ಕೋವಿಡ್ 19 : ಭಾರತದಲ್ಲಿ ಸೋಂಕಿತರ ಚಿಕಿತ್ಸಗೆ  ವೈದ್ಯಕೀಯ ಸಿಬ್ಬಂದಿಗಳ ಕೊರತೆ ?!

ಆಮ್ಲಜನಕದ ಕೊರತೆಯಿಂದ ಹೈರಾಣಾಗಿದೆ ಭಾರತ ..!

ಶ್ರೀರಾಜ್ ವಕ್ವಾಡಿ, Apr 29, 2021, 9:08 PM IST

While India fights oxygen shortage, another challenge lurks in the shadows

ನವ ದೆಹಲಿ : ಕೋವಿಡ್ 19 ಸೋಂಕಿನ ಎರಡನೇ ಅಲೆ ಇಡೀ ಭಾರತವನ್ನು ಹೈರಾಣಾಗಿಸಿದೆ. ಆಮ್ಲಜನಕ, ಕೋವಿಡ್ ಲಸಿಕೆಗಳ ಕೊರತೆ ಇದೆ ಎಂದು ಆರೋಪಗಳು ಕೇಳಿ ಬರುತ್ತಿರುವುದರ ನಡುವೆ ವೈದ್ಯಕೀಯ ಸಿಬ್ಬಂದಿಗಳ ಕೊರತೆಯೂ ಕೂಡ ಎದುರಾಗಬಹುದೆಂಬ ಆತಂಕಕಾರಿ ವಿಷಯವನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸದ್ಯ, ಭಾರತದಲ್ಲಿ ಆಕ್ಸ್‌ ಫರ್ಡ್ ನ ಲಸಿಕೆಯಾದ ಕೋವಿಶೀಲ್ಡ್ ಮತ್ತು ಭಾರತದಲ್ಲಿ ತಯಾರಿಸಿದ ಕೋವಾಕ್ಸಿನ್ ಗಳೆಂಬ ಎರಡು ಲಸಿಕೆಗಳು ಲಭ್ಯವಿದೆ.

ಈ ಮೊದಲು, ಭಾರತ ಇತರೆ ದೆಶಗಳಿಗೆ  ಶೇಕಡಾ 15 ರಷ್ಟು ಲಸಿಕೆಗಳನ್ನು ರಫ್ತು ಮಾಡಲಾಗುತ್ತಿತ್ತು ಆದರೆ ಸದ್ಯಕ್ಕೆ ಭಾರತ ರಫ್ತು ನಿಲ್ಲಿಸಿದೆ. ಲಸಿಕೆಗಳ ಸರಬರಾಜು ನಿಲ್ಲಿಸದ ಕಾರಣದಿಂದಾಗಿ ದೇಶದಲ್ಲಿ ತಿಂಗಳಿಗೆ 70 ರಿಂದ 85 ಮಿಲಿಯನ್ ಲಸಿಕೆಗಳು ಮಾತ್ರ ಲಭ್ಯವಾಗುತ್ತಿದೆ.

ಇನ್ನು, ಭಾರತದ ಲಸಿಕೆ ಅಭಿಯಾನವು ಸಾರ್ವತ್ರಿಕ ವ್ಯಾಪ್ತಿಯನ್ನು ಹೊಂದಿದ್ದರೆ, ಅಂದರೆ ಎಲ್ಲಾ ವಯಸ್ಕ ಜನರಿಗೆ ಲಸಿಕೆ ಹಾಕಿದರೆ, ಅಂದಾಜಿನ ಪ್ರಕಾರ ನಮಗೆ ತಿಂಗಳಿಗೆ ಸುಮಾರು 220 ದಶಲಕ್ಷ ಡೋಸ್ ಗಳು ಬೇಕಾಗುತ್ತವೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರಲ್ಲಿ ವರದಿಯಾಗಿದೆ.

ಓದಿ : ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡುವಂತೆ ಕಂಗನಾಗೆ ರಾಖಿ ಮನವಿ

ದೇಶದ ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆಗಳ ಕೊರತೆ ಕಾಣಿಸಿಕೊಳ್ಲುತ್ತಿದ್ದು, ಸೀಮಿತ ಲಸಿಕೆಗಳ ಪೂರೈಕೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.  ಸದ್ಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ 10 ದಶಲಕ್ಷಕ್ಕೂ ಹೆಚ್ಚಿನ ಡೋಸ್ ಗಳು ಲಭ್ಯವಿದ್ದು, ಆದರೂ ಅಗತ್ಯಕ್ಕಿಂತ ಕಡಿಮೆಯಿದೆ ಎಂದು ವರದಿ ತಿಳಿಸಿದೆ.

