ಗುಂಡು ಹಾರಿಸಿದ್ರೆ ನಾವು ಸುಮ್ಮನಿರಲ್ಲ
Team Udayavani, Oct 31, 2017, 6:10 AM IST
ಹೊಸದಿಲ್ಲಿ/ಬೀಜಿಂಗ್: “ಪಾಕಿಸ್ಥಾನ ಅಪ್ರ ಚೋದಿತ ಗುಂಡಿನ ದಾಳಿ ನಡೆಸಿದರೆ ಭಾರತ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿಯೇ ನೀಡುತ್ತದೆ.’ ಹೀಗೆಂದು ಖಡಕ್ ಆಗಿ ಹೇಳಿದ್ದು ಭಾರತದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆ.ಜ.ಎ.ಜೆ.ಭಟ್.
ಎರಡು ದೇಶಗಳ ಡಿಜಿಎಂಒಗಳ ನಡುವೆ ಏಕಾಏಕಿ ಸೋಮವಾರ ಹಾಟ್‌ಲೆçನ್ ಮೂಲಕ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಪಾಕಿಸ್ಥಾನದ ಡಿಜಿಎಂಒ ಮೇ.ಜ.ಶಾಹಿರ್ ಶಂಶಾದ್ ಮಿರ್ಜಾ ಗಡಿ ನಿಯಂತ್ರಣ ರೇಖೆಯ ಸರಹದ್ದಿನಲ್ಲಿ ಭಾರತದ ಸೇನಾಪಡೆಗಳು ಪ್ರಚೋದನೆ ಇಲ್ಲದೆ ಗುಂಡು ಹಾರಿಸುತ್ತಿವೆ ಎಂದು ಆರೋಪಿದರು. ಆದರೆ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ ಲೆ.ಜ.ಎ.ಜೆ.ಭಟ್, “ಪಾಕಿಸ್ಥಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಾಗ ಸಹಜವಾಗಿಯೇ ಅದನ್ನು ಭಾರತದ ಸೈನಿಕರು ತಡೆಯಲು ಗುಂಡು ಹಾರಿಸಲೇಬೇಕಾಗುತ್ತದೆ. ಉಗ್ರರಿಗೆ ಪಾಕಿಸ್ಥಾನದ ಸೈನಿಕರು ಬೆಂಗಾವಲಾಗಿ ನಿಂತು, ಗುಂಡು ಹಾರಿಸಿದಾಗ ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲೇಬೇಕಾಗುತ್ತದೆ’ ಖಡಕ್ ಆಗಿ ಉತ್ತರಿಸಿದರು.
ನಾಗರಿಕರ ನಿಯೋಜನೆ: ಎಲ್‌ಒಸಿಯಾದ್ಯಂತ ಇರುವ ಮುಂಚೂಣಿ ನೆಲೆಗಳಲ್ಲಿ ಪಾಕಿಸ್ಥಾನ ಸೇನೆ ನಾಗರಿಕರನ್ನೇ ನಿಯೋಜಿಸಿದೆ. ಅದಕ್ಕಾಗಿಯೇ ಪರವಾನಗಿ ಪಡೆದುಕೊಂಡಿದೆ ಎಂದು ಸೇನೆ ಹೇಳಿದೆ. ಅವರ ಮೂಲಕ ಭಾರತದ ಕಡೆ ಇರುವ ಸೇನಾ ನೆಲೆಯ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ ಎಂದು ಸೇನೆ ಹೇಳಿಕೊಂಡಿದೆ.
ಜೈಶ್ ಉಗ್ರ ಮಸೂದ್‌ಗೆ ಮತ್ತೆ ಚೀನ ಬೆಂಬಲ
ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿಯ ರೂವಾರಿ, ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವುದು ಭಾರತಕ್ಕೆ ಈ ಬಾರಿಯೂ ಸಾಧ್ಯವಾಗ ಲಿಕಿಲ್ಲ. ಏಕೆಂದರೆ ಅದಕ್ಕೆ ಸಂಬಂಧಿಸಿದ ಅವಧಿ ಗುರುವಾರ ಮುಕ್ತಾಯವಾಗ ಲಿದ್ದು, ಅಮೆರಿಕ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸದಸ್ಯರಾಗಿ ರುವ ಸಮಿತಿಯಲ್ಲಿ ಚೀನವೂ ಪ್ರಮುಖ ಭಾಗೀದಾರಿ. ಅದೇ ಸಮಿತಿ ಸಭೆ ನಡೆಯಲಿದ್ದು, ಪಾಕಿಸ್ಥಾನದ ಸ್ನೇಹ ರಾಷ್ಟ್ರ ಚೀನ ಮತ್ತೂಮ್ಮೆ ಅದರ ಪರವಾಗಿ ಧ್ವನಿ ಎತ್ತಲಿದೆ. ಈ ಬಗ್ಗೆ ಬೀಜಿಂಗ್‌ನಲ್ಲಿ ಚೀನದ ವಿದೇಶಾಂಗ ಇಲಾಖೆ ವಕ್ತಾರರೇ ಸುಳಿವು ನೀಡಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಪಾಕ್ ಪಾತ್ರ ಧನಾತ್ಮಕವಾಗಿಯೇ ಇದೆ ಎಂದು ಮತ್ತೂಮ್ಮೆ ಚೀನ ಸಮರ್ಥನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.