ಮನೆ ಕಿಟಕಿ, ಬಾಗಿಲಿಗೆ 73 ಲಕ್ಷ! : ಜಗನ್ ನಿವಾಸ, ಕ್ಯಾಂಪ್ ಆಫೀಸ್ ದುರಸ್ತಿಗೆ 5.73 ಕೋಟಿ
Team Udayavani, Nov 8, 2019, 7:10 AM IST
ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಅಧಿಕೃತ ನಿವಾಸ ಮತ್ತು ಕ್ಯಾಂಪ್ ಆಫೀಸ್ ನವೀಕರಣ ಮತ್ತು ದುರಸ್ತಿಗಾಗಿ ಮಾಡುತ್ತಿರುವ ವೆಚ್ಚವು ಈಗ ವಿವಾದಕ್ಕೆ ಕಾರಣವಾಗಿದೆ.
ಕೇವಲ ಕಿಟಕಿ-ಬಾಗಿಲುಗಳಿಗೇ 73 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಟಿಡಿಪಿ ನೇತೃತ್ವದ ಸರಕಾರದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಹಲವು ಕಟ್ಟಡಗಳನ್ನು ಕೆಡವಿ ಹಾಕಿದ್ದಕ್ಕೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಂಡಿರುವ ಜಗನ್ಮೋಹನ ರೆಡ್ಡಿ ವೆಚ್ಚದ ಕಾರಣಕ್ಕಾಗಿ ಟೀಕೆ ಎದುರಿಸುವಂತಾಗಿದೆ.
ಮೇ 30ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೂ. 25ರಂದು ಹೊರಡಿಸಲಾದ ಆದೇಶದ ಪ್ರಕಾರ ವಿಜಯವಾಡ ಜಿಲ್ಲೆಯ ತಡೇಪಲ್ಲಿ ಗ್ರಾಮದಲ್ಲಿರುವ ನಿವಾಸಕ್ಕೆ ತೆರಳುವ ರಸ್ತೆ ವಿಸ್ತರಣೆ ಮಾಡುವುದು ಮತ್ತು ಇತರ ಕಾಮಗಾರಿಗಳಿಗಾಗಿ 5 ಕೋಟಿ ರೂ., ಮತ್ತೊಂದು ಆದೇಶದಲ್ಲಿ ಪೊಲೀಸ್ ಬ್ಯಾರೆಕ್, ಭದ್ರತಾ ಸಿಬಂದಿ ಕೊಠಡಿ, ಹೆಲಿಪ್ಯಾಡ್‌ಗಳ ನಿರ್ಮಾಣಕ್ಕೆ 1.89 ಲಕ್ಷ ರೂ., ಜು. 9ರಂದು ಹೊರಡಿಸಲಾಗಿದ್ದ ಮತ್ತೂಂದು ಆದೇಶದಲ್ಲಿ ವೈರ್‌ಗಳ ಬದಲಾವಣೆಗಾಗಿ 8.5 ಲಕ್ಷ ರೂ., ಹೈದರಾಬಾದ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಭದ್ರತಾ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ 24.5 ಲಕ್ಷ ರೂ., ಇದರ ಜತೆಗೆ ಸಿಎಂ ನಿವಾಸಕ್ಕೆ 73 ಲಕ್ಷ ರೂ. ವೆಚ್ಚದಲ್ಲಿ ಅಲ್ಯುಮಿನಿಯಂ ಕಿಟಕಿ ಮತ್ತು ಬಾಗಿಲುಗಳ ಅಳವಡಿಕೆಗೆ ಕೂಡ ಆದೇಶ ಹೊರಡಿಸಲಾಗಿದೆ.
ವಿಪಕ್ಷ ನಾಯಕ ಚಂದ್ರಬಾಬು ನಾಯ್ಡು ‘ಮಿತಿಮೀರಿದ ವೆಚ್ಚ’ ಎಂದು ಟೀಕಿಸಿದ್ದಾರೆ. ಪುತ್ರ ನರಾ ಲೋಕೇಶ್ ಕೂಡ ಟೀಕೆ ಮಾಡಿ ‘1 ರೂ. ಸಂಬಳ ಸ್ವೀಕರಿಸುವುದಾಗಿ ಹೇಳಿ ಮುಖ್ಯಮಂತ್ರಿ ದುಂದು ವೆಚ್ಚ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.