ಭಾರತವೇಕೆ ವಾಯು ದಾಳಿ ಆಯ್ಕೆ ಮಾಡಿತು?


Team Udayavani, Feb 27, 2019, 12:30 AM IST

c-21.jpg

ಹೊಸದಿಲ್ಲಿ : ಪಾಕ್‌ ನಿದ್ದೆಯಿಂದ ಏಳುವ ಮುನ್ನ ಊಹಿಸಲಾರದ ರೀತಿ ಏಟು ನೀಡಿದ ಭಾರತ, ದಾಳಿಗೆ ವಾಯುಪಡೆಯನ್ನೇಕೆ ಆಯ್ಕೆ ಮಾಡಿತು ಎಂಬ ಪ್ರಶ್ನೆಗೆ ಇಲ್ಲಿ ಕೆಲವು ಉತ್ತರಗಳಿವೆ. ಸುಮಾರು ಮೂವತ್ತು ವರ್ಷಗಳಿಂದ ಭಾರತ, ಪಾಕ್‌ ಭಯೋತ್ಪಾದನೆಯಿಂದ ಬಸವಳಿದು ಹೋಗಿತ್ತು. ಕಳೆದ ಬಾರಿ ಸರ್ಜಿಕಲ್‌ ದಾಳಿ ನಡೆದಿದ್ದರೂ ಅದರ ಪರಿಣಾಮ ತೀವ್ರವಾಗಿ ಪಾಕ್‌ಗೆ ತಟ್ಟಿರಲಿಲ್ಲ. ಭಾರತದ ದಾಳಿಯು ನಿಯಂತ್ರಣ ರೇಖೆಗೆ ಸೀಮಿತ ಎಂದೇ ಪಾಕ್‌ ಅಂದಾಜಿಸಿತ್ತು. ಆದ್ದರಿಂದ ಸರ್ಜಿಕಲ್‌ ದಾಳಿಗೆ ಮೊದಲು ಮತ್ತು ಇತ್ತೀಚಿನ ಸಮಯಗಳಲ್ಲಿ ಉಗ್ರರನ್ನು ಭಾರತದ ಮೇಲೆ ಛೂ ಬಿಡುವುದು, ಅದೇನಾದರೂ ದಾಳಿ ಮಾಡುತ್ತದೆ ಎಂದು ಗೊತ್ತಾದರೆ, ಅವರನ್ನು ಅಲ್ಲಿಂದ ಪಾಕ್‌ ಒಳಗಿನ ಬೇರೆ ಅಡಗುದಾಣಗಳಿಗೆ ಸ್ಥಳಾಂತರಿಸುವ ಕೆಲಸವನ್ನು ಸೇನೆಯ ಬೆಂಬಲದೊಂದಿಗೆ ಅತ್ಯಂತ ಯಶಸ್ವಿಯಾಗಿ ಮಾಡುವುದರಲ್ಲೇ ತಲ್ಲೀನವಾಗಿತ್ತು.

ನಿಯಂತ್ರಣ ರೇಖೆಯ ಸನಿಹ ಮಾತ್ರ ಭಾರತ ದಾಳಿ ಮಾಡಿದರೆ, ಮತ್ತೂಂದೆಡೆ ಅಂಥ ತಾಣಗಳನ್ನು ಸ್ಥಾಪಿಸಿ ಕುಕೃತ್ಯಗಳನ್ನು ಮುಂದುವರಿಸುವ ಹಠವೂ ಪಾಕ್‌ಗೆ ಇತ್ತು. ಕಳೆದ ಸರ್ಜಿಕಲ್‌ ದಾಳಿ ಬಳಿಕ ಪಾಕ್‌ ಎಚ್ಚೆತ್ತು ಗಡಿಯಲ್ಲಿ ತನ್ನ ಸೇನೆಯ ಕಣ್ಗಾವಲನ್ನು ಹೆಚ್ಚಿಸಿತ್ತು. ಆದ್ದರಿಂದ ಈ ಬಾರಿ ಹೊಸ ಕ್ರಮಕ್ಕೆ ಮುಂದಾಗುವುದು ಭಾರತಕ್ಕೂ ಅನಿವಾರ್ಯವಾಗಿತ್ತು. 

