ಪ್ರವಾಸಕ್ಕೆ ವಿದೇಶವೇಕೆ? ಸ್ವದೇಶ ಸಾಕು


Team Udayavani, Aug 16, 2019, 5:02 AM IST

q-48

2022ರ ಒಳಗಾಗಿ ಕನಿಷ್ಠ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ದೇಶಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ನವದೆಹಲಿ: ಭಾರತವನ್ನು ವಿಶ್ವದ ಪ್ರವಾಸೋದ್ಯಮ ಭೂಪಟದಲ್ಲಿ ಗುರುತಿಸುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ನವದೆಹಲಿಯ ಕೆಂಪುಕೋಟೆಯಲ್ಲಿ 73ನೇ ಸ್ವಾತಂತ್ರ್ಯ ದಿನ ಪ್ರಯುಕ್ತ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದರು. ಪ್ರತಿ ವರ್ಷ 20 ಮಿಲಿಯಕ್ಕಿಂತಲೂ ಹೆಚ್ಚಿನ ದೇಶವಾಸಿಗಳು ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಅದರ ಬದಲಾಗಿ ದೇಶದ ಪ್ರವಾಸೋದ್ಯಮಕ್ಕೆ ಬಲ ತರಲು 2022ರ ಒಳಗಾಗಿ ಕನಿಷ್ಠ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ಪೀಳಿಗೆಗೆ ದೇಶದ ಸ್ಥಳಗಳ ಪರಿಚಯ, ಮಹತ್ವದ ಅರಿವು ಉಂಟಾಗುತ್ತದೆ ಎಂದರು. 2022ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ತಿಗೊಳ್ಳುತ್ತದೆ ಎಂದರು. ಹೋಗುವ ಸ್ಥಳದಲ್ಲಿ ಉತ್ತಮ ಹೊಟೇಲ್ ಮತ್ತು ಇತರ ವ್ಯವಸ್ಥೆಗಳು ಇಲ್ಲದಿದ್ದರೂ, ಅಲ್ಲಿಗೆ ತೆರಳಬೇಕು. ಇದರಿಂದಾಗಿ ಆ ಸ್ಥಳದಲ್ಲಿ ಹೊಸ ಚಟುವಟಿಕೆಗಳು ನಿರ್ಮಾಣವಾಗುತ್ತವೆ ಎಂದಿದ್ದಾರೆ ಪ್ರಧಾನಿ.

ಮೂಲ ಸೌಕರ್ಯಕ್ಕೆ 100 ಲಕ್ಷ ಕೋಟಿ: ‘ಈಗಿನ ಜನರ ಆಲೋಚನೆಗಳು ಬದಲಾಗಿವೆ” ಎಂದ ಮೋದಿ, ”ಹಿಂದೆಲ್ಲಾ ತಮ್ಮೂರಿಗೆ ಒಂದು ರೈಲ್ವೆ ನಿಲ್ದಾಣ ಬೇಕು ಎಂದು ಕೇಳುತ್ತಿದ್ದರು. ಮೂಲಸೌಕರ್ಯ ಅಭಿವೃದ್ಧಿಗಾಗಿ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಈಗ, ತಮ್ಮ ಪ್ರಾಂತ್ಯದಲ್ಲಿ ಉತ್ಕೃಷ್ಟಮಟ್ಟದ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯ ವ್ಯವಸ್ಥೆಗಳು ಬೇಕೆಂದು ಕೇಳುತ್ತಾರೆ. ನಾನು ಹೋದಲ್ಲೆಲ್ಲಾ ವಂದೇ ಭಾರತ್‌ ಎಕ್ಸ್‌ ಪ್ರಸ್‌ ಸೌಲಭ್ಯ ನಮ್ಮೂರಿಗೆ ಯಾವಾಗ ಬರುತ್ತೆ ಎಂದು ಕೇಳುತ್ತಾರೆ. ನಮ್ಮೂ.ರಿಗೆ ವಿಮಾನ ನಿಲ್ದಾಣ ಯಾವಾಗ ಬರುತ್ತೆ ಎಂದು ಪ್ರಶ್ನಿಸುತ್ತಾರೆ.

