ಸಗಟು ಹಣದುಬ್ಬರ 16 ವರ್ಷಗಳಲ್ಲೇ ಅಧಿಕ!
ನವೆಂಬರ್‌ನಲ್ಲಿ ಶೇ. 14ಕ್ಕೇರಿಕೆ; 2005ಕ್ಕೆ ಹೋಲಿಕೆ ಮಾಡಿದರೆ ಇದು ಗರಿಷ್ಠ
Team Udayavani, Dec 15, 2021, 6:30 AM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಕಳೆದ ವರ್ಷ ನವೆಂಬರ್‌ನಲ್ಲಿ ಶೇ. 2ರಷ್ಟಿದ್ದ ಸಗಟು ಹಣದುಬ್ಬರ ಈ ವರ್ಷದ ನವೆಂಬರ್‌ನಲ್ಲಿ ಶೇ. 14.23ಕ್ಕೆ ಏರಿತ್ತೆಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ಆಗಸ್ಟ್-ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಆದ ಹಣದುಬ್ಬರ ಏರಿಕೆಗೆ ಹೋಲಿಸಿದರೆ ನವೆಂಬರ್‌ನಲ್ಲಿ ಆಗಿದ್ದ ಏರಿಕೆ ಶೇ. 4.91ರಷ್ಟು ಹೆಚ್ಚು ಎಂದು ಕೇಂದ್ರ ವಿವರಿಸಿದೆ.
2005ರಲ್ಲಿದ್ದ ಹಣದುಬ್ಬರಕ್ಕೆ ಹೋಲಿಸಿದರೆ ಈ ಬಾರಿಯ ಹಣದುಬ್ಬರ ಅಧಿಕ ಎಂದು ಹೇಳಲಾಗಿದೆ. ಇಲಾಖೆಯ ಈ ವರದಿಯನ್ನು ತಜ್ಞರ ಮುಖೇನ ವಿಶ್ಲೇಷಣೆ ಮಾಡಿ ಪ್ರಕಟಿಸಿರುವ ಸಿಎನ್‌ಬಿಸಿ ಸುದ್ದಿ ಜಾಲತಾಣ, ಇದು ಕಳೆದ 40 ವರ್ಷಗಳಲ್ಲೇ ಅತ್ಯಧಿಕ ಎಂದಿದೆ.
ನಿರಂತರ ಏರಿಕೆ
ಸೆಪ್ಟಂಬರ್‌ನಲ್ಲಿ ಶೇ. 11.80ರಷ್ಟಿ ದೇಶದ ಸಗಟು ದರ ಸೂಚ್ಯಂಕ (ಡಬ್ಲ್ಯೂಪಿಐ), ಆನಂತರ ಇದು ಅಕ್ಟೋಬರ್ ನಲ್ಲಿ ಶೇ. 12.54ರಷ್ಟಾಯಿತು. ನವೆಂಬರ್‌ನಲ್ಲಿ ಶೇ. 14.23ಕ್ಕೆ ಏರಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕಳೆದ ವರ್ಷದ ನವೆಂಬರ್‌ನಲ್ಲಿ ದೇಶಾದ್ಯಂತ ಸಗಟು ಹಣದುಬ್ಬರ ಶೇ. 2.29ರಷ್ಟಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಕಾರಣವೇನು?
2021ರ ನವೆಂಬರ್‌ನಲ್ಲಿ ಆದ ಹಣದುಬ್ಬರ ಏರಿಕೆಗೆ ಖನಿಜ ಯುಕ್ತ ತೈಲ, ಮೂಲ ರೂಪದ ಲೋಹಗಳು, ಪೆಟ್ರೋಲ್ ಮತ್ತು ಡೀಸೆಲ್‌ನ ಕಚ್ಚಾ ತೈಲ, ರಾಸಾಯನಿಕಗಳು, ಆಹಾರ ಉತ್ಪನ್ನಗಳ ಬೆಲೆಯು ಗಣನೀಯವಾಗಿ ಹೆಚ್ಚಳವಾಗಿರುವುದೇ ಈ ಮಟ್ಟಿನ ಹಣದುಬ್ಬರ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.
ಯಾವುದರ ಮೇಲೆ ಎಷ್ಟೆಷ್ಟು ಏರಿಕೆ?
ನವೆಂಬರ್‌ನಲ್ಲಿ ಆಹಾರ ಉತ್ಪನ್ನಗಳ ಬೆಲೆಗಳು ಶೇ. 4.88ರಷ್ಟು ಏರಿಕೆಯಾಗಿದ್ದರೆ, ತರಕಾರಿಗಳ ಬೆಲೆ ಶೇ. 3.91ರಷ್ಟು, ಮೊಟ್ಟೆ- ಮಾಂಸ ಹಾಗೂ ಮೀನುಗಳ ಬೆಲೆಗಳಲ್ಲಿ ಶೇ. 9.66ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 327 ಕೋವಿಡ್ ಪಾಸಿಟಿವ್ ಪತ್ತೆ: 7 ಸಾವು
ಹಾಗೆಯೇ, ಪೆಟ್ರೋಲ್, ಡೀಸೆಲ್ ಹಾಗೂ ವಿವಿಧ ಇಂಧನ ಗಳ ಬೆಲೆ ಶೇ. 39.81ರಷ್ಟು ಹೆಚ್ಚಾಗಿದ್ದು ಇದರಲ್ಲಿ ಪೆಟ್ರೋಲ್ ಬೆಲೆ ಶೇ. 85.38, ಹೈ ಸ್ಪೀಡ್ ಡೀಸೆಲ್ ಬೆಲೆ ಶೇ. 86.07 ಹಾಗೂ ಎಲ್‌ಪಿಜಿಯ ಬೆಲೆ ಶೇ. 65.24ರಷ್ಟು ಹೆಚ್ಚಳವಾಗಿತ್ತೆಂದು ವರದಿಯಲ್ಲಿ ಹೇಳಲಾಗಿದೆ.
ಅಂಕಿ-ಅಂಶ:
ಶೇ. 4.88
– ಆಹಾರ ಉತ್ಪನ್ನಗಳ ಬೆಲೆಯಲ್ಲಿ ಆಗಿದ್ದ ಏರಿಕೆ
ಶೇ. 3.91
ತರಕಾರಿಗಳ ಬೆಲೆಯಲ್ಲಿ ಆಗಿದ್ದ ಏರಿಕೆ
ಶೇ. 85.38
– ಪೆಟ್ರೋಲ್ ಬೆಲೆಯಲ್ಲಿ ಆಗಿದ್ದ ಹೆಚ್ಚಳ
ಶೇ. 86.07
ಡೀಸೆಲ್ ಬೆಲೆಯಲ್ಲಿ ಆಗಿದ್ದ ಹೆಚ್ಚಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.