ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ?
ಎಲ್ಲ ವಿಚಾರಗಳ ಬಗ್ಗೆ ಚರ್ಚೆಯ ವಾಗ್ಧಾನ ಕೊಟ್ಟ ಮೋದಿ
Team Udayavani, Nov 18, 2019, 5:45 AM IST
ಹೊಸದಿಲ್ಲಿ: ಆರ್ಥಿಕ ಹಿಂಜರಿಕೆ ಭೀತಿ, ಅಯೋಧ್ಯೆ ತೀರ್ಪು, ಜಮ್ಮು-ಕಾಶ್ಮೀರದಲ್ಲಿನ ರಾಜಕೀಯ ನಾಯಕರ ಬಂಧನ ಅವಧಿ ಮುಂದುವರಿಕೆ ವಿಚಾರ…
ಸೋಮವಾರದಿಂದ ಆರಂಭ ವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿರುವ ಅಂಶಗಳಿವು. ಅಧಿವೇಶನದ ಹಿಂದಿನ ದಿನವಾದ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆ ಕರೆದು, ಕಲಾಪ ಸುಸೂತ್ರವಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು. ಜತೆಗೆ ವಿಪಕ್ಷಗಳು ಮುಂದಿಡುವ ಎಲ್ಲ ವಿಚಾರಗಳ ಚರ್ಚೆಗೂ ಅವಕಾಶ ನೀಡಲಾಗುತ್ತದೆ ಎಂದು ಮೋದಿ ಆಶ್ವಾಸನೆ ನೀಡಿದರು. ಸಭೆಯಲ್ಲಿನ ಬೆಳವಣಿಗೆಗಳ ಬಗ್ಗೆ ಸುದ್ದಿಗಾರರಿಗೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿ ನೀಡಿದರು.
ಅರ್ಥ ವ್ಯವಸ್ಥೆ ಬಗ್ಗೆ ಚರ್ಚೆ
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧಿರ್ ರಂಜನ್ ಚೌಧರಿ ದೇಶದ ಅರ್ಥ ವ್ಯವಸ್ಥೆ ಎದುರಿಸುವ ಸವಾಲು, ನಿಧಾನಗತಿಯ ಬಗ್ಗೆ ಚರ್ಚೆ ಯಾಗಬೇಕು ಎಂದು ಒತ್ತಾಯಿಸಿ ದರು. ಅದರ ಜತೆಗೆ ಬಂಧನ ದಲ್ಲಿರುವ ಲೋಕಸಭಾ ಸದಸ್ಯ ಡಾ| ಫಾರೂಕ್ ಅಬ್ದುಲ್ಲಾ ಅವರನ್ನು ಕಲಾಪಕ್ಕೆ ಹಾಜರಾಗಲು ಬಿಡುಗಡೆ ಮಾಡಬೇಕು ಎಂಬ ಒತ್ತಾಯವನ್ನೂ ಮಾಡಲಾಯಿತು.
ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಮೋದಿ ಅವರು ಭರವಸೆ ಕೊಟ್ಟರೂ ರಾಜ್ಯಸಭೆ ಯಲ್ಲಿ ವಿಪಕ್ಷ ನಾಯಕರಾಗಿರುವ ಗುಲಾಂ ನಬಿ ಆಜಾದ್ ಮಾತ್ರ ಅದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಕೆಲವು ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾವ ಮಾಡಿದಾಗಲೆಲ್ಲ ಸರಕಾರ ಬೇರೆಯದೇ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.