ನಿರ್ದಿಷ್ಟ  ದಾಳಿ, ಗರಿಷ್ಠ ಹಾನಿ
ಯುದ್ಧವಿಮಾನಗಳು ಮತ್ತು ಲೇಸರ್‌ ನಿರ್ದೇಶಿತ ಬಾಂಬ್‌ಗಳಿಂದ ನಿರ್ದಿಷ್ಟ ದಾಳಿ ಸಾಧ್ಯವಿದೆ. ಉಪಗ್ರಹದ, ಗುಪ್ತಚರ ಮಾಹಿತಿ ಬಳಸಿಕೊಂಡು ಜೈಶ್‌ನ ಪ್ರಮುಖ ಕೇಂದ್ರಗಳನ್ನು ಗುರಿಯಾಗಿಸಿ ಕೊಳ್ಳಲಾಗಿತ್ತು. ಅದರಂತೆ ವಿಮಾನಗಳು ಮತ್ತು ಲೇಸರ್‌ ನಿರ್ದೇಶಿತ ಬಾಂಬ್‌ಗಳಿಂದಲೇ ದಾಳಿ ಮಾಡಲಾಗಿದೆ. ಹಾಗಾಗಿ ಯಾವುದೇ ನಾಗರಿಕ ಪ್ರದೇಶಗಳಿಗೆ, ಪಾಕ್‌ ಮಿಲಿಟರಿ ಪ್ರದೇಶಗಳಿಗೆ ಹಾನಿಯಾಗದೆ ಉಗ್ರ ನೆಲೆಗಳಷ್ಟೇ ಧ್ವಂಸವಾಗಿವೆ. ಈ ಜಾಣ ಕ್ರಮದಿಂದ ಪಾಕ್‌ ಕೂಡ ಏಕಾಏಕಿ ಭಾರತದ ಮೇಲೆ ಮುಗಿಬೀಳಲು ಸಾಧ್ಯವಿಲ್ಲದಾಗಿದೆ.

 ಒಳ ನುಗ್ಗಿ ಹೊಡೆವ ಛಾತಿ
ಪಾಕಿಸ್ಥಾನದ ಪ್ರಮುಖ ಪ್ರದೇಶವಾದ ಖೈಬರ್‌ ಪಂಖು¤ಂಖ್ವಾ ಪ್ರದೇಶದಲ್ಲಿ ಉಗ್ರ ಶಿಬಿರಗಳಿವೆ. ಇದರಲ್ಲಿ ಬಾಲಾಕೋಟ್‌ನಲ್ಲಿ ಜೈಶ್‌-ಎ-ಮೊಹಮ್ಮದ್‌ನ ಪ್ರಮುಖ ತರಬೇತಿ ಕೇಂದ್ರವಿದೆ. ಇದರ ಮೇಲಿನ ಮಿಂಚಿನ ದಾಳಿಗೆ ವಾಯುಪಡೆಯೇ ಸೂಕ್ತ. ಒಂದೇ ಏಟಿಗೆ ಉಗ್ರರು, ತರಬೇತಿ ಕೇಂದ್ರ ಎಲ್ಲವೂ ನಾಮಾವಶೇಷವಾಗುತ್ತವೆ. ಜಾಮ್‌ನಗರ, ಹಲ್ವಾರಾ, ಹಿಂದೋನ್‌ಗಳಲ್ಲಿ ವಾಯುಪಡೆಯ ಪ್ರಮುಖ ನೆಲೆಗಳಿದ್ದು, ಅಲ್ಲಿ ಸರ್ವಸಿದ್ಧವಾಗಿದ್ದರೆ, ಪಾಕ್‌ನ ಎದುರೇಟಿನ ಅಪಾಯವನ್ನೂ ನಿಗ್ರಹಿಸಲು ಸಾಧ್ಯ ಎಂಬ ಅಂಶವೂ ಈ ಆಯ್ಕೆಗೆ ಕಾರಣ.