ಆಮ್ಲಜನಕದ ಕೊರತೆಯಿಂದ ಹೈರಾಣಾಗಿದೆ ಭಾರತ ..!

ಇನ್ನು ಭಾರತವನ್ನು ಈ ಕೋವಿಡ್ ನ ಸಮಸ್ಯೆಯ ಕಾರಣದಿಂದ ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೇ, ಜೈವಿಕ ಆಮ್ಲಜನಕದ ಕೊರತೆ. ದೇಶದದಲ್ಲಿ ಆಮ್ಲಜನಕದ ಕೊರತೆಯ ಕಾಣದಿಂದ ಹಲವು ಸಾವು ನೋವಾಗಿದ್ದು, ಆಮ್ಲಜನಕವನ್ನು ಪೂರೈಸಲು ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ.

ಭಾರತೀಯ ಆಸ್ಪತ್ರೆಗಳಲ್ಲಿ ಸಾಕಷ್ಟು ಆಮ್ಲಜನಕವಿಲ್ಲ ಮತ್ತು ಕಳೆದ ವಾರ ಬಿಕ್ಕಟ್ಟು ಸ್ಫೋಟಗೊಂಡಿದ್ದು, ಆಸ್ಪತ್ರೆಗಳು ಎರಡು ಗಂಟೆ, ನಾಲ್ಕು ಗಂಟೆ, ಅಥವಾ 40 ನಿಮಿಷಗಳಲ್ಲಿ ಆಮ್ಲಜನಕ ಹೇಗೆ ಮುಗಿಯುತ್ತದೆ ಎಂಬುವುದರ ಬಗ್ಗೆ ವೈದ್ಯಕೀಯ ವರದಿಯೊಂದು ತಿಳಿಸಿದೆ.

ಭಾರತವು ದಿನಕ್ಕೆ 7,000 ಮೆಟ್ರಿಕ್ ಟನ್‌ ಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವುದರಿಂದ ಆಮ್ಲಜನಕದ ಉತ್ಪಾದಕವಾಗಿದೆ. ಆದಾಗ್ಯೂ, ಕೋವಿಡ್ ಸೋಂಕಿನ ಹಠಾತ್ ಏರಿಕೆಯ ಕಾರಣದಿಂದಾಗಿ ಇತ್ತೀಚಿನ ವಾರಗಳಲ್ಲಿ ಆಮ್ಲಜನಕದ ಬೇಡಿಕೆ ಭಾರಿ ಹೆಚ್ಚಾಗಿದೆ.

ಭಾರತದ ಕೋವಿಡ್ ಸೋಂಕಿತರಿಗೆ 13 ದಶಲಕ್ಷ ಘನ ಮೀಟರ್‌ ಗಿಂತ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ ಎಂದು ಒಂದು ಅಂದಾಜಿನ ವೈದ್ಯಕೀಯ ವರದಿ ತಿಳಿಸಿದೆ.

ಕೋವಿಡ್ ಸೋಂಕಿನ ರೂಪಾಂತರಿ ಅಲೆ ದಿನ ನಿತ್ಯ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಅವಶ್ಯಕತೆಯು ಶೇಕಡಾ 76 ರಷ್ಟು ಹೆಚ್ಚಾಗಿದೆ. ದಿನಕ್ಕೆ ಸುಮಾರು 4,000 ಮೆಟ್ರಿಕ್ ಟನ್‌ ಗಳಿಂದ ದಿನಕ್ಕೆ ಸುಮಾರು 7,000 ಮೆಟ್ರಿಕ್ ಟನ್‌ ಆಮ್ಲಜನಕದ ಅವಶ್ಯಕತೆ ಇದೆ.

ಸದ್ಯದ ಮಟ್ಟಿಗೆ ಭಾರತದಲ್ಲಿ ಆಮ್ಲಜಕನಕದ ಕೊರತೆ ಉಂಟಾಗಿದ್ದು ಸಾಕಷ್ಟು ಆಮ್ಲಜನಕವನ್ನು ಪೂರೈಸುವಲ್ಲಿ ಭಾರತ ಸರ್ಕಾರ ವಿಫಲವಾಗಿದೆ.

ಆಮ್ಲಜನಕದ ಅಭಾವದಿಂದಾಗಿ ಹಲವಾರು ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿರುವ ವರದಿಗಳು ಆಗುತ್ತಿರುವ ಬೆನ್ನಿಗೆ ಸದ್ಯಕ್ಕೆ  ಮೂರು ದೇಶಗಳಿಂದ ಈಗಾಗಲೇ 14 ಆಮ್ಲಜನಕ ಟ್ಯಾಂಕರ್‌ ಗಳು ಭಾರತಕ್ಕೆ ತಲುಪಿವೆ.

