ದೇಗುಲ ನಿರ್ವಹಣೆ ಹೊಣೆ ಸರಕಾರಕ್ಕೇಕೆ: ಸುಪ್ರೀಂ ಪ್ರಶ್ನೆ
Team Udayavani, Apr 10, 2019, 6:00 AM IST
ಹೊಸದಿಲ್ಲಿ: ಹಿಂದೂ ದೇಗುಲಗಳನ್ನು ಸರಕಾರಗಳೇ ಏಕೆ ನಿರ್ವಹಣೆ ಮಾಡಬೇಕು ಎಂದು ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್, ದೇಗುಲಗಳ ನಿರ್ವಹಣೆಯ ಹೊಣೆ ಯಾರಿಗೆ ನೀಡಬೇಕೆಂಬುದನ್ನು ಆಯಾ ದೇಗುಲಗಳ ಭಕ್ತರೇ ನಿರ್ಧರಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟಿದೆ. ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ದೇವರ ವಿಗ್ರಹಗಳು ಕಾಣೆಯಾಗಿರುವುದು, ಅವ್ಯವಹಾರಗಳು ಹಾಗೂ ಭಕ್ತಾದಿಗಳಿಗೆ ದೇಗುಲದ ಆಡಳಿತ ಮಂಡಳಿಯಿಂದ ಕಿರಿಕಿರಿ ಉಂಟಾಗುತ್ತಿರುವುದರ ವಿರುದ್ಧ ಸಲ್ಲಿಸಲಾಗಿರುವ ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ರೀತಿ ಹೇಳಿದೆ.
2014ರಲ್ಲಿ ತಮಿಳುನಾಡಿನ ಚಿದಂಬರಂ ನಲ್ಲಿನ 1,500 ವರ್ಷ ಹಳೆಯ ನಟರಾಜ ದೇಗುಲದ ಆಡಳಿತವನ್ನು ತಮಿಳುನಾಡು ಸರಕಾರದಿಂದ ತೆರವುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದನ್ನು, ಸೋಮ ವಾರದ ವಿಚಾರಣೆ ವೇಳೆ ಸ್ಮರಿಸಿದ ನ್ಯಾಯ ಮೂರ್ತಿ ಬೋಬ್ದೆ, ಆ ತೀರ್ಪನ್ನು ಪುರಿ ಜಗನ್ನಾಥ ದೇಗುಲ ಪ್ರಕರಣದ ವಿಚಾರಣೆ ಸಂದ ರ್ಭದಲ್ಲೂ ಪರಿಗಣಿಸುವುದಾಗಿ ತಿಳಿಸಿದರು.
“”ತಮಿಳುನಾಡಿನ ಹಲವಾರು ದೇಗುಲಗಳಲ್ಲಿ ದೇವರ ಮೂರ್ತಿಗಳು ಕಳವಾಗಿರುವ ಪ್ರಕರಣ ಗಳು ಇನ್ನೂ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ದೇವರ ಮೂರ್ತಿಗಳು ಭಕ್ತರ ಪಾಲಿಗೆ ಅಮೂಲ್ಯ ವಾದಂಥವು. ಹೀಗಿರುವಾಗ, ದೇಗುಲ ದಲ್ಲಿ ಇಂಥ ಗುರುತರ ಕಳ್ಳತನ ಗಳಾ ಗುತ್ತಿದ್ದರೂ ದೇವಸ್ಥಾನಗಳ ನಿರ್ವಹಣೆ ಮಾಡುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ” ಎಂದು ನ್ಯಾ| ಬೋಬ್ದೆ ಹೇಳಿದ್ದಾರೆ. ವಿಚಾರಣೆ ವೇಳೆ, ಕಕ್ಷಿ ದಾರರಾದ ಗೋವ ರ್ಧನ ಮಠದ ಜಗದ್ಗುರು ಶಂಕರಾ ಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯವರ ಪರ ವಕೀಲ ಸುಚಿತ್ ಮೊಹಾಂತಿ ಮಾತ ನಾಡಿ, “”ಭಕ್ತರ ಧಾರ್ಮಿಕ ಆಚರಣೆಗಳಲ್ಲಿ ದೇಗು ಲದ ಆಡಳಿತ ಮಂಡಳಿಗಳು ಮೂಗು ತೂರಿಸುತ್ತಿರುವು ದರಿಂದಲೇ ಕೆಲವಾರು ಧಾರ್ಮಿಕ ಉತ್ಸವಗಳ ಸಂದರ್ಭಗಳಲ್ಲಿ ಕಾಲ್ತುಳಿತದಂಥ ಪ್ರಕರಣಗಳು ದೇಗುಲಗಳಲ್ಲಿ ಸಂಭವಿಸುತ್ತವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.