ಪರಿಶುದ್ಧನಾಗಿ ಮೂಡಿಬಂದ ಬಳಿಕವೇ ಸಕ್ರಿಯ ರಾಜಕಾರಣ: ವಾದ್ರಾ
Team Udayavani, Mar 7, 2019, 6:05 AM IST
ಹೊಸದಿಲ್ಲಿ : ‘ನನ್ನ ವಿರುದ್ಧದ ಹಣ ಅಕ್ರಮಗಳ ಕೇಸುಗಳಲ್ಲಿ ಪರಿಶುದ್ಧನಾಗಿ ಮೂಡಿ ಬಂದ ಬಳಿಕವೇ ನಾನು ಸಕ್ರಿಯ ರಾಜಕಾರಣ ಪ್ರವೇಶಿಸುವೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪತಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ, ರಾಬರ್ಟ್ ವಾದ್ರಾ ಹೇಳಿದ್ದಾರೆ.
“ನಾನು ಏನನ್ನೂ ಮುಚ್ಚಿಡಲು ಬಯಸುವುದಿಲ್ಲ; ನನ್ನ ಎಲ್ಲ ಕೆಲಸ ಕಾರ್ಯಗಳು ಕಾನೂನಿನ ಚೌಕಟ್ಟಿನೊಳಗೇ ಇವೆ; ನಾನು ಕಾನೂನಿನ ಪ್ರಕಾರ ನಡೆದುಕೊಳ್ಳುವವನು ಮತ್ತು ಏನನ್ನೂ ಅಡಗಿಸಿಡದವನು; ನನ್ನ ವಿರುದ್ಧದ ಸುಳ್ಳು ಕೇಸುಗಳಲ್ಲಿ ನಾನು ಪರಿಶುದ್ಧನಾಗಿ ಮೂಡಿ ಬರುವ ತನಕ ನಾನು ರಾಜಕಾರಣ ಪ್ರವೇಶಿಸುವುದಿಲ್ಲ; ಇದು ನನ್ನ ಆಶ್ವಾಸನೆ’ ಎಂದು ವಾದ್ರಾ ಹೇಳಿದರು.
‘ನಾನು ಈ ದೇಶದಲ್ಲಿ ಇದ್ದೇನೆ; ದೇಶವನ್ನು ಲೂಟಿ ಮಾಡಿದವರು ದೇಶದಿಂದ ಪಲಾಯನ ಮಾಡಿದ್ದಾರೆ; ಅಂತಿರುವಾಗ ಅವರ ಬಗ್ಗೆ ಏನು ?’ ಎಂದು ಪ್ರಶ್ನಿಸುವ ಮೂಲಕ ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಪರೋಕ್ಷವಾಗಿ ಉಲ್ಲೇಖೀಸಿದರು.
ಪತ್ನಿ ಪ್ರಿಯಾಂಕಾ ಸಕ್ರಿಯ ರಾಜಕಾರಣ ಪ್ರವೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ವಾದ್ರಾ, ಇಡಿಯ ಕುಟುಂಬವೇ ಆಕೆಯ ಬೆಂಬಲಕ್ಕಿದೆ ಎಂದು ಹೇಳಿದರು. ಆಕೆಯ ಜತೆಗೆ ತಾನೂ ಸಕ್ರಿಯ ರಾಜಕಾರಣ ಪ್ರವೇಶಿಸುವೆನೆಂಬ ಊಹಾಪೋಹಗಳಿಗೆ ವಾದ್ರಾ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.