IAF ಹಾಸ್ಟೆಲ್‌ಗೆ ಅಭಿನಂದನ್ ಶಿಫ್ಟ್ , ರಾಜಸ್ಥಾನದ ಮಗು ‘ಅಭಿನಂದನ್’
Team Udayavani, Mar 2, 2019, 9:49 AM IST
ಹೊಸದಿಲ್ಲಿ : ಪಾಕಿಸ್ಥಾನದ ಸೆರೆಯಲ್ಲಿದ್ದು ನಿನ್ನೆ ಬಿಡುಗಡೆಗೊಂಡಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೇನಾ ಆಸ್ಪತ್ರೆಯಲ್ಲಿ ಕೂಲಂಕಷ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಇದೀಗ ಅವರನ್ನು ಭಾರತೀಯ ವಾಯು ಪಡೆಯ ಹಾಸ್ಟೆಲ್ ಗೆ ಸ್ಥಳಾಂತರಿಸಲಾಗಿದೆ.
ಪಾಕಿಸ್ಥಾನದ ಸೆರೆಯಲ್ಲಿರುವಾಗ ಅಭಿನಂದನ್ ದೇಹ ಮತ್ತು ಮನಸ್ಸಿನ ಮೇಲೆ ಯಾವೆಲ್ಲ ಪ್ರಯೋಗಗಳನ್ನು ಶತ್ರು ಸೈನಿಕರು ಮಾಡಿರಬಹುದು ಎಂಬುದನ್ನು ವೈದ್ಯಕೀಯವಾಗಿ ಪತ್ತೆ ಹಚ್ಚುವ ಸಲುವಾಗಿ ಅವರ ಫುಲ್ ಬಾಡಿ ಸ್ಕ್ಯಾನಿಂಗ್ ನಡೆಸಲಾಗಿತ್ತು ಎಂದು ಮಾಧ್ಯಮ ವರದಿಗಳು ಇಂದು ಬೆಳಗ್ಗೆ ತಿಳಿಸಿವೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡಿದ ಹೊತ್ತಿಗೆ ರಾಜಸ್ಥಾನದ ಅಳವಾರ್ ನಲ್ಲಿ ಜನಿಸಿದ್ದ ಮಗುವಿಗೆ ಅಭಿನಂದನ್ ಎಂದು ಹೆಸರಿಡಲಾಗಿರುವುದಾಗಿ ವರದಿಗಳು ತಿಳಿಸಿವೆ.
ಮಗುವಿನ ಅಜ್ಜ ಜಾನೇಶ್ ಭೂತಾನಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ‘ನನ್ನ ಸೊಸೆ ನಿನ್ನೆ ಶುಕ್ರವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಳು; ನಮಗೆ ವಿಂಗ್ ಕಮಾಂಡರ್ ಅಭಿನಂದನ್ ತೋರಿರುವ ಧೈರ್ಯ, ಸಾಹಸಗಳ ಬಗ್ಗೆ ಅತೀವ ಹೆಮ್ಮೆ ಇದೆ; ಆ ಪ್ರಕಾರ ನಾವು ಆತನ ಹೆಸರನ್ನು ಹೆಮ್ಮೆಯಿಂದ ನಮ್ಮ ಮೊಮ್ಮಗನಿಗೆ ಇಟ್ಟಿದ್ದೇವೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
MUST WATCH
ಹೊಸ ಸೇರ್ಪಡೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.