ದೇಶದ ಆಸ್ತಿ: ದೇಶದ ಪ್ರಗತಿಯಲ್ಲಿ ಕಾರ್ಪೊರೇಟ್ ವಲಯವು ನೀಡುವ ಕಾಣಿಕೆಯನ್ನು ಕೊಂಡಾಡಿದ ಮೋದಿ, ದೇಶದಲ್ಲಿ ಸಂಪತ್ತು ಸೃಷ್ಟಿಸುವವರನ್ನು ಅನುಮಾನಾಸ್ಪದವಾಗಿ ನೋಡಬಾರದು ಎಂದರು.

ಒಂದು ದೇಶ, ಒಂದು ಚುನಾವಣೆ: ಭಾರತವನ್ನು ಮಹಾನ್‌ ದೇಶವನ್ನಾಗಿಸಬೇಕೆಂದರೆ, ಚುನಾವಣೆಗಳಿಗಾಗಿ ತಾವು ಮಾಡುತ್ತಿರುವ ಖರ್ಚ, ವೆಚ್ಚವನ್ನು ಕಡಿಮೆ ಮಾಡಬೇಕು ಎಂದ ಪ್ರಧಾನಿ, ಈ ನಿಟ್ಟಿನಲ್ಲಿ ಒಂದು ದೇಶ, ಒಂದು ಚುನಾವಣೆಯ ಅವಶ್ಯಕತೆಯಿದೆ ಎಂದು ಪುನರುಚ್ಚರಿಸಿದರು.

ಭ್ರಷ್ಟಾಚಾರ ನಿರ್ಮೂಲನೆಗೆ ಪಣ: ‘ಭಾರತೀಯ ಜನರ ನಿತ್ಯ ಜೀವನದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳು ಎಂಬುವು ಗೆದ್ದಲು ಹುಳುಗಳಂತೆ ಹಾಸುಹೊಕ್ಕಿವೆ. ಭ್ರಷ್ಟಾಚಾರವಂತೂ ಒಂದು ಕಾಯಿಲೆಯಾಗಿ ಮಾರ್ಪಟ್ಟಿದೆ” ಎಂದು ಮೋದಿ ಅಭಿಪ್ರಾಯಪಟ್ಟರು.

ಶುಭಾಶಯ: ಆ. 19ರಂದು 100ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ ಅಪ್ಗಾನಿಸ್ತಾನಕ್ಕೆ ಪ್ರಧಾನಿ ಶುಭಾಶಯ ಕೋರಿದರು. ”ಅಪ್ಗಾನಿಸ್ತಾನವು ಭಾರತದ ಅತ್ಯುತ್ತಮ ನೆರೆಯ ದೇಶಗಳಲ್ಲೊಂದಾಗಿದೆ. ಅವರ 100ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ನನ್ನ ಹಾರ್ದಿಕ ಶುಭಾಶಯಗಳು” ಎಂದರು. ಭಯೋತ್ಪಾದನೆಯ ಯಾವುದೇ ಕೃತ್ಯಗಳನ್ನು ಭಾರತ ಸಹಿಸು ವುದಿಲ್ಲ ಎಂದು ಪಾಕ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಯಾವ ಪದ ಎಷ್ಟು ಬಾರಿ ಬಳಕೆ?
72 ನಿಮಿಷ- 1947ರಲ್ಲಿ ನೆಹರೂ ಮಾಡಿದ್ದ ಭಾಷಣ 2015ರ ವರೆಗೆ ದಾಖಲೆಯಾಗಿ ಉಳಿದಿತ್ತು.

ವಿದೇಶಗಳಲ್ಲಿಯೂ ಸ್ವಾತಂತ್ರ್ಯ ದಿನ
ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಪಾಕಿಸ್ತಾನ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿರುವ ಭಾರತೀಯ ಮೂಲದವರು ಗುರುವಾರ 73ನೇ ಸ್ವಾತಂತ್ರ್ಯ ದಿನವನ್ನು ಹರ್ಷೋಲ್ಲಾಸದಿಂದ ಆಚರಿಸಿದ್ದಾರೆ. ಎಲ್ಲೆಡೆ ತ್ರಿವರ್ಣ ಧ್ವಜಾರೋಹಣ ಮಾಡಲಾಗಿದೆ. ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಭಾರಿ ವಿಕ್ರಂ ಮಿಸ್ರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿರುವ ಹೈಕಮಿಷನ್‌, ಮೆಲ್ಬೊರ್ನ್, ಸಿಡ್ನಿ, ಪರ್ತ್‌ಗಳಲ್ಲಿರುವ ದೂತಾವಾಸ ಕಚೇರಿಗಳಲ್ಲಿ ಭಾರತೀಯ ಮೂಲದ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕೆಂಪುಕೋಟೆ ಸ್ವಚ್ಛ ಮಾಡಿದ ಮಕ್ಕಳು

