ಮಹಾರಾಷ್ಟ್ರದಲ್ಲಿದೆ 3,264 ಡ್ಯಾಂ; ಮಹಾಮಳೆ ಬಂದ್ರೆ ಮಹಾನಗರದ ಗತಿಯೇನು


Team Udayavani, Aug 27, 2018, 4:47 PM IST

mahanagari.jpg

ಥಾಣೆ: ಮಹಾಮಳೆ, ಜಲಾಶಯದಿಂದ ಹೊರ ಬಿಟ್ಟ ನೀರಿನಿಂದ ಉಂಟಾದ ಪ್ರವಾಹದಿಂದ ಕೇರಳ ತತ್ತರಿಸಿ ಹೋಗಿತ್ತು. ಏತನ್ಮಧ್ಯೆ ಮಹಾರಾಷ್ಟ್ರ ಸೇರಿದಂತೆ ಹಲವಾರು ನಗರಗಳು ಇಂತಹ ದುರಂತಗಳನ್ನು ಎದುರು ನೋಡುತ್ತಿವೆ ಎಂದು ವರದಿ ತಿಳಿಸಿದೆ.

ಭಾರೀ ಮಳೆ, ಕಳಪೆ ರೀತಿಯ ಡ್ಯಾಂ ನಿರ್ವಹಣೆ ಹಾಗೂ ರಿಯಲ್ ಎಸ್ಟೇಟ್ ದಂಧೆಯ ಅತಿಕ್ರಮಣದಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸೋದು ಹೇಗೆ…ಹೀಗಾದರೆ ಮಹಾರಾಷ್ಟ್ರದಲ್ಲಿ 2005ರ ಜುಲೈ 26ರ ಸ್ಥಿತಿ ಮರುಕಳಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ 38 ಜಲಾಶಯಗಳು ತುಂಬಿ ಹೋಗಿ ನೀರನ್ನು ಹೊರ ಬಿಟ್ಟಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಬರೋಬ್ಬರಿ 3,264 ಡ್ಯಾಂಗಳಿವೆ! ಈಗ ಇರುವ (3,200) ಡ್ಯಾಂಗಳಲ್ಲಿ ಹೆಚ್ಚು ನೀರು ಸಂಗ್ರಹಿಸಲು ಸಾಧ್ಯವಿಲ್ಲ. ನಿರಂತರ ಮಳೆಗೆ ಡ್ಯಾಂ ತುಂಬಿದಾಗ ಹೊರಗಡೆ ಬಿಡುವುದು ಅನಿವಾರ್ಯ. ಇದರಿಂದಾಗಿ ಮುಂಬೈಯಂತಹ ನಗರಗಳಾದ ಧಾಣೆ, ನಾಂದೇಡ್ ಪ್ರದೇಶ ಪ್ರವಾಹಕ್ಕೆ ಸುಲಭವಾಗಿ ತತ್ತರಿಸಿ ಹೋಗುತ್ತದೆ.

ನಿರಂತರ ಮಳೆಗೆ ಮೊದಲು ಎದುರಾಗುವುದು ಪ್ರವಾಹ. ಏನೇ ಆಗಿದ್ದರು ಮಾನವ ನಿರ್ಮಿತ ದುರಂತ ಮತ್ತು ಪ್ರಾಕೃತಿಕ ವಿಪತ್ತುಗಳು ಸಂಭವಿಸಿದರೆ ಏನು ಪರಿಹಾರ ಎಂಬ ಬಗ್ಗೆ ಆದ್ಯತೆ ಕೊಡಬೇಕಾಗಿದೆ ಎಂದು ನೀರು ಮತ್ತು ಪ್ರವಾಹ ನಿರ್ವಹಣೆ ತಜ್ಞ ಡಾ.ಸುಧೀರ್ ಬೋಂಗ್ಲೆ ತಿಳಿಸಿದ್ದಾರೆ.

