ಮೋದಿ ವಿರುದ್ಧ ವೈಯಕ್ತಿಕ ದಾಳಿ ಇಲ್ಲ;ಪ್ರಶ್ನೆ ಕೇಳದೆ ಬಿಡಲ್ಲ: ರಾಹುಲ್
Team Udayavani, May 3, 2018, 5:38 PM IST
ಬಿದರೆ : ”ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾನೆಂದೂ ವೈಯಕ್ತಿಕ ದಾಳಿ ಮಾಡಲ್ಲ; ಆದರೆ ಜ್ವಲಂತ ವಿಷಯಗಳಿಗೆ ಸಂಬಂಧಿಸಿ ಅವರಿಗೆ ಪ್ರಶ್ನೆ ಕೇಳದೇ ಬಿಡುವುದಿಲ್ಲ; ಅದು ನನ್ನ ಹಕ್ಕು” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದರು.
ಬಿದರೆ ಜಿಲ್ಲೆಯಲ್ಲಿಂದು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ಏನೇ ಹೇಳಲಿ, ನಾನಂತೂ ಅವರನ್ನು ವೈಯಕ್ತಿಕವಾಗಿ ಟೀಕಿಸುವುದಿಲ್ಲ; ಅವರು ದೇಶದ ಪ್ರಧಾನಿಯಾಗಿದ್ದಾರೆ ಎನ್ನುವುದನ್ನು ಮರೆಯುವುದಿಲ್ಲ; ಹಾಗಿದ್ದರೂ ಅವರಿಗೆ ಪ್ರಶ್ನೆ ಕೇಳುವುದನ್ನು ನಾನು ನಿಲ್ಲಿಸುವುದಿಲ್ಲ” ಎಂದು ಹೇಳಿದರು.
#WATCH: While addressing a rally in Bidar, Rahul Gandhi says, ‘No matter what he (PM Modi) says about me, I will never make a personal attack on him as he is the PM of the country, but I can ask him questions.’ #KarnatakaElections2018 pic.twitter.com/Ke8gr1Zedj
— ANI (@ANI) May 3, 2018
ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಸರ್ವಾಂಗೀಣ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ಪ್ರಧಾನಿ ತಮಗೆ ತೋಚಿದ್ದನ್ನು ಹೇಳಲು ಸ್ವತಂತ್ರರಿದ್ದಾರೆ; ಆದರೆ ಅವರು ಹೇಳುವ ಮಾತುಗಳಲ್ಲಿ ಸತ್ಯ ಮತ್ತು ತೂಕ ಇರುವುದು ಅಗತ್ಯ’ ಎಂದು ತಿರುಗೇಟು ನೀಡಿದರು.
ಮೋದಿ ಅವರು ದೇಶದ ಜನತೆಗೆ ಭಾರೀ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ; ಆದರೆ ಅವುಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಾರೆ ಎಂದು ರಾಹುಲ್ ದೂರಿದರು.
ಮೋದಿ ಅವರು ಕರ್ನಾಟಕದ ರೈತರ ಬಗ್ಗೆ, ಯುವ ಜನರ ಬಗ್ಗೆ ಮಾತೇ ಆಡುವುದಿಲ್ಲ; ಹಾಗಾಗಿ ಅವರು ನನ್ನ ವಿರುದ್ಧ ವೈಯಕ್ತಿಕ ದಾಳಿಗೆ ಮುಂದಾಗಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.