ಪ್ರಧಾನಿ ಭಾಷಣ ಕೇಳಲು ಕೆಂಪುಕೋಟೆಗೆ ನೆರೆದಿದ್ದ ಮಕ್ಕಳು, ಕಾರ್ಯಕ್ರಮ ಮುಗಿದ ಬಳಿಕ ಮೈದಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌, ಕಸ, ಬಾಳೆ ಹಣ್ಣಿನ ಸಿಪ್ಪೆಯನ್ನು ಆರಿಸಿ, ಮೈದಾನವನ್ನು ಸ್ವಚ್ಛಗೊಳಿಸಿದ್ದು ಈ ಬಾರಿಯ ಸ್ವಾತಂತ್ರೋತ್ಸ ವದ ಪ್ರಮುಖವಾಗಿ ಗಮನ ಸೆಳೆದ ಸಂಗತಿಗಳಲ್ಲಿ ಒಂದು. ಈ ವಿದ್ಯಾರ್ಥಿಗಳೆಲ್ಲರೂ ರಾಜ್ಕೀಯ ಸರ್ವೋದಯ ವಿದ್ಯಾಲಯ ಶಾಲೆ ಮಕ್ಕಳು. ಅವರೆಲ್ಲರೂ ಸ್ವಚ್ಛತಾ ಕಾರ್ಯದಲ್ಲಿ ಸ್ವಇಚ್ಛೆಯಿಂದ ಪಾಲ್ಗೊಂಡಿ ದ್ದಾರೆ ಎಂದು ಶಾಲೆಯ ಶಿಕ್ಷಕ ರಾಜ್‌ ಕುಮಾರ್‌ ಮೌರ್ಯ ತಿಳಿಸಿದ್ದಾರೆ.

ಸ್ಥಾನಮಾನಕ್ಕೆ ಧಕ್ಕೆ ಇಲ್ಲ: ಮಲಿಕ್‌

ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಶ್ರೀನಗರದ ಶೇರ್‌-ಇ-ಕಾಶ್ಮೀರ್‌ ಕ್ರೀಡಾಂಗಣದಲ್ಲಿ ಮಾತನಾಡಿದ ರಾಜ್ಯಪಾಲ ಸತ್ಯಪಾಲ್ ಮಲಿಕ್‌ ಸಂವಿಧಾನದ 370ನೇ ವಿಧಿ ರದ್ದುಗೊಂಡ ಬಳಿಕ ರಾಜ್ಯದಲ್ಲಿರುವ ಮೂಲ ಜನರಿಗೆ ಇರುವ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕೇಂದ್ರ ಕೈಗೊಂಡಿರುವ ಈ ಐತಿಹಾಸಿಕ ಕ್ರಮದಿಂದ ಕಣಿವೆ ರಾಜ್ಯಕ್ಕೆ ಅನುಕೂಲವೇ ಆಗಲಿದೆ. ಈ ನಿರ್ಧಾರದಿಂದಾಗಿ ಅಭಿವೃದ್ಧಿಯ ಹೊಸ ಬಾಗಿಲುಗಳು ತೆರೆಯಲಿವೆ. ಹಿಂದಿನ ಚುನಾವಣೆಗಳಲ್ಲಿ ಉದ್ಯೋಗ, ಬಟ್ಟೆ, ವಸತಿ ಪ್ರಸ್ತಾಪವೇ ಆಗಿರಲಿಲ್ಲ ಎಂದು ಹೇಳಿದರು.

