Oxford ವಿದ್ಯಾರ್ಥಿನಿಯ ವಿವಾದ : ಅಗತ್ಯವಿದ್ದಾಗ ನಾವು ಧ್ವನಿ ಎತ್ತುತ್ತೇವೆ : ಕೇಂದ್ರ
Team Udayavani, Mar 15, 2021, 5:18 PM IST
ನವ ದೆಹಲಿ : ಕಳೆದ ತಿಂಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಭಾರತೀಯ ವಿದ್ಯಾರ್ಥಿ ರಶ್ಮಿ ಸಮಂತ್ ಳ ವಿಷಯವನ್ನು ಬಿಜೆಪಿ ಮುಖಂಡರೋರ್ವರು ಪ್ರಸ್ತಾಪ ಮಾಡಿದಕ್ಕೆ ಪ್ರತಿಕ್ರಿಯೆಯಾಗಿ, “ವರ್ಣಭೇದ ನೀತಿಯಿಂದ ನಮ್ಮ ಕಣ್ಣುಗಳನ್ನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲ” ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಂದು ಸಂಸತ್ತಿನಲ್ಲಿ ಹೇಳಿದ್ದಾರೆ.
ರಶ್ಮಿ ಸಮಂತ್ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಪೋಸ್ಟ್ ಮಾಡಿದ್ದ ಕೆಲವು ಹೇಳಿಕೆಗಳನ್ನು “ಜನಾಂಗೀಯ” ಮತ್ತು “ಸಂವೇದನಾ ರಹಿತವಾದ” ಎಂದು ಬ್ರಾಂಡ್ ಮಾಡಿ, ವ್ಯಾಪಕವಾದ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ, ಭಾರತವು ಇಂತಹ ವಿಷಯಗಳನ್ನು ಬ್ರಿಟನ್ ನೊಂದಿಗೆ “ಅಗತ್ಯವಿದ್ದಾಗ ಈ ಬಗ್ಗೆ ಧ್ವನಿ ಎತ್ತುತ್ತೇವೆ” ಎಂದು ಸಚಿವರು ಹೇಳಿದ್ದಾರೆ.
ಓದಿ : ಥಾಣೆಯಲ್ಲಿ ಶಿವಸೇನೆ-ಬಿಜೆಪಿ ಘರ್ಷಣೆ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಎರಡೂ ಪಕ್ಷಗಳ ಬೇಡಿಕೆ
“ವರ್ಣಭೇದ ನೀತಿಯ ಬಗ್ಗೆ ಜಾಗತಿಕ ಕಾಳಜಿಯನ್ನು ಸದನದ ಗಮನಕ್ಕೆ ತರಲು ನಾನು ಬಯಸುತ್ತೇನೆ. ಅಲ್ಲಿನ ವರ್ತನೆಗಳು ಮತ್ತು ಪೂರ್ವಾಗ್ರಹಗಳು ಇನ್ನೂ ಕಂಡುಬರುತ್ತಿದೆ’ ಎಂದು ಒಡಿಶಾದ ಬಿಜೆಪಿ ರಾಜ್ಯಸಭಾ ಸದಸ್ಯೆ ಅಶ್ವಿನಿ ವೈಷ್ಣವ್ ಅವರು ಮೇಲ್ಮನೆಯಲ್ಲಿ ವಿದೇಶಾಂಗ ಸಚಿವರಿಗೆ ಹೇಳಿದ್ದಾರೆ.
“ಆಕೆಯ ವೈವಿಧ್ಯತೆ ಉಳಿಯಬೇಕಿತ್ತು, ಆದರೆ ಅದರ ಬದಲಾಗಿ ಅವಳು ರಾಜೀನಾಮೆ ನೀಡಬೇಕಾಯಿತು. ಆಕೆಯ ಹೆತ್ತವರ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಸಹ ಅಲ್ಲಿನ ಬೋಧಕವರ್ಗದವರಿಂದ ಸಾರ್ವಜನಿಕವಾಗಿ ಅವಹೇಳನ ಮಾಡಲಾಯಿತು. ಅದಕ್ಕೆ ಶಿಕ್ಷೆ ಕೂಡ ಆಗಲಿಲ್ಲ. ಇದು ಆಕ್ಸ್ ಫರ್ಡ್ ನಂತಹ ಅತ್ಯುನ್ನತ ಸಂಸ್ಥೆಯಲ್ಲಿ ನಡೆಯುತ್ತಿರುವ ನಡವಳಿಕೆ. ಇದರಿಂದ ಜಗತ್ತಿಗೆ ತಲುಪುತ್ತಿರುವ ಸಂದೇಶ ಯಾವುದು?” ಎಂದು ವೈಷ್ಣವ್ ಪ್ರಶ್ನಿಸಿದ್ದಾರೆ.
