿದ್ದಾರೆ. ಆದರೆ, ಆ ರಾಜ್ಯದ ಜನರು ಅಮರನಾಥ ಯಾತ್ರೆಯ ವೇಳೆ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಾಗ, ಅವರು (ಗೋರಕ್ಷಕರು) ಎಲ್ಲಿಗೆ ಹೋಗಿದ್ದರು ? ಎಂದು ಶಿವಸೇನೆ ತನ್ನ ಮುಖವಾಣಿಯ ಸಂಪಾದಕೀಯದಲ್ಲಿ ಕೇಳಿದೆ.
ಗೋರಕ್ಷಕರು ಪ್ರತಿಯೊಂದು ಮಟ್ಟದಲ್ಲೂ ಸಾಹಸವನ್ನು ಪ್ರದರ್ಶಿಸಬೇಕು. ಧರ್ಮದ ಹೆಸರಿನಲ್ಲಿ ಗೋರಕ್ಷಣೆ ಆವಶ್ಯಕ ಎಂದಾದರೆ, ಧರ್ಮದ ಹೆಸರಿನಲ್ಲಿ ರಾಷ್ಟ್ರದ ರಕ್ಷಣೆಯೂ ಅವಶ್ಯಕವಾಗುತ್ತದೆ ಎಂದು ಪಕ್ಷ ಪ್ರತಿಪಾದಿಸಿದೆ.
ಗೋರಕ್ಷಕರು ಪ್ರಧಾನಿಯವರ ದಾರಿಗೆ ಮುಳುವಾಗು ತ್ತಿದ್ದಾರೆ. ಅವರ ಎಚ್ಚರಿಕೆಯ ಹೊರತಾಗಿಯೂ ಇವರು ತಮ್ಮ ಕೈಗೆಲಸವನ್ನು ಬಿಡುತ್ತಿಲ್ಲ ಎಂದು ಶಿವಸೇನೆ ನುಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.