ಪಾಕ್‌ನಿಂದ ಸ್ವಾತಂತ್ರ್ಯ ಕೊಡಿಸಿ

ಪಾಕಿಸ್ತಾನದ ಬಲೂಚಿಸ್ತಾನ ಭಾಗದ ಜನರು ಗುರುವಾರ ಸೌಹಾರ್ದ ದಿನವನ್ನು ಆಚರಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಕೊಡಿಸಿ ಎಂದೂ ಭಾರತವನ್ನು ಕೇಳಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಬಲೂಚಿಸ್ತಾನದ ವಿಚಾರವನ್ನು ಭಾರತ ಪ್ರಸ್ತಾಪಿಸಬೇಕು ಎಂದು ಬಲೂಚಿಸ್ತಾನದ ಹೋರಾಟಗಾರರು ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ನನ್ನ ಎಲ್ಲ ಭಾರತೀಯ ಸೋದರ ಸೋದರಿಯರಿಗೂ ಶುಭಾಶಯ ಕೋರುತ್ತೇನೆ. ಕಳೆದ 70 ವರ್ಷಗಳಲ್ಲಿ ಭಾರತದ ಯಶಸ್ಸಿನಿಂದಾಗಿ ಭಾರತೀಯರು ಹೆಮ್ಮೆ ಪಡುತ್ತಾರೆ. ಭಾರತೀಯರ ಸೌಹಾರ್ದತೆ ಮತ್ತು ಸಹಾಯಕ್ಕೆ ಬಲೂಚಿಯರು ಧನ್ಯವಾದ ತಿಳಿಸುತ್ತಿದ್ದೇವೆ. ಭಾರತವು ಸ್ವತಂತ್ರ ಬಲೂಚಿಸ್ತಾನದ ಧ್ವನಿಯನ್ನು ಎಲ್ಲ ವೇದಿಕೆಯಲ್ಲೂ ಪ್ರಸ್ತಾಪಿಸಬೇಕು ಎಂದು ಬಲೂಚಿ ಹೋರಾಟಗಾರ ಅಟ್ಟಾ ಬಲೂಚ್ ಹೇಳಿದ್ದಾರೆ.

ಸೋನಿಯಾರಿಂದ ಧ್ವಜಾರೋಹಣ

ಕಾಂಗ್ರೆಸ್‌ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಳಿಕ ಸೋನಿಯಾ ಗಾಂಧಿ ಪಕ್ಷದ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತಾಂಧತೆ ಮತ್ತು ಧರ್ಮಾಂಧತೆಗೆ ಭಾರತದಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ತಾರತಮ್ಯ, ಅಸಹಿಷ್ಣುತೆ ವಿರುದ್ಧ ಯಾವತ್ತೂ ಸಿಡಿದೇಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ದೇಶದಲ್ಲಿ ಸಹಜೀವನ ಮತ್ತು ಎಲ್ಲರನ್ನೂ ಸೇರಿಸಿಕೊಂಡ ಅಭಿವೃದ್ಧಿ ಅವಕಾಶಗಳು ಇರುವಂತಾಗಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಪಾಕ್‌ನಲ್ಲಿ ಕರಾಳ ದಿನ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆದು  ದನ್ನು ಪ್ರತಿಭಟಿಸುತ್ತಿರುವ ಪಾಕಿಸ್ತಾನದಲ್ಲಿ ಆ.15ನ್ನು ಕರಾಳ ದಿನವಾಗಿ ಆಚರಿಸಲಾಗಿದೆ. ಆ ದೇಶದ ಪ್ರಮುಖ ನಗರಗಳಲ್ಲಿನ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಧ್ವಜ ಕಟ್ಟಲಾಗಿತ್ತು. ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ಪಿಎಂ ಇಮ್ರಾನ್‌ ಖಾನ್‌, ವಿದೇಶಾಂಗ ಸಚಿವಾಲಯ ಸೇರಿದಂತೆ ಪ್ರಮುಖ ಕಚೇರಿಗಳು ಮತ್ತು ನಾಯಕರ ಟ್ವಿಟರ್‌ ಖಾತೆಗಳಲ್ಲಿ ಕಪ್ಪು ಧ್ವಜ ಹಾಕಿಕೊಂಡಿದ್ದರು. ಬುಧವಾರ ಸ್ವಾತಂತ್ರ್ಯ ದಿನ ಜತೆಗೆ ‘ಕಾಶ್ಮೀರಿ ನಾಗರಿಕರಿಗೆ ಬೆಂಬಲ ಘೋಷಿಸುವ ದಿನ’ವನ್ನಾಗಿಯೂ ಆಚರಿಸಲಾಗಿತ್ತು.

ಟಾಪ್ ನ್ಯೂಸ್

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.