ಮೋದಿ ನಿವೃತ್ತರಾದ ದಿನವೇ ರಾಜಕೀಯ ತೊರೆಯುವೆ: ಸಚಿವೆ ಸ್ಮ್ರತಿ ಇರಾನಿ
Team Udayavani, Feb 4, 2019, 5:29 AM IST
ಪುಣೆ : ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯದಿಂದ ನಿವೃತ್ತರಾದ ದಿನವೇ ನಾನು ರಾಜಕೀಯವನ್ನು ತೊರೆಯುವೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.
‘ಆದರೆ ಪ್ರಧಾನಿ ಮೋದಿ ಅವು ಇನ್ನೂ ಬಹಳಷ್ಟು ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವದು ಖಚಿತವಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಇರಾನಿ ಅವರು ಇಲ್ಲಿ ನಡೆದ ವರ್ಡ್ಸ್ ಕೌಂಟ್ ಉತ್ಸವದಲ್ಲಿ ಏರ್ಪಡಿಸಲಾಗಿದ್ದ ‘Scripting Her Story, From Star to Star Campaigner’ ಎಂಬ ವಿಷಯ ಕುರಿತಾದ ಚರ್ಚೆಯಲ್ಲಿ ಹೇಳಿದರು.
‘ನೀವು ಈ ದೇಶದ ಪ್ರಧಾ ನ ಸೇವಕ ರಾಗುವುದನ್ನು (ಪ್ರಧಾನಿ ಆಗುವುದನ್ನು) ನಾವು ಯಾವಾಗ ಕಾಣುವೆವು’ ಎಂದು ಸಭಿಕರಲ್ಲಿ ಓರ್ವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಇಲ್ಲ, ಎಂದೂ ಇಲ್ಲ; ನಾನು ರಾಜಕೀಯಕ್ಕೆ ಬಂದಿರುವುದೇ ಪ್ರಭಾವೀ ಮತ್ತು ಜನಾಕರ್ಷಕ ನಾಯಕನ ಕೈಕೆಳಗೆ ಕೆಲಸ ಮಾಡಲು; ಅಂತೆಯೇ ನಾನು ದಿವಂಗತ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದಡಿ ಕೆಲಸ ಮಾಡುವ ಅದೃಷ್ಟ ಪಡೆದೆ; ಹಾಗೆಯೇ ಈಗ ಮೋದಿ ಜೀ ನಾಯಕತ್ವದಡಿ ಕೆಲಸ ಮಾಡುವ ಅವಕಾಶ ನನಗೆ ಒದಗಿದೆ’ ಎಂದು ಹೇಳಿದರು.
ಪ್ರಧಾನ ಸೇವಕ್ ಆಗಿರುವ ನರೇಂದ್ರ ಮೋದಿ ಅವರು ಯಾವಾಗ ರಾಜಕೀಯದಿಂದ ನಿವೃತ್ತಿ ಪಡೆಯುವ ನಿರ್ಧಾರ ಕೈಗೊಳ್ಳುತ್ತಾರೋ ಅಂದೇ ನಾನು ರಾಜಕೀಯವನ್ನು ತೊರೆಯುತ್ತೇನೆ’ ಎಂದು ಸಚಿವೆ ಇರಾನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.