ನಿವೃತ್ತ ಕರ್ನಲ್‌ ಬಳಿ ವನ್ಯಜೀವಿ ಚರ್ಮ, ಶಸ್ತ್ರಾಸ್ತ್ರ!

Team Udayavani, May 1, 2017, 10:40 AM IST

JINKE.jpg

ಮೀರತ್‌: ಅದು ಸೇನೆಯ ನಿವೃತ್ತ ಅಧಿಕಾರಿಯೊಬ್ಬರ ಮನೆ. ಅವರ ಪುತ್ರ ರಾಷ್ಟ್ರ ಮಟ್ಟದ ಶೂಟರ್‌. ಶನಿವಾರ ಸಂಜೆ ಉತ್ತರಪ್ರದೇಶದ ಮೀರತ್‌ನಲ್ಲಿರುವ ಇವರ ನಿವಾಸದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಅರಣ್ಯ ಅಧಿಕಾರಿಗಳ ತಂಡವು ದಾಳಿ ನಡೆಸಿದಾಗ ಸಿಕ್ಕಿದ್ದೇನು ಗೊತ್ತೇ?

ಬರೋಬ್ಬರಿ 117 ಕೆ.ಜಿ. ನೀಲಿಜಿಂಕೆ (ನೀಲ್‌ಗಾಯ್‌)ಯ ಮಾಂಸ, ವನ್ಯಜೀವಿಗಳ ಚರ್ಮ, ದಂತ, 140 ಶಸ್ತ್ರಾಸ್ತ್ರಗಳು, ವಿದೇಶಿ ನಿರ್ಮಿತ 50 ಸಾವಿರ ಕಾಟ್ರಿìಡ್ಜ್ ಗಳು, 1 ಕೋಟಿ ರೂ. ನಗದು!

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಂಡವು ನಿವೃತ್ತ ಕರ್ನಲ್‌ ದೇವೀಂದ್ರ ಕುಮಾರ್‌ ಅವರ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಅಕ್ರಮ ವನ್ಯಜೀವಿ ಬೇಟೆ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಯುತ್ತಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಮನೆಯೊಳಗಿರುವ ದಾಸ್ತಾನು ಮಳಿಗೆಯಲ್ಲಿ ಜಿಂಕೆಗಳ 5 ತಲೆಬುರುಡೆಗಳು,  ಸಂಬಾರ್‌(ದೊಡ್ಡ ಜಿಂಕೆಯ ತಳಿ) ಜಿಂಕೆಯ ಕೊಂಬುಗಳು, ಚಿಗರೆ ಮತ್ತು ಕೃಷ್ಣಮೃಗಗಳ ಕವಲುಗೊಂಬುಗಳು, ಪ್ರಾಣಿಗಳ ಚರ್ಮ ಹಾಗೂ ದಂತ, 50 ಸಾವಿರ  ಸಿಡಿಮದ್ದುಗಳು, ಲೈಸೆನ್ಸ್‌ ಹೊಂದಿರುವ ಮತ್ತು ಹೊಂದಿಲ್ಲದ 140 ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳನ್ನೇ ದಂಗುಬಡಿಸಿದೆ.

17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ತಂಡ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ದಂಧೆಯಲ್ಲಿ ವಿದೇಶಿ ವ್ಯಕ್ತಿಯೊಬ್ಬರೂ ಭಾಗಿಯಾಗಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿವೃತ್ತ ಕರ್ನಲ್‌ ದೇವೀಂದ್ರ ಕುಮಾರ್‌ ಅವರು ಬರೇಲಿಯಲ್ಲಿ ಕಾಲೇಜುವೊಂದನ್ನು ಹೊಂದಿದ್ದಾರೆ.

ಪುತ್ರ ರಾಷ್ಟ್ರಮಟ್ಟದ ಶೂಟರ್‌
ಕ.ದೇವೀಂದ್ರ ಕುಮಾರ್‌ ಅವರ ಪುತ್ರ ಪ್ರಶಾಂತ್‌ ಬಿಷ್ಣೋಯ್‌ ರಾಷ್ಟ್ರಮಟ್ಟದ ಸ್ಕೀಟ್‌ ಶೂಟರ್‌ ಆಗಿದ್ದು, ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ 60ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, 65ನೇ ಸ್ಥಾನ ಪಡೆದಿದ್ದರು. ನ್ಯಾಶನಲ್‌ ರೈಫ‌ಲ್‌ ಅಸೋಸಿಯೇಷನ್‌ ಆಫ್ ಇಂಡಿಯಾ(ಎನ್‌ಆರ್‌ಎಐ)ವು ಪ್ರಶಾಂತ್‌ರನ್ನು “ಖ್ಯಾತ ಶೂಟರ್‌’ ಎಂದು ಗುರುತಿಸಿತ್ತು. ಹೀಗಾಗಿ, ಅವರಿಗೆ ತಲಾ 12 ಬೋರ್‌ಗಳಿರುವ ಎರಡು ರೈಫ‌ಲ್‌ಗ‌ಳಿಗೆ ಪರವಾನಿಗೆಯನ್ನೂ ನೀಡಲಾಗಿತ್ತು. ವಿಶೇಷವೆಂದರೆ, ಇತ್ತೀಚೆಗೆ ನೀಲಿಜಿಂಕೆಗಳು ಬೆಳೆ ನಾಶ ಮಾಡುತ್ತವೆಂದು ಅವುಗಳನ್ನು ಬೇಟೆಯಾಡಲು ಬಿಹಾರ ಸರಕಾರ  ಅವಕಾಶ ಕಲ್ಪಿಸಿತ್ತು. ಅದಕ್ಕಾಗಿ, ಬಿಹಾರಕ್ಕೆ ಬೇಟೆಗೆಂದು ಕಳುಹಿಸಲಾಗಿದ್ದ ಬೇಟೆಗಾರರ ತಂಡದಲ್ಲೂ ಪ್ರಶಾಂತ್‌ ಒಬ್ಬನಾಗಿದ್ದ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.