ಆಯ್ಕೆ ಸಮಿತಿ ಜತೆ ಚರ್ಚಿಸದೆ ಆಲೋಕ್‌ಗೆ ರಜೆ ಕೊಟ್ಟದ್ದೇಕೆ: ಸುಪ್ರೀಂ
Team Udayavani, Dec 6, 2018, 12:05 PM IST
ಹೊಸದಿಲ್ಲಿ : ಸಿಬಿಐ ವರ್ಸಸ್ ಸಿಬಿಐ ‘ಬೆಕ್ಕುಗಳ ಕಾದಾಟ’ದಲ್ಲಿ ಶಾಮೀಲಾಗಿದ್ದ ಆಲೋಕ್ ವರ್ಮಾ ಅವರನ್ನು ರಜೆಯಲ್ಲಿ ಕಳಿಸುವ ಮುನ್ನ ಆಯ್ಕೆ ಸಮಿತಿಯ ಜತೆಗೆ ಏಕೆ ಸಮಾಲೋಚಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.
ಆಲೋಕ್ ವರ್ಮಾ ಮತ್ತು ಸಿಬಿಐ ನಂಬರ್ 2 ಆಗಿರುವ ರಾಕೇಶ್ ಆಸ್ಥಾನಾ ಅವರ ಒಳಜಗಳದಿಂದ ಸಿಬಿಐ ಘನತೆ, ಗೌರವ, ಪ್ರತಿಷ್ಠೆ ಮಣ್ಣುಪಾಲಾಗಿತ್ತು ಎಂದು ಈ ಮೊದಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.
ಸಿಬಿಐ ಮುಖ್ಯಸ್ಥ ಆಲೋಕ್ ವರ್ಮಾ ಅವರ ಅಧಿಕಾರಗಳನ್ನು ಕಿತ್ತು ಹಾಕುವ ಮುನ್ನ ಆಯ್ಕೆ ಸಮಿತಿಯನ್ನು ಸಮಾಲೋಚಿಸಬೇಕಿತ್ತು; ಆದರೆ ಸರಕಾರ ಯಾಕೆ ಹಾಗೆ ಮಾಡದೆ ಲೋಪ ಎಸಗಿತು ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿತು.
ವರ್ಮಾ ಮತ್ತು ಆಸ್ಥಾನಾ ನಡುವಿನ ಜಗಳ ರಾತ್ರೋರಾತ್ರಿ ನಡೆದುದಲ್ಲ; ಅದಕೆ ದೀರ್ಘ ಇತಿಹಾಸವೂ ಇದ್ದಿರಬಹುದು. ಆದುದರಿಂದ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮುನ್ನ ಸರಕಾರ ಆಯ್ಕೆ ಸಮಿತಿಯೊಡನೆ ಸಮಾಲೋಚಿಸಬೇಕಿತ್ತು ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.