ರಫೇಲ್ ಒಪ್ಪಂದ : JPC ತನಿಖೆಗೆ ಮೋದಿ ಸರ್ಕಾರ ಯಾಕೆ ಸಿದ್ಧವಿಲ್ಲ?: ರಾಹುಲ್ ಆನ್ಲೈನ್ ಸಮೀಕ್ಷೆ
ಕೈಗಾರಿಕೋದ್ಯಮಿ ಸ್ನೇಹಿತರ ಜೇಬುಗಳನ್ನು ತುಂಬುವ ವಿಷಯ ಬಂದಾಗ ಕಳೆದ ಏಳು ವರ್ಷಗಳಿಂದ ಅವರ ಆದ್ಯತೆ ಕ್ರೋನಿ ಕ್ಯಾಪಿಟಲಿಸಂ : ಪವನ್ ಖೇರಾ
Team Udayavani, Jul 4, 2021, 5:10 PM IST
ನವ ದೆಹಲಿ : ರಫೇಲ್ ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಂಬಮಧಿಸಿದಂತೆ ಕಾಂಗ್ರೆಸ್ ಆರಂಭದಿಂದ ಪ್ರಶ್ನೆ ಮಾಡುತ್ತಾ ಬಂದಿದ್ದು, ಈಗ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದ ಬೆನ್ನಿಗೆ ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಮತ್ತೆ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಮೀಕ್ಷೆ ನಡೆಸಿದ ಗಾಂಧಿ, ಮೋದಿ ಸರ್ಕಾರ ಜೆಪಿಸಿ ತನಿಖೆಗೆ ಯಾಕೆ ಸಿದ್ಧವಿಲ್ಲ ಎಂದು ಖಡಕ್ ಪ್ರಶ್ನೆ ಮಾಡಿದ್ದಾರೆ.
ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಯಾಕೆ ಸಿದ್ಧವಿಲ್ಲ ಎಂಬ ಪ್ರಶ್ನೆಗೆ ರಾಹುಲ್ ನಾಲ್ಕು ಆಯ್ಕೆಯ ಉತ್ತರಗಳನ್ನು ನೀಡಿದ್ದಾರೆ. ತಪ್ಪಿತಸ್ಥ ಮನಸಾಕ್ಷಿ, ಸ್ನೇಹಿತರನ್ನು ಉಳಿಸುವುದು, ಜೆಪಿಸಿಗೆ ರಾಜ್ಯಸಭಾ ಸ್ಥಾನ ಬೇಡ ಮತ್ತು ಮೇಲಿನ ಎಲ್ಲವು ಎಂಬ ನಾಲ್ಕು ಆಯ್ಕೆಗಳನ್ನು ನೀಡುವ ಮೂಲಕ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಸಮೀಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ‘ಮುಂದಿನ ಸಿನಿಮಾದಲ್ಲಿ ಚಾನ್ಸ್ ಕೊಡಿ’:ಆಲಿಯಾ ಬಳಿ ಅವಕಾಶ ಕೇಳಿದ ನಟ ಶಾರುಖ್ ಖಾನ್
ರಫೇಲ್ ಯುದ್ಧ ವಿಮಾನಗಳ ಒಪ್ಪಂದದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಬಹಳ ಹಿಂದಿನಿಂದಲೂ ಆರೋಪ ಕೇಳಿ ಬಂದಿದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಈ ಆರೋಪವೇ ಪ್ರಮುಖ ರಾಜಕೀಯ ಅಸ್ತ್ರವಾಗಿತ್ತು.
ಇನ್ನು, ಭಾರತದೊಂದಿಗೆ 59,000 ಕೋಟಿ ರೂ. ರಫೇಲ್ ಫೈಟರ್ ಜೆಟ್ ಒಪ್ಪಂದದಲ್ಲಿ ಶಂಕಿತ “ಭ್ರಷ್ಟಾಚಾರ”ಮತ್ತು “ಒಲವು” ಬಗ್ಗೆ “ಹೆಚ್ಚು ಸೂಕ್ಷ್ಮ” ನ್ಯಾಯಾಂಗ ತನಿಖೆಯನ್ನು ನಡೆಸಲು ಫ್ರೆಂಚ್ ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ಫ್ರೆಂಚ್ ತನಿಖಾ ವೆಬ್ ಸೈಟ್ ಮೀಡಿಯಾ ಪಾರ್ಟ್ ಇತ್ತೀಚೆಗಷ್ಟೇ ವರದಿ ಮಾಡಿದೆ.
ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿದ ಕಾಂಗ್ರೆಸ್, ರಫೇಲ್ ಒಪ್ಪಂದದ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದೆ.
ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದ ಕುರಿತಾಗಿ ಜೆಪಿಸಿ ತನಿಖೆಗೆ ಆದೇಶಿಸದೇ ಇರುವುದಕ್ಕೆ ಏನು ಕಾರಣ..? ತನಿಖೆಗೆ ಆದೇಶಿಸಲಿ ಎಂದು ಕಾಂಗ್ರೆಸ್ ತಾಕೀತು ಮಾಡಿದೆ.
ಈ ಕುರಿತಾಗಿ ಇಂದು (ಭಾನುವಾರ, ಜುಲೈ 4) ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ, ಕೈಗಾರಿಕೋದ್ಯಮಿ ಸ್ನೇಹಿತರ ಜೇಬುಗಳನ್ನು ತುಂಬುವ ವಿಷಯ ಬಂದಾಗ ಕಳೆದ ಏಳು ವರ್ಷಗಳಿಂದ ಅವರ ಆದ್ಯತೆ ಕ್ರೋನಿ ಕ್ಯಾಪಿಟಲಿಸಂ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಗೆಳೆಯರ(ಕೈಗಾರಿಕೋದ್ಯಮಿಗಳು) ವಿಷಯ ಬಂದಾಗಮೋದಿ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆಯ ವಿಚಾರಗಳು ಲೆಕ್ಕಕ್ಕಲ್ಲ ಎಂದಿದ್ದಾರೆ.
ಭ್ರಷ್ಟಾಚಾರ, ಪ್ರಭಾವ ಬೀರುವಿಕೆ, ಅಕ್ರಮ ಹಣ ವ್ಯವಹಾರ ಮತ್ತು ಒಲವು ತೋರುವಿಕೆಗೆ ಸಂಬಂಧಿಸಿದಂತೆ ಫ್ರಾನ್ಸ್ ಕಳೆದ 24 ಗಂಟೆಗಳಲ್ಲಿ ರಫೇಲ್ ಒಪ್ಪಂದದ ಬಗ್ಗೆ ತನಿಖೆ ಆರಂಭಿಸಿದೆ ಎಂಬ ಅಂಶವನ್ನು ಒಪ್ಪಿಕೊಂಡ ಖೇರಾ, ಭಾರತ ಸರ್ಕಾರ ಇನ್ನೂ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯೋತ್ತರ, ಎಲ್ಲಾ ಕೇಂದ್ರ ಸರ್ಕಾರಗಳು ರಾಷ್ಟ್ರೀಯ ಭದ್ರತೆಯನ್ನು ಗಂಭೀರ ವಿಷಯವೆಂದು ಪರಿಗಣಿಸಿವೆ ಹಾಗೂ ಅದನ್ನು ರಾಜಕೀಯಗೊಳಿಸುವುದನ್ನು ಬಿಟ್ಟುಬಿಟ್ಟಿವೆ. ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆಯು ಅತ್ಯುನ್ನತವಾದುದು ಮತ್ತು ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದೆ ಎಂದಿದ್ದಾರೆ.
ಇನ್ನು, ರಾಹುಲ್ ಟ್ವೀಟರ್ ಸಮೀಕ್ಷೆಗೆ ಈಗಾಗಲೇ ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದು, ರಫೇಲ್ ವಿಚಾರವಾಗಿ ರಾಹುಲ್ ಗಾಂಧಿ ಅವರ ಮುಂದಿನ ನಡೆ ಏನು..? ಮೋದಿ ಸರ್ಕಾರ ಜೆಪಿಸಿ ತನಿಖೆಗೆ ಆದೇಶಿಸುತ್ತಾ ಎನ್ನುವುದರ ಬಗ್ಗೆ ಕುತೂಹಲ ಮೂಡಿಸಿದೆ.
JPC जाँच के लिए मोदी सरकार तैयार क्यों नहीं है?
— Rahul Gandhi (@RahulGandhi) July 4, 2021
ಇದನ್ನೂ ಓದಿ : ಸಿದ್ದರಾಮಯ್ಯರನ್ನ ಸೋಲಿಸೋಕೆ ನಮ್ಮ ಮನೆಯಲ್ಲೇ ಕಾರ್ಯ ತಂತ್ರ ನಡೆದಿತ್ತು : ಶ್ರೀನಿವಾಸಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.