2022: ಸ್ನೇಹ ವರ್ಷ: ಆಸಿಯಾನ್‌ ಬಾಂಧವ್ಯ ಹಿನ್ನೆಲೆಯಲ್ಲಿ ಮೋದಿ ಘೋಷಣೆ

Team Udayavani, Oct 29, 2021, 7:00 AM IST

2022: ಸ್ನೇಹ ವರ್ಷ: ಆಸಿಯಾನ್‌ ಬಾಂಧವ್ಯ ಹಿನ್ನೆಲೆಯಲ್ಲಿ ಮೋದಿ ಘೋಷ ಣೆ

ಹೊಸದಿಲ್ಲಿ: “ಆಸಿಯಾನ್‌ ಒಕ್ಕೂಟದ ಏಕತೆ ಹಾಗೂ ಕೇಂದ್ರೀಯತೆ ಭಾತರದ ಪಾಲಿಗೆ ಎಂದಿಗೂ ಪ್ರಮುಖವಾದ ವಿಚಾರವಾಗಿದೆ. ಈ ವರ್ಷ ಭಾರತ, ತನ್ನ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದಲ್ಲಿದೆ. ಮುಂದಿನ ವರ್ಷ ಆಸಿಯಾನ್‌ ಹಾಗೂ ಭಾರತ ನಡುವಿನ ಸ್ನೇಹ ಶುರುವಾಗಿ 30 ವರ್ಷಗಳಾಗಲಿರುವ ಹಿನ್ನೆಲೆಯಲ್ಲಿ 2022ನೇ ವರ್ಷವನ್ನು ಆಸಿಯಾನ್‌-ಭಾರತ ಸ್ನೇಹ ವರ್ಷ ವೆಂದು ಆಚರಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುರುವಾರದಂದು ಆರಂಭವಾದ ಆಸಿಯಾನ್‌ ಶೃಂಗಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾಗಿ ಮಾತನಾಡಿದ ಮೋದಿ, ಇಂಡೋ ಪೆಸಿಫಿಕ್‌ ಪ್ರಾಂತ್ಯದಲ್ಲಿರುವ ರಾಷ್ಟ್ರಗಳ ಸಾರ್ವ ಭೌಮತೆಯನ್ನು ಕಾಪಾಡಲು ಆಸಿಯಾನ್‌ ಒಕ್ಕೂಟ ಹೊಂದಿರುವ ಆಶಯಗಳಿಗೆ ಭಾರತ ಬದ್ಧವಾಗಿದೆ. ಅದಕ್ಕನುಗುಣವಾಗಿ, ಇಂಡೋ ಪೆಸಿಫಿಕ್‌ ಓಶಿಯನ್ಸ್‌ ಇನಿಶಿಯೇಟಿವ್ಸ್‌ (ಐಪಿಒಐ) ಹಾಗೂ ಆಸಿಯಾನ್‌ನ ಔಟ್‌ಲುಕ್‌ ಫಾರ್‌ದ ಇಂಡೋ-ಪೆಸಿಫಿಕ್‌ ಮಾರ್ಗ ಸೂಚಿಗಳನ್ನು ಗೌರವಿಸುವುದರೊಂದಿಗೆ ಅವುಗಳ ಅನುಷ್ಠಾನಕ್ಕೆ ಗುರುತರ ಸಹಕಾರ ನೀಡಲಿದೆ ಎಂದು ತಿಳಿಸಿದರು.