ಇನ್ನಾದರೂ ಎಚ್ಚೆತ್ತುಕೊಳ್ಳಿ:

ಇನ್ನಾದರೂ ಸರ್ಕಾರ ಡ್ಯಾಂ ನಿರ್ವಹಣೆ ಮತ್ತು ವಾಟರ್ ಶೆಡ್ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಮುಖ್ಯ ಅಂಶಗಳನ್ನು ಕಡೆಗಣಿಸದೇ ದೊಡ್ಡ, ದೊಡ್ಡ ಡ್ಯಾಂ ನಿರ್ವಹಣೆಯತ್ತ ಗಮನಹರಿಸಬೇಕಾಗಿದೆ ಎಂದು ಡಾ.ಬೋಸ್ಲೆ ತಿಳಿಸಿದ್ದಾರೆ. ಪ್ರಕೃತಿ ಯಾವಾಗ ಮುನಿಸಿಕೊಳ್ಳುತ್ತದೆ ಎಂಬುದು ಊಹಿಸುವುದು ಕಷ್ಟ. ಹೀಗಾಗಿ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಬ್ಬಾ 2005ರಲ್ಲಿ ಮುಂಬೈ, ಮಹಾರಾಷ್ಟ್ರ ನಲುಗಿ ಹೋಗಿತ್ತು!

2018ರ ಆಗಸ್ಟ್ ತಿಂಗಳ ಮಹಾಮಳೆ, ಪ್ರವಾಹಕ್ಕೆ ಕೇರಳ ನಲುಗಿ ಹೋಗಿದ್ದರೆ, 2005ರಲ್ಲಿ ಮಹಾರಾಷ್ಟ್ರದ ಮುಂಬೈ ಸೇರಿದಂತೆ ಬಹುಭಾಗಗಳು ಮಳೆ, ಪ್ರವಾಹಕ್ಕೆ ತತ್ತರಿಸಿ ಹೋಗಿತ್ತು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ನೂರಾರು ಮನೆಗಳು ನಾಶಗೊಂಡಿದ್ದವು. ಸಾವಿರಾರು ಮಂದಿ ದಾರಿಮಧ್ಯೆ ಸಿಲುಕಿಕೊಂಡಿದ್ದರು. ತಮ್ಮ, ತಮ್ಮ ಮನೆಗಳಿಗೆ ಹೋಗಲು ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡೇ ಹೋಗಿದ್ದರು. 24ಗಂಟೆಯಲ್ಲಿ 944 ಮಿಲಿ ಮೀಟರ್ ನಷ್ಟು ಧಾರಾಕಾರ ದಾಖಲೆಯ ಮಳೆ ಸುರಿದಿತ್ತು. ಆ ನಂತರ 644 ಮಿ.ಮೀ…ಹೀಗೆ ಒಂದು ವಾರಗಳ ಕಾಲ ವರುಣನ ಆರ್ಭಟ ಮುಂದುವರಿದಿತ್ತು. 1974ರಲ್ಲಿಯೂ ಮುಂಬೈಯಲ್ಲಿ 24ಗಂಟೆಯಲ್ಲಿ 575 ಮಿ.ಮೀಟರ್ ಮಳೆ ಸುರಿದಿತ್ತು.

5.50 ಬಿಲಿಯನ್ ಡಾಲರ್ ನಷ್ಟು ನಷ್ಟ ಸಂಭವಿಸಿತ್ತು. ವ್ಯಾಪಾರ-ವಹಿವಾಟು, ಬ್ಯಾಂಕ್ ವಹಿವಾಟಿನ ಮೇಲೆ ಹೊಡೆತ ಬಿದ್ದಿತ್ತು. ಸುಮಾರು 30ಗಂಟೆಗಳ ಕಾಲ ಮುಂಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿತ್ತು. 700 ವಿಮಾನಗಳ ಪ್ರಯಾಣ ರದ್ದು ಮಾಡಲಾಗಿತ್ತು. ಮುಂಬೈ-ಪುಣೆ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಭೂ ಕುಸಿತ ಸಂಭವಿಸಿತ್ತು. ಈ ದಾರಿಯನ್ನೂ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ 24ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.