ಉದ್ಧವ್ ಟೀಕೆಗೆ ಸೂಕ್ತ ಸಮಯದಲ್ಲಿ ಉತ್ತರ: ಸಿಎಂ ಫಡ್ನವೀಸ್
Team Udayavani, Jan 2, 2019, 6:06 AM IST
ಮುಂಬಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಚೌಕಿದಾರ್ ಕುರಿತ ಟೀಕೆಗೆ ಸರಿಯಾದ ಸಮಯದಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಫಡ್ನವೀಸ್ ತಿಳಿಸಿದ್ದಾರೆ.
ಇತ್ತೀಚೆಗೆ ಪಂಢರಾಪುರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಠಾಕ್ರೆ ಕಾವಲುಗಾರರು ಕಳ್ಳರಾಗಿದ್ದಾರೆ ಎಂಬ ಕಾಂಗ್ರೆಸ್ ಘೋಷಣೆಗೆ ಧ್ವನಿಗೂಡಿಸಿದ್ದರು. ಒಂದು ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ (ಕಾವಲುಗಾರ ಕಳ್ಳನಾಗಿದ್ದಾನೆ) ಎಂದು ಟೀಕಾಪ್ರಹಾರ ಮಾಡಿ ಚರ್ಚೆಗೆ ಗ್ರಾಸವಾಗಿದ್ದರು.
ಸೋಮವಾರ ಇಲ್ಲಿನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್ ಅವರು, ಪ್ರತಿಯೊಂದು ಪ್ರತ್ಯುತ್ತರವು ತನ್ನದೇ ಆದ ಸಮಯವನ್ನು ಹೊಂದಿದ್ದು, ಅದಕ್ಕಾಗಿ ಕಾಯಬೇಕಾಗಿದೆ. ಯಾರು ಯಾವ ಸಂದರ್ಭದಲ್ಲಿ ಏನನ್ನು ಹೇಳಿರುವರೋ ಅದಕ್ಕೆ ನಾವು ಸರಿಯಾದ ಸಮಯದಲ್ಲಿ ಸೂಕ್ತವಾದ ಪ್ರತ್ಯುತ್ತರವನ್ನು ನೀಡುತ್ತೇವೆ ಎಂದರು. ಆದಾಗ್ಯೂ, ಕೂಡಲೇ ಅವರು, ಎರಡೂ ಪಕ್ಷಗಳು ಮುಂಬರುವ ಚುನಾವಣೆ ಗಳಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದೂ ಪುನರುಚ್ಚರಿಸಿದರು.
ಮುಂಬರುವ ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಕಾಂಗ್ರೆಸ್-ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಿ ಎನ್‌ಡಿಎ ಸರಕಾರವನ್ನು ಮರಳಿ ಆಡಳಿತಕ್ಕೆ ತರಲಿದೆ ಎಂದವರು ಪ್ರತಿಪಾದಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧದ ಶಿವಸೇನೆಯ ಟೀಕೆಗಳಿಗೆ ನಾವು ಪ್ರಾಮುಖ್ಯತೆ ನೀಡುವು ದಿಲ್ಲ. ಇಂತಹ ಟೀಕಾ-ಟಿಪ್ಪಣಿಗಳು ಉರಿಯುವ ಸೂರ್ಯನ ಮೇಲೆ ಉಗುಳುವ ಹಾಗೆ. ಮೋದಿ ಅವರು ದೇಶಕ್ಕಾಗಿ ತಮ್ಮ ಕುಟುಂಬದ ಬಗ್ಗೆ ಯೋಚಿಸದೆ ಅಥವಾ ಯಾವುದೇ ವೈಯಕ್ತಿಕ ಲಾಭಗಳಿಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದಾಗಿದೆ ಎಂದರು.
ಎನ್‌ಸಿಪಿ ಜತೆ ಕೈಜೋಡಿಸಿರಲಿಲ್ಲ
ಅಹ್ಮದ್‌ನಗರದಲ್ಲಿ ಮೇಯರ್ ಸ್ಥಾನವನ್ನು ಪಡೆಯಲು ಬಿಜೆಪಿ ಎನ್‌ಸಿಪಿಯೊಂದಿಗೆ ಕೈಜೋಡಿಸಿ ರಲಿಲ್ಲ. ವಾಸ್ತವವಾಗಿ ನಾವು ಶಿವಸೇನೆಗೆ ಬೇಷರತ್ ಬೆಂಬಲ ನೀಡಲು ಬಯಸಿದ್ದೆವು ಎಂದು ಫಡ್ನವೀಸ್ ಅವರು ಹೇಳಿದ್ದಾರೆ. ಶಿವಸೇನೆಯು ಮೈತ್ರಿಯ ಪ್ರಸ್ತಾವ ಅಥವಾ ವಿನಂತಿಯೊಂದಿಗೆ ಮುಂದೆ ಬಂದರೆ ಅದರೊಂದಿಗೆ ಮೈತ್ರಿಮಾಡಿಕೊಳ್ಳುವಂತೆ ನಾನು ನಮ್ಮ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದೆ. ಕೊನೆಯ ನಿಮಿಷದವರೆಗೂ ನಾವು ಕಾದುಕುಳಿತಿದ್ದೆವು, ಆದರೆ ಶಿವಸೇನೆ ನಮಗೆ ಯಾವುದೇ ಪ್ರಸ್ತಾವವನ್ನು ನೀಡಿಲಿಲ್ಲ. ಅಂತೆಯೇ, ನಾವು ಎನ್‌ಸಿಪಿಯಿಂದಲೂ ಬೆಂಬಲವನ್ನು ಕೇಳಿರಲಿಲ್ಲ. ಅವರು ಸ್ವ-ಇಚ್ಛೆಯಿಂದ ನಮಗೆ ಬೆಂಬಲ ನೀಡಿದರು. ಆದ್ದರಿಂದ, ಈ ಬಗ್ಗೆ ಎನ್‌ಸಿಪಿಯನ್ನು ಪ್ರಶ್ನಿಸಬೇಕೇ ಹೊರತೂ ನಮ್ಮನ್ನಲ್ಲ ಎಂದು ಸಿಎಂ ಫಡನ್ವೀಸ್ ನುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.