ಖರ್ಗೆ ಜಿ ಬಸವಣ್ಣನವರ ವಚನ ಈಗ ನೆನಪಾಯ್ತಾ : ಪ್ರಧಾನಿ ಪ್ರಶ್ನೆ
Team Udayavani, Feb 7, 2019, 2:37 PM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದು,ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮೇಲೆ ಪ್ರಶ್ನೆಗಳ ಮಳೆಗರೆದರು.
ಗುರುವಾರ ಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ನಿರಂತರ ಗಂಟೆಗೂ ಹೆಚ್ಚು ಕಾಲ ವಾಗ್ಧಾಳಿ ನಡೆಸಿದ ಪ್ರಧಾನಿ ಖರ್ಗೆ ಅವರ ಹೆಸರನ್ನು ಹಲವು ಬಾರಿ ಉಲ್ಲೇಖ ಮಾಡಿ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿದರು.
ಇವತ್ತು ಖರ್ಗೆ ಅವರು ಬಸವಣ್ಣನವರ ವಚನಗಳನ್ನು ಓದಿದರು. ನಾನು ಕೇಳುತ್ತೇನೆ, ನಿಮಗೆ ಇವತ್ತು ಬಸವಣ್ಣನ ವಚನ ನೆನಪಾಯಿತೆ? ಆ ವಚನವನ್ನು 20 ರಿಂದ 30 ವರ್ಷಗಳ ಹಿಂದೆ ಓದಿರುತ್ತಿದ್ದರೆ ನೀವು ತಪ್ಪು ದಾರಿ ಮತ್ತು ಯೋಜನೆಗಳತ್ತ ಸಾಗುತ್ತಿರಲಿಲ್ಲ ಎಂದರು.
ದೇವೇಗೌಡರಿಗೂ ಪ್ರಶ್ನೆ
ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಾಲಮನ್ನಾ ಸಂಪೂರ್ಣವಾಗಿ ಆಗಿಲ್ಲ. ಕೇವಲ 5 ಸಾವಿರ ರೈತರ ಸಾಲ ಮನ್ನಾ ಮಾಡಲಾಗಿದೆ. ಅಲ್ಲಿ ಮೈತ್ರಿ ಸರಕಾರವಿದೆ. ಈ ಬಗ್ಗೆ ರೈತರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಖರ್ಗೆ ಅವರು ಉತ್ತರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.