ಯೋಧರ ಶೌರ್ಯವನ್ನು ಕಾಂಗ್ರೆಸ್ ಮುಚ್ಚಿಟ್ಟದ್ದೇಕೆ?
Team Udayavani, Dec 3, 2018, 9:21 AM IST
ಬಾನ್ಸುರ್/ಜೈಪುರ್: ಸರ್ಜಿಕಲ್ ದಾಳಿಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗ ಪ್ರಸ್ತಾಪ ಮಾಡುತ್ತಿರುವ ಔಚಿತ್ಯವೇನು ಮತ್ತು ಯುಪಿಎ ಅವಧಿಯಲ್ಲಿ ಸೇನೆ ಅದೇ ಮಾದರಿಯ ದಾಳಿ ನಡೆಸಿದ್ದೇ ಆಗಿದ್ದರೆ ಸೇನೆಯ ಪರಾಕ್ರಮವನ್ನು ಮುಚ್ಚಿಟ್ಟಿದ್ದ ಯು ಪಿಎ ಸರಕಾರದ ಉದ್ದೇಶವೇನು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವಿವಾರ ಪ್ರಶ್ನಿಸಿದ್ದಾರೆ. ರಾಜ ಸ್ಥಾನದ ಬಾನ್ಸುರ್ ಮತ್ತು ಜೈಪುರದಲ್ಲಿ ಆಯೋ ಜಿಸಲಾಗಿದ್ದ ಚುನಾವಣಾ ರ್ಯಾಲಿ ಯಲ್ಲಿ ಅವರು ಮಾತನಾಡಿದ್ದಾರೆ.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಇದ್ದಾಗ ಮೂರು ಬಾರಿ ಸೇನೆ ಸರ್ಜಿಕಲ್ ದಾಳಿ ನಡೆಸಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿ ಕೊಂಡಿದ್ದಾರೆ. ಅದು ನಿಜವೇ ಆಗಿದ್ದರೆ ಸೇನೆಯ ಪರಾಕ್ರಮ ವನ್ನು ಕಾಂಗ್ರೆಸ್ ಯಾವ ಕಾರಣ ಕ್ಕಾಗಿ ಮುಚ್ಚಿ ಟ್ಟಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ರಾಜಕೀಯದಲ್ಲಿ ಅಪನಂಬಿಕೆ ಎಂಬ ಸಮಸ್ಯೆ ಸೃಷ್ಟಿಸಿದೆ. ಆ ಪಕ್ಷದ ನಾಯಕರು ಹೇಳುವ ಮಾತಿಗೆ ಮತ್ತು ನಡೆದುಕೊಳ್ಳುವ ರೀತಿಗೆ ವ್ಯತ್ಯಾಸವಿದೆ ಎಂದಿದ್ದಾರೆ. ಕಾಂಗ್ರೆಸ್‌ಗೆ ಚುನಾ ವಣೆ ವೇಳೆ ಮಾತ್ರ ದೇಗುಲ, ಗೋವು ಗಳು ನೆನಪಾ ಗುತ್ತವೆ. ಆದರೆ ಬಿಜೆಪಿಗೆ ಅವು ಗ ಳು ಜೀವನಾಡಿ ಎಂದೂ ಹೇಳಿದ್ದಾರೆ ರಾಜನಾಥ್.
ಕಾಂಗ್ರೆಸ್ ನಾಯಕರು ಚುನಾವಣೆಗಳು ಸಮೀಪಿಸುತ್ತಿರುವಾಗ ಮಾತ್ರ ದೇವಾಲಯ ಗಳಿಗೆ ಭೇಟಿ ನೀಡುತ್ತಾರೆ. ಇಲ್ಲದಿದ್ದರೆ ಅವರು ದೇಗುಲದಲ್ಲಿ ಕಾಣಸಿಗುವುದೇ ಇಲ್ಲ ಎಂದೂ ಅವರು ಹೇಳಿದ್ದಾರೆ.