22ರ ಹರೆಯದ ರಶ್ಮಿ ಸಮಂತ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಯುವತಿ ಎಂಬ ಮನ್ನಣೆಗೂ ಪಾತ್ರರಾಗಿದ್ದರು.
ಕರ್ನಾಟಕದ ಉಡುಪಿ ಮೂಲದ ರಶ್ಮಿ ಸಮಂತ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಕೂಡಲೇ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಕೆಲವು ಪೋಸ್ಟ್ ಗಳ ಕಾರಣದಿಂದಾಗಿ ಟೀಕೆಗೆ ಒಳಗಾಗಿದ್ದರು.
ಓದಿ : 47 ಭಾಷೆಗಳಲ್ಲಿ ಮಾತನಾಡುತ್ತದೆ ‘ಶಾಲು’ ಹೆಸರಿನ ಈ ರೋಬೋಟ್!
2017 ರಲ್ಲಿ ಬರ್ಲಿನ್ ನ ಹತ್ಯಾಕಾಂಡ ಸ್ಮಾರಕಕ್ಕೆ ಭೇಟಿ ನೀಡಿದ್ದ ಸಂದರ್ಭ ಆ ಸ್ಮಾರಕದ ಕುರಿತಾಗಿ ಒಂದು ವಿವಾದಾತ್ಮಕ ಸಾಲುಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದರು. ಮಲೇಷ್ಯಾದಲ್ಲಿ ತೆಗೆಸಿಕೊಂಡಿದ್ದ ಫೋಟೊಗೆ ‘ಚಿಂಗ್ ಚಾಂಗ್’ ಎಂಬ ಒಕ್ಕಣೆ ಬರೆದು ಕೊಂಡು ಪೋಸ್ಟ್ ಮಾಡಿದ್ದು ಚೀನಾ ವಿದ್ಯಾರ್ಥಿಗಳನ್ನು ಅಸಮಾಧಾನಗೊಳಿಸಿತ್ತು.
ಇನ್ನು, ಆಕ್ಸ್ ಫರ್ಡ್ ನ ಲೈಂಗಿಕ ಅಲ್ಪ ಸಂಖ್ಯಾತ ಆಂದೋಲನದ ಬಗ್ಗೆಯೂ ಅವರು ಟೀಕೆ ಮಾಡಿದ್ದರು. ಇದರ ಬಗ್ಗೆ ವ್ಯಾಪಕವಾದ ಟೀಕೆಯನ್ನು ರಶ್ಮಿ ಎದುರಿಸುವಂತಾಗಿತ್ತು.
“ಮಹಾತ್ಮ ಗಾಂಧಿಯವರ ನಾಡಿನಲ್ಲಿದ್ದು, “ವರ್ಣಭೇದ ನೀತಿಯಿಂದ ನಮ್ಮ ಕಣ್ಣುಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಬಲವಾದ ಸಂಬಂಧಗಳನ್ನು ಯುಕೆ ಯೊಂದಿಗೆ ಹೊಂದಿದ್ದೇವೆ. ಅಗತ್ಯವಿದ್ದಾಗ ನಾವು ಇಂತಹ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿ ಧ್ವನಿ ಎತ್ತುತ್ತೇವೆ. “ನಾವು ಈ ಬೆಳವಣಿಗೆಗಳನ್ನು ಬಹಳ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ವರ್ಣಭೇದ ನೀತಿ ಮತ್ತು ಇತರ ರೀತಿಯ ಅಸಹಿಷ್ಣುತೆಯ ವಿರುದ್ಧದ ಹೋರಾಟವನ್ನು ನಾವು ಯಾವಾಗಲೂ ಮಾಡುತ್ತೇವೆ.” ಎಂದು ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.
ಇನ್ನು, ರಶ್ಮಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದು ನನಗೆ ಹೆಮ್ಮೆಯಿದೆ. ನಿಮ್ಮೆಲ್ಲರ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದರ ಬಗ್ಗೆ ಗೌರವವಿದೆ. ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿ ಕೆಲವು ವಿಚಾರಗಳಿಂದ ನಾನು ಈ ಜವಾಬ್ದಾರಿಯಿಂದ ಕೆಳಗಿಳಿಯುತ್ತೇನೆ ಎಂದು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವ ಮುನ್ನಾ ರಶ್ಮಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ನಂತರ ಅದು ‘ದಿ ಆಕ್ಸ್ ಫರ್ಡ್ ಸ್ಟೂಡೆಂಟ್’ ಪತ್ರಿಕೆಯಲ್ಲಿಯೂ ಪ್ರಕಟವಾಗಿತ್ತು.
ಓದಿ : ಬೇಡವಾಗಿದ್ದು ಇಲ್ಲಿಡಿ, ಬೇಕಾಗಿದ್ದು ಕೊಂಡೊಯ್ಯಿರಿ : ಹೊಟ್ಟೆ ಹಸಿದವರಿಗೂ ಇಲ್ಲಿದೆ ಆಹಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.