“ಆಸಿಯಾನ್‌ ರಾಷ್ಟ್ರಗಳೊಂದಿಗೆ ಭಾರತದ ಅನುಬಂಧ ಸಹಸ್ರ ವರ್ಷಗಳಷ್ಟು ಹಳೆಯದ್ದು. ಭಾರತ ಮತ್ತು ಈ ರಾಷ್ಟ್ರಗಳ ಮೌಲ್ಯಗಳು, ಸಂಸ್ಕೃತಿ, ಆಹಾರ ಹಾಗೂ ಇನ್ನಿತರ ಹಲವಾರು ವಿಚಾರ ಗಳಲ್ಲಿರುವ ಸಾಮ್ಯತೆಯೇ ಇದನ್ನು ಸಾರಿ ಹೇಳುತ್ತದೆ. ಇಂಥ ಅನುಬಂಧವಿರುವ ರಾಷ್ಟ್ರಗಳ ನಡುವೆ ಇಂದು ಹಿಂದೆಂದಿಗಿಂತ ಹೆಚ್ಚಿನ ಸಹಕಾರದ ಅಗತ್ಯವಿದೆ. ನಾವೆಲ್ಲರೂ ಇಂದು ಕೊರೊನೋತ್ತರ ಸಂಕಷ್ಟ ದಲ್ಲಿದ್ದೇವೆ. ಹಾಗಾಗಿ ನಾವೆಲ್ಲರೂ ಪರಸ್ಪರ ಸಹಕಾರ, ಕರುಣೆಯೊಂದಿಗೆ ಸಶಕ್ತರಾಗಲು ಪ್ರಯತ್ನಿಸಬೇಕಿದೆ’ ಎಂದು ಮೋದಿ ಆಶಿಸಿದರು. ಜತೆಗೆ “ಭಾರತದ “ಆ್ಯಕ್ಟ್ ಈಸ್ಟ್‌ ಪಾಲಿಸಿ’ ಹಾಗೂ “ಸೆಕ್ಯುರಿಟಿ ಆ್ಯಂಡ್‌ ಗ್ರೋತ್‌ ಫಾರ್‌ ಆಲ್‌ ಇನ್‌ ದ ರೀಜನ್‌’ (ಎಸ್‌ಎಜಿಎಆರ್‌) ವಿಚಾರಗಳಿಗೆ ಆಸಿಯಾನ್‌ ರಾಷ್ಟ್ರಗಳು ಸಹಕಾರ ನೀಡಬೇಕು’ ಎಂದು ಕೋರಿದರು.

ಇದೇ ವೇಳೆ, 2021ರಲ್ಲಿ ಆಸಿಯಾನ್‌ನ ಅಧ್ಯಕ್ಷ ಸ್ಥಾನ ವಹಿಸಿರುವ ಬ್ರುನೆಯ್‌ನ ಮಹಾರಾಜರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

ನಾಲ್ಕು ದಿನಗಳ ಪಿಎಂ  ವಿದೇಶ ಪ್ರವಾಸ ಶುರು :

ಪ್ರಧಾನಿ ಮೋದಿಯವರ ನಾಲ್ಕು ದಿನಗಳ ವಿದೇಶ ಪ್ರವಾಸ ಶುಕ್ರವಾರದಿಂದ ಆರಂಭವಾಗಲಿದೆ. ಅ.29ರಿಂದ ಅ.31ರ ವರೆಗೆ ಇಟಲಿಯ ರೋಮ್‌ ನಲ್ಲಿ  ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅನಂತರ ನ.1, 2ರಂದು

ಯು.ಕೆ.ಯ ಗ್ಲಾಸ್ಗೊದಲ್ಲಿ ನಡೆಯಲಿರುವ ಹವಾಮಾನ ಶೃಂಗದಲ್ಲೂ ಭಾಗವಹಿಸಲಿದ್ದಾರೆ. ಈ ಕುರಿತಂತೆ ಗುರುವಾರ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ “ರೋಮ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಕೊರೊನೋತ್ತರ ಜಗತ್ತಿನಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಸಾಧಿಸಬೇಕಿರುವ ಆರ್ಥಿಕ ಚೇತರಿಕೆ ಬಗ್ಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಚರ್ಚಿಸುತ್ತೇನೆ. ಗ್ಲಾಸೊYàದಲ್ಲಿ  ಜಾಗತಿಕ ತಾಪಮಾನ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ನಡೆಯಲಿರುವ ಶೃಂಗಸಭೆಯಲ್ಲಿ ಅಂಥ ದುಷ್ಪರಿಣಾಮಗಳಿಂದ ಪಾರಾಗುವ ಬಗ್ಗೆ ಭಾರತ ಹೊಂದಿರುವ ನಿಲುವು ಹಾಗೂ ಅದಕ್ಕೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಸಿಗ ಬೇಕಾದ ಸಹಕಾರಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.  ಇದೇ ಪ್ರವಾಸದ ವೇಳೆ, ಇಟಲಿಯ ಪ್ರಧಾನಿ ಮರಿಯೊ ಡ್ರಾ ಯವರ ಆಹ್ವಾನದ ಮೇರೆಗೆ ವ್ಯಾಟಿಕನ್‌ ಸಿಟಿಗೆ ಭೇಟಿ ನೀಡಲಿರು ವುದಾಗಿಯೂ ಪ್ರಧಾನಿ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.