ಪಾಕ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದರ್ಶನ್ ಲಾಲ್
Team Udayavani, Aug 6, 2017, 6:20 AM IST
ನವದೆಹಲಿ: ಪಾಕಿಸ್ತಾನದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಹಿಂದೂ ಧರ್ಮೀಯ ವ್ಯಕ್ತಿಯೊಬ್ಬರು ಸಚಿವ ಸ್ಥಾನಕ್ಕೇರಿ ದಾಖಲೆ ನಿರ್ಮಿಸಿದ್ದಾರೆ. ಸಚಿವರಾಗಿ ನೇಮಕವಾಗಿರುವ ವ್ಯಕ್ತಿ ದರ್ಶನ್ ಲಾಲ್(65). ಇವರು ಪಾಕಿಸ್ತಾನದ 4 ಪ್ರಾಂತ್ಯಗಳ ಪರಸ್ಪರ ಹೊಂದಾಣಿಕೆಯ ಉಸ್ತುವಾರಿ ವಹಿಸಲಿರುವರು ಎನ್ನಲಾಗಿದೆ.
ಪನಾಮ ಪೇಪರ್ ಹಗರಣದಲ್ಲಿ ಸಿಲುಕಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹಂಗಾಮಿ ಪ್ರಧಾನಿಯಾಗಿ ನೇಮಕವಾಗಿರುವ ಶಾಹಿದ್ ಖಾಖನ್ ಅಬ್ಟಾಸಿ ಶುಕ್ರವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಅವರು ತಮ್ಮ ಸಂಪುಟದ ಸಚಿವರಾಗಿ ದರ್ಶನ್ ಲಾಲ್‌ರನ್ನು ನೇಮಕ ಮಾಡಿರುವುದನ್ನು ಘೋಷಿಸಿದರು. ವೃತ್ತಿಯಲ್ಲಿ ವೈದ್ಯರಾಗಿರುವ ದರ್ಶನ್, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟಿR ಜಿಲ್ಲೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರು ಲೋಕಸಭೆ ಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ ಪಕ್ಷದಿಂದ ಅಲ್ಪಸಂಖ್ಯಾತರ ಮೀಸಲಾತಿ ಅಡಿಯಲ್ಲಿ ಟಿಕೆಟ್ ಪಡೆದು ಎರಡನೇ ಬಾರಿಗೆ ಲೋಕಸಭೆಗೆ ಎಂಟ್ರಿ ಪಡೆದಿದ್ದರು. ಆದರೆ, ಈಗ ಅವರು ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. 2018ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಅಬ್ಟಾಸಿ ಸಂಪುಟ ರಚಿಸಿದ್ದಾರೆ. ಆಡಳಿತಾರೂಢ ಪಿಎಂಎಲ್-ಎನ್‌ನ ಮೈತ್ರಿ ಪಕ್ಷಗಳ ಸದಸ್ಯರು ಮತ್ತು ಷರೀಫ್ರ ಸಹವರ್ತಿಗಳಿಗೆ ಸಂಪುಟದಲ್ಲಿ ಹೆಚ್ಚಿನ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.