ಬಾನ್ಸುರ್‌ನಲ್ಲಿ ಮಾತನಾಡಿದ ಅವರು, ದೇಶವನ್ನು ಕಾಂಗ್ರೆಸ್ 55 ವರ್ಷಗಳ ಕಾಲ ಆಳಿದ್ದರಿಂದಲೇ ಭಾರತ ಬಡದೇಶಗಳ ಪಟ್ಟಿಯಲ್ಲಿರುವಂತಾಗಿದೆ ಎಂದು ದೂರಿದ್ದಾರೆ. “ಬಿಜೆಪಿ ಜನರ ಕಣ್ಣಲ್ಲಿ ಕಣ್ಣಿಟ್ಟು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುತ್ತದೆಯೇ ಹೊರತು, ಅದರಿಂದ ಲಾಭ ಪಡೆಯುವುದಿಲ್ಲ. 50 ವರ್ಷಗಳಲ್ಲಿ ಕಾಂಗ್ರೆಸ್ 101 ಐಟಿಐಗಳನ್ನು ಆರಂಭಿಸಿದ್ದರೆ, ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರ 5 ವರ್ಷಗಳಲ್ಲಿ 958 ಐಟಿಐಗಳನ್ನು ಸ್ಥಾಪಿಸಿದೆ’ ಎಂದು ಹೇಳಿದ್ದಾರೆ.
ತೆಲಂಗಾಣದ ನಾರಾಯಣಪೇಟೆಯಲ್ಲಿ ರವಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಚಂದ್ರ ಶೇಖರ ರಾವ್ ನೇತೃತ್ವದ ಸರಕಾರ ಅವಧಿಗಿಂತ ಮೊದಲೇ ಚುನಾವಣೆ ಘೋಷಿಸಿ ರಾಜ್ಯದ ಮೇಲೆ ಕೋಟ್ಯಂತರ ರೂಪಾಯಿ ಹೊರೆ ಹೊರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ತಪ್ಪೊಪ್ಪಿಕೊಂಡ ಆಯೋಗ
ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಸ್ಟ್ರಾಂಗ್ ರೂಮ್‌ನಲ್ಲಿನ ಸಿಸಿಟಿವಿ ಕ್ಯಾಮೆರಾಗಳು ವಿದ್ಯುತ್ ಕಡಿತದಿಂದಾಗಿ ಒಂದು ಗಂಟೆ ಕಾಲ ಕಾರ್ಯನಿರ್ವಹಿಸಲಿಲ್ಲ ಎಂಬ ಅಂಶವನ್ನು ಕೇಂದ್ರ ಚುನಾವಣಾ ಆಯೋಗ ಒಪ್ಪಿಕೊಂಡಿದೆ. ನ.30 (ಶುಕ್ರವಾರ) ಈ ಘಟನೆ ನಡೆದಿದೆ. ಈ ಬಗ್ಗೆ ಭೋಪಾಲ ಜಿಲ್ಲಾಧಿಕಾರಿ ಕಚೇರಿಯಿಂದ ವರದಿ ತರಿಸಿಕೊಳ್ಳಲಾಗಿದ್ದು, ಅದರಲ್ಲಿ ಈ ಅಂಶ ಪ್ರಸ್ತಾಪವಾಗಿದೆ. ಆದರೆ ಈಗ ಸ್ಟ್ರಾಂಗ್ ರೂಮ್‌ನಲ್ಲಿ ಸಿಸಿ ಕ್ಯಾಮೆರಾಗಳು ಕಾರ್ಯವೆಸಗುತ್ತಿವೆ ಎಂದಿದೆ ಆಯೋಗ. ಈ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪವೆತ್ತಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಬಾಲ್ಯವಿವಾಹ ತಡೆಯಲ್ಲ
ರಾಜಸ್ಥಾನ ವಿಧಾನಸಭೆ ಚುನಾವಣೆ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಚೌಹಾಣ್ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಹಾಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಉಳಿಸಿಕೊಂಡರೆ ತಮ್ಮ ಕ್ಷೇತ್ರದಲ್ಲಿ ನಡೆಯುವ ಬಾಲ್ಯ ವಿವಾಹಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳುವುದಾಗಿ ವಾಗ್ಧಾನ ಮಾಡಿದ್ದಾರೆ. ಪಿಪಾಲಿಯಾ ಕಾಲಾ ಎಂಬಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.