ಭಾರತವು ಈಗಾಗಲೇ 1,200 ಕ್ಕೂ ಹೆಚ್ಚು ಆಮ್ಲಜನಕ ಟ್ಯಾಂಕರ್‌ ಗಳನ್ನು ಹೊಂದಿದೆ. ವರದಿಗಳ ಪ್ರಕಾರ, ಅವು 16,000 ಮೆಟ್ರಿಕ್ ಟನ್‌ ಗಿಂತ ಹೆಚ್ಚಿನ ಲಿಕ್ವಿಡ್ ಆಮ್ಲಜನಕದ ಸಾಮರ್ಥ್ಯವನ್ನು ಹೊಂದಿವೆ.

ಸೋಂಕಿತರ ಚಿಕಿತ್ಸಗೆ  ವೈದ್ಯಕೀಯ ಸಿಬ್ಬಂದಿಗಳ ಅಭಾವ…?!

ಇನ್ನು,  ಭಾರತದಲ್ಲಿ ಪ್ರತಿದಿನ 3,00,000 ಕ್ಕೂ ಹೆಚ್ಚು ಕೋವಿಡ್ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ಸ್ಥಿತಿ ಮುಂದುವರಿದರೇ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಮಗೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿಗಳ ಕೊರತೆಯೂ ಕೂಡ ಉಂಟಾಗಬಹುದು ಎಂಬ ಎಚ್ಚರಿಕೆಯ ವರದಿ ನೀಡಿದೆ.

ಇತ್ತೀಚೆಗೆ, ಭಾರತದ ಐಐಟಿ ಯ ಕೆಲವು ವಿಜ್ಞಾನಿಗಳು ಮೇ ವೇಳೆಗೆ ಎರಡನೇ ಅಲೆ ವೇಗ ಪಡೆಯಲಿದೆ, ಮೇ 11 ಮತ್ತು 15 ರ ನಡುವೆ ಭಾರತವು 3.3 ರಿಂದ 3.5 ಮಿಲಿಯನ್ ಸಕ್ರಿಯ ಪ್ರಕರಣಗಳನ್ನು ಹೊಂದಿರಬಹುದು ಎಂದು ಅಂದಾಜಿಸಿದ್ದರು.

ಅಲ್ಲಿಯವರೆಗೆ ದೇಶವು ಅಗತ್ಯವಿರುವಷ್ಟು ಹಾಸಿಗೆಗಳು ಮತ್ತು ಆಮ್ಲಜನಕ ಟ್ಯಾಂಕರ್‌ ಗಳನ್ನು ವ್ಯವಸ್ಥೆಗೊಳಿಸಬಹುದಾದರೂ, ನುರಿತ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದಾಗಿ ಭಾರತ ತೀವ್ರ ತೊಂದರೆ ಅನುಭವಿಸುತ್ತದೆ ಎಂದು ಆತಂಕಕಾರಿ ವಿಚಾರವನ್ನು ವರದಿ ಬಹಿರಂಗ ಪಡಿಸಿದೆ.

ಸದ್ಯ, ಭಾರತದಲ್ಲಿ 1,400 ಕ್ಕೂ ಹೆಚ್ಚು ಸೋಂಕಿತರಿಗೆ  ಒಬ್ಬ ವೈದ್ಯರಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಜ್ಞರ ಶೇಕಡಾ 76 ರಷ್ಟು ಕೊರತೆ ಇದೆ.

ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸೋಂಕಿತರ ಜೀವ ಉಳಿಸಲು ಅಧಿಕಾವಧಿ ಕೆಲಸ ಮಾಡುತ್ತಿದ್ದಾರೆ. ಹೆಣಗಾಡುತ್ತಿರುವ ವೈದ್ಯಕೀಯ ತಜ್ಞರಿಗೆ ಸಹಾಯ ಮಾಡಲು ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಗಳು ಬೇಕಾಗಿದ್ದಾರೆ ಎನ್ನುವುದು ಭಾರತದ ಸದ್ಯದ ಪರಿಸ್ಥಿತಿ.

ಒಟ್ಟಿನಲ್ಲಿ ಏರುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳ ನಡುವೆ ಆಮ್ಲಜನಕ, ಲಸಿಕೆಗಳ ಕೊರತೆಯೊಂದಿಗೆ ವೈದ್ಯಕೀಯ ಸಿಬ್ಬಂದಿಗಳ ಕೊರತೆಯು ಕೂಡ ಭಾರತವನ್ನು ಕಾಡುತ್ತಿರುವುದು ಅಕ್ಷರಶಃ ಚಿಂತಾಜನಕವಾಗಿದೆ ವರದಿಯಾಗಿದೆ.

ಓದಿ : ಆಮ್ಲಜನಕದ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಿದ ಕಿರಾತಕರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.