ಚಳ್ಳೆಹಣ್ಣು  ತಿನ್ನಿಸಿದ ಭಾರತ
ವಾಯುದಾಳಿಯ ಮೂಲಕ ಪಾಕ್‌ಗೆ ಭಾರತ ಅಕ್ಷರಶಃ  ಚಳ್ಳೆಹಣ್ಣು ತಿನ್ನಿಸಿದೆ. ಪುಲ್ವಾ ಮಾ ದಾಳಿ ನಡೆದ ಕೂಡಲೇ ಭಾರತ ದಾಳಿ ಮಾಡ ಬಹುದೆಂದು ಉಗ್ರರನ್ನು ಬಾಲಾಕೋಟ್‌ಗೆ ಸಾಗಿಸಲಾಗಿತ್ತು. ಪಾಕ್‌ನೊಳಕ್ಕೆ ಅಷ್ಟು ದೂರ ಬಂದು ಭಾರತ ದಾಳಿ ಮಾಡಲಾರದು ಎಂದೇ ಪಾಕ್‌ ಮಿಲಿಟರಿ ಮತ್ತು ಉಗ್ರರ ಊಹೆ ಯಾಗಿತ್ತು. ಆದರೆ ಇದು ತಲೆಕೆಳಗಾಗಿದೆ. ಭಾರತವು ಪಾಕ್‌ ನೆಲೆ ಮೇಲೆ ದಾಳಿ ಮಾಡುವ ಮುನ್ನ ಗಡಿಯಲ್ಲಿ ಸುಮಾರು ನೂರರಷ್ಟು ವಿಮಾನಗಳನ್ನು ಸಿದ್ಧಗೊಳಿಸಿಡಲಾಗಿತ್ತು. ಇದನ್ನು ಪಾಕ್‌ ಪುಲ್ವಾಮಾ ಹಿನ್ನೆಲೆಯಲ್ಲಿ ಭಾರತ ಮಾಡಿದ ಸಿದ್ಧತೆ ಎಂದೇ ನಂಬಿತ್ತು. ಆದರೆ ಎಲ್ಲಿ ದಾಳಿ ಮಾಡುತ್ತಾರೆ, ಹೇಗೆ ದಾಳಿ ಮಾಡುತ್ತಾರೆ ಎನ್ನುವುದು ಕೊನೆಯವರೆಗೂ ತಿಳಿದಿರಲಿಲ್ಲ. ಸೋಮವಾರ ಮುಂಜಾವ ಏಕಾಏಕಿ 12 ಯುದ್ಧ ವಿಮಾನಗಳು ಗಡಿಯೊಳಕ್ಕೆ ನುಸುಳಿ ದಾಗ ಅವು ಎಲ್ಲಿ ಹೋಗುತ್ತಿವೆ, ಎಲ್ಲಿಗೆ ದಾಳಿ ಮಾಡುತ್ತಿವೆ ಎಂಬುದನ್ನು ತಿಳಿಯುವಲ್ಲಿ ಪಾಕ್‌ ಅಕ್ಷರಶಃ ವಿಫ‌ಲವಾಯಿತು.  ಏನಾಗುತ್ತಿದೆ ಎಂದು ಆಲೋಚಿಸುವಷ್ಟರಲ್ಲಿ ಉತ್ತರ ಕಮಾಂಡ್‌ನಿಂದ ಹಾರಿದ ಭಾರತದ ವಿಮಾನಗಳು ನಿರ್ದಿಷ್ಟ ಪ್ರದೇಶಗಳಿಗೆ ದಾಳಿ ಮಾಡಿ ವಾಪಸಾಗಿದ್ದವು. ಅಂದ ಹಾಗೆ ಪುಲ್ವಾಮಾ ದಾಳಿಯ ಬಳಿಕ ಪ್ರಧಾನಿ ಮೋದಿಯವರು ಉಗ್ರರು ಎಲ್ಲೇ ಇರಲಿ, ಒಳ ನುಗ್ಗಿಯಾದರೂ ಹೊಸಕಿ ಹಾಕುತ್ತೇವೆ ಎಂದಿದ್ದನ್ನು ಸ್ಮರಿಸಬಹುದು.

ವಾಯು ದಾಳಿಯ ಆಯ್ಕೆ
ವಾಯುದಾಳಿ ಮಾಡಿದರೆ ಅತಿ ಕ್ಷಿಪ್ರವಾಗಿ ನಿರ್ದಿಷ್ಟ ಪ್ರದೇಶದಲ್ಲಿ ನಿಖರವಾಗಿ ದಾಳಿ ಮಾಡಬಹುದು ಮತ್ತು ಶತ್ರು ಎಚ್ಚೆತ್ತು ಪ್ರತಿದಾಳಿ ಮಾಡುವ ಮೊದಲೇ ಸುರಕ್ಷಿತ ಪ್ರದೇಶಕ್ಕೆ ಸೇರಿ ಕೊಳ್ಳಬಹುದು ಎಂಬ ಅಂಶವೇ ವಾಯು ದಾಳಿ ಆಯ್ಕೆಗೆ ಕಾರಣ ಎನ್ನಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ನಿಯಂತ್ರಣ ರೇಖೆಗಿಂತ ಉಗ್ರರನ್ನು ತಯಾರು ಮಾಡುವ ಫ್ಯಾಕ್ಟರಿಯನ್ನೇ ಗುರಿಯಾಗಿ ಸಲು ವಾಯುದಾಳಿಯೇ ಸೂಕ್ತ ಎಂಬ ಅಭಿಪ್ರಾಯವೂ ಮತ್ತೂಂದು ಪ್ರಮುಖ ಅಂಶ.

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.