ವೈಟ್ ಕಾಲರ್ ಜೆಹಾದಿಗಳಿಗೆ ತಡೆ
Team Udayavani, Aug 30, 2021, 6:50 AM IST
ಶ್ರೀನಗರ: ಸೈಬರ್ ಕ್ರೈಂ ಮೂಲಕವೇ ಭಯೋತ್ಪಾದನೆ ನಡೆಸುತ್ತಿರುವ “ವೈಟ್ ಕಾಲರ್ ಜೆಹಾದಿ’ಗಳ ಚಟುವಟಿಕೆಗಳೂ ಹೆಚ್ಚಾಗಿದೆ.
ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಸಿದ್ಧವಾಗಿದೆ. ಈ ಬಗ್ಗೆ ಮಾತನಾಡಿದ ಡಿಜಿಪಿ ದಿಲ್ಬಾಗ್ ಸಿಂಗ್ “ಎಲ್ಲ ಉಗ್ರರಿಗಿಂತ ಅತೀ ಅಪಾಯಕಾರಿ ಉಗ್ರರೆಂದರೆ ಅದು ವೈಟ್ ಕಾಲರ್ ಜೆಹಾದಿಗಳು. ಅವರು ಯಾವುದೋ ಮೂಲೆಯಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕವೇ ಯುವಕರ ಬ್ರೈನ್ವಾಶ್ಮಾಡಿ, ಭಯೋತ್ಪಾದನೆಯ ಹಾದಿಗೆ ತಳ್ಳುತ್ತಾರೆ. ಸುಳ್ಳು ಮಾಹಿತಿ ಹಂಚುತ್ತಾರೆ ಎಂದು ಹೇಳಿದ್ದಾರೆ.
ಶಸ್ತ್ರಾಸ್ತ್ರ ಹಿಡಿದು ಯುದ್ಧಭೂಮಿಯಲ್ಲಿ ಮಾಡುವ ಹೋರಾಟ ಇದಲ್ಲ. ಬದಲಾಗಿ ಮೊಬೈಲ್, ಕಂಪ್ಯೂಟರ್ನಲ್ಲೇ ಯುದ್ಧ ಮಾಡಬೇಕಾಗಿದೆ. ಅಂಥವರ ಬಗ್ಗೆ ನಿಖರ ಮಾಹಿತಿ ಸಿಗದೆ ಕ್ರಮ ತೆಗೆದುಕೊಳ್ಳಲೂ ಸಾಧ್ಯವಿಲ್ಲ. ನಿಖರ ಮಾಹಿತಿ ಹುಡುಕುವುದೂ ಕಷ್ಟದ ಕೆಲಸವೇ. ವೈಟ್ ಕಾಲರ್ ಜೆಹಾದಿಗಳನ್ನು ಸದೆಬಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆಂದು ಅವರು ರವಿವಾರ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಐವರು ಶಂಕಿತ ವೈಟ್ ಕಾಲರ್ ಜೆಹಾದಿಗಳನ್ನು ಬಂಧಿಸಿದ್ದರು. ಸಾರ್ವಜನಿಕರಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಂಡು ಅವರಿಗೂ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡುವಂತೆ ತಿಳಿಸಲಾಗಿದೆ. ಈ ಯೋಜನೆ ಫೆಬ್ರವರಿಯಿಂದಲೇ ಆರಂಭವಾಗಿದೆ ಎಂದರು ಡಿಜಿಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.