ದೇಶದಲ್ಲಿ ಇಷ್ಟೆಲ್ಲಾ ಕಾಡುಗಳಿದ್ದರೂ ಆಫ್ರಿಕನ್ ಚೀತಾಗಳ ನೆಲೆಯಾಗಿ ‘ಕುನೋ’ ಆಯ್ಕೆ ಯಾಕೆ?
Team Udayavani, Sep 17, 2022, 10:57 AM IST
ಗ್ವಾಲಿಯರ್: ಮಧ್ಯಪ್ರದೇಶದ ವಿಶಾಲವಾದ ಅರಣ್ಯ ಭೂಭಾಗದಲ್ಲಿ 748 ಚದರ ಕಿಲೋ ಮೀಟರ್ ಗಳಷ್ಟು ಹರಡಿರುವ ಕುನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವು ಶನಿವಾರದಂದು ಎಂಟು ಆಫ್ರಿಕನ್ ಚೀತಾಗಳಿಗೆ ಹೊಸ ನೆಲೆಯಾಗಿದೆ.
ಯಾವುದೇ ಮಾನವ ಸಂಚಾರವಿಲ್ಲದ ಈ ಪ್ರದೇಶವು ಈಗ ಛತ್ತೀಸ್ ಗಢದ ಭಾಗವಾಗಿರುವ ಕೊರಿಯಾದ ಸಾಲ್ ಕಾಡುಗಳಿಗೆ ಬಹಳ ಹತ್ತಿರದಲ್ಲಿದೆ. ಅಲ್ಲಿಯೇ ಸ್ಥಳೀಯ ಏಷ್ಯಾಟಿಕ್ ಚೀತಾ ಸುಮಾರು 70 ವರ್ಷಗಳ ಹಿಂದೆ ಕೊನೆಯದಾಗಿ ಕಂಡುಬಂದಿದೆ.
ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಿ ಎತ್ತರದ ಪ್ರದೇಶಗಳು, ಕರಾವಳಿಗಳು ಮತ್ತು ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗವನ್ನು ಚೀತಾಗಳ ಆವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಒಂದು ದಶಕದ ಹಿಂದೆ ಯೋಜನೆಗಾಗಿ ಹಲವಾರು ಇತರ ಸೈಟ್‌ಗಳನ್ನು ಪರಿಗಣಿಸಲಾಗಿತ್ತು.
2010 ಮತ್ತು 2012 ರ ನಡುವೆ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದಾದ್ಯಂತ ಹತ್ತು ಸೈಟ್‌ಗಳನ್ನು ಸಮೀಕ್ಷೆ ಮಾಡಲಾಗಿದೆ. ನಂತರ, ಕುನೋ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಲಾಯಿತು. ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾವು ಹವಾಮಾನ ಬದಲಾವಣೆಗಳು, ಬೇಟೆಯ ಅವಕಾಶಗಳು, ಪರಭಕ್ಷಕಗಳ ಜನಸಂಖ್ಯೆ ಮತ್ತು ಐತಿಹಾಸಿಕ ವ್ಯಾಪ್ತಿಯ ಆಧಾರದ ಮೇಲೆ ನಡೆಸಿದ ಮೌಲ್ಯಮಾಪನವನ್ನು ಆಧರಿಸಿ ಕುನೋ ಕಾಡನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಮಾನ್ಸೂನ್ ರಾಗ ಚಿತ್ರ ವಿಮರ್ಶೆ: ಮಾನ್ಸೂನ್ ನಲ್ಲಿ ಅರಳಿದ ಕ್ಲಾಸ್ ಲವ್ ಸ್ಟೋರಿ
ಕುನೋ ವನ್ಯಜೀವಿ ತಾಣದ ವ್ಯಾಪ್ತಿಯ ಸುಮಾರು 24 ಹಳ್ಳಿಗಳನ್ನು ಅಲ್ಲಿನ ಸಾಕುಪ್ರಾಣಿಗಳನ್ನು ಸೇರಿದಂತೆ ವರ್ಷದ ಹಿಂದೆ ಸಂಪೂರ್ಣ ಸ್ಥಳಾಂತರ ಮಾಡಲಾಗಿದೆ. ಹಳ್ಳಿಯ ಜಾಗಗಳು ಮತ್ತು ಅಲ್ಲಿನ ಕೃಷಿ ಪ್ರದೇಶಗಳು ಈಗ ಹುಲ್ಲುಗಾವಲಾಗಿ ಪರಿವರ್ತನೆಯಾಗಿದೆ.
?????? ??? ???? ??????❗️
India ?? welcomes back the fastest sprinter on Earth, the #Cheetah, after a gap of 70 years.
#CheetahIsBack @moefcc @byadavbjp @JM_Scindia @ianuragthakur @Murugan_MoS @ChouhanShivraj @MPTourism @incredibleindia @IndiainNamibia pic.twitter.com/HZ7TxKJ1lz— Ministry of Information and Broadcasting (@MIB_India) September 17, 2022
ಸರ್ಕಾರದ ಯೋಜನೆಯ ಪ್ರಕಾರ ಹುಲಿ, ಸಿಂಹ, ಚಿರತೆ ಮತ್ತು ಚೀತಾಗಳು ಈ ಹಿಂದಿನಂತೆ ಕುನೋ ಅರಣ್ಯದಲ್ಲಿ ಸಹಬಾಳ್ವೆ ನಡೆಸುತ್ತವೆ. ಈ ಕಾಡಿನಲ್ಲಿ ಚಿರತೆಗಳ (ಲೆಪರ್ಡ್) ಸಂಖ್ಯೆ ಹೆಚ್ಚಿದ್ದು, ಪ್ರತಿ ನೂರು ಚದರ ಕಿ.ಮೀಗೆ ಒಂಬತ್ತು ಚಿರತೆಗಳಿವೆ. ಚೀತಾಗಳಿಗೆ ಹೋಲಿಸಿದರೆ ಚಿರತೆಗಳು ಹೆಚ್ಚು ಶಕ್ತಿಯುತವಾಗಿರುವಂತವು. ಚೀತಾಗಳು ತಮ್ಮ ವೇಗದ ಓಟಕ್ಕೆ ಹೆಸರು ಪಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.