ಕೊನೆಗೂ ಅಭಿನಂದನ್ ಹಸ್ತಾಂತರ; ಕೋಟ್ಯಂತರ ಭಾರತೀಯರಲ್ಲಿ ಹರ್ಷ
Team Udayavani, Mar 1, 2019, 3:58 PM IST
ಹೊಸದಿಲ್ಲಿ: ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ಥಾನ ಶುಕ್ರವಾರ ರಾತ್ರಿ 9.20 ರ ವೇಳೆ ಭಾರತಕ್ಕೆ ಹಸ್ತಾಂತರಿಸಿದೆ.
ವಾಘಾ ಅಟಾರಿ ಗಡಿಯಲ್ಲಿ ಶಸ್ತ್ರ ಸಜ್ಜಿತ ಪಾಕ್ ಭದ್ರತಾ ಪಡೆಗಳ ನಡುವೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತ ಬಂದ ಅಭಿನಂದನ್ ಅವರನ್ನು ಭಾರತೀಯ ಸೇನಾ ಅಧಿಕಾರಿಗಳು ಆಲಿಂಗನ ಮಾಡಿಕೊಂಡು ಆತ್ಮೀಯವಾಗಿ ಬರ ಮಾಡಿಕೊಂಡರು.
ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಪಾಕ್ ನರಿ ಬುದ್ದಿ ತೋರಿ ಅವರನ್ನು 4 ಗಂಟೆಗಳ ಕಾಲ ತಡವಾಗಿ ಹಸ್ತಾಂತರಿಸಿದೆ.
ವಿಶೇಷ ಭದ್ರತೆಯೊಂದಿಗೆ ಅಭಿನಂದನ್ ಅವರನ್ನು ಅಮೃತಸರಕ್ಕೆ ಕರೆ ತರಲಾಗಿದ್ದು, ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ದೆಹಲಿಗೆ ಕರೆ ತರಲಾಗುತ್ತದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯುದ್ಧ ವಿಮಾನ ಪತನವಾಗಿ ಅಭಿನಂದನ್ ಅವರು ಸೆರೆ ಸಿಕ್ಕಿದ್ದರು. ಎರಡೇ ದಿನಗಳಲ್ಲಿ ಪಾಕ್ ಭಾರತಕ್ಕೆ ಹಸ್ತಾಂತರಿಸುವ ಮೂಲಕ ಜಗತ್ತಿನ ಎದುರು ಮಂಡಿಯೂರಿದೆ.
ಭಾರತದ ಕಡೆಯಿಂದ ಎಲ್ಲಾ ರೀತಿಯಲ್ಲಿ ಕಾಗದ ಪತ್ರಗಳ ಕೆಲಸ ಸೇರಿ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾದರೂ, ಲಾಹೋರ್‌ನಲ್ಲಿ ಅಭಿನಂದನ್‌ರನ್ನು ತಡೆದು ಕೆಲ ಕಾಗದ ಪತ್ರಗಳ ಕೆಲಸಗಳನ್ನು ಪಾಕ್ ತಡೆ ಮಾಡಿದೆ ಎಂದು ತಿಳಿದು ಬಂದಿದೆ.ಪಾಕ್ ಸರ್ಕಾರಕ್ಕೆ ಐಎಸ್‌ಐ ಒತ್ತಡ ಹಾಕಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಕಸ್ಟಮ್ಸ್ ಮತ್ತು ವಲಸೆ ವಿಭಾಗದ ಕೆಲ ಪ್ರಕ್ರಿಯೆಗಳಲ್ಲಿ ಪಾಕ್ ಉದ್ದೇಶ ಪೂರ್ವಕವಾಗಿ ವಿಳಂಬ ತೋರಿದೆ ಎಂದು ವರದಿಯಾಗಿದೆ.
ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಲಿಲಾಗಿದೆ.
ಅಭಿನಂದನ್ ಪೋಷಕರು ಕೂಡಾ ಗಡಿಯಲ್ಲಿ ಹಾಜರಿದ್ದು ಮಗನ ಬರುವಿಕೆಗಾಗಿ ಕಾಯುತ್ತಿದ್ದರು.
ಗಡಿಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು, ಮೂರು ಸೇನಾ ಮುಖ್ಯಸ್ಥರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Maharashtra: ಕಾಂಗ್ರೆಸ್ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು
MUST WATCH
ಹೊಸ ಸೇರ್ಪಡೆ
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.