ಪತ್ನಿ ಸಾವಿಗೆ ಕಾರಣವೆಂದು 18 ತಿಂಗಳು ಪತಿಗೆ ಜೈಲು: 6 ವರ್ಷದ ಬಳಿಕ 2ನೇ ಪತಿ ಜತೆ ಪತ್ನಿ ಪತ್ತೆ..!
Team Udayavani, Dec 12, 2022, 12:48 PM IST
ಉತ್ತರ ಪ್ರದೇಶ: ಪತ್ನಿಯ ಸಾವಿಗೆ ಕಾರಣವೆಂದು ಗಂಡನನ್ನು ಬಂಧಿಸಿದ ಆರು ವರ್ಷದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮೃತಪಟ್ಟಿದ್ದಾಳೆ ಎನ್ನಲಾದ ಮಹಿಳೆ ಬೇರೊಬ್ಬರ ಜೊತೆ ಜೀವನ ಸಾಗಿಸುತ್ತಿರುವ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ: 2015 ರಲ್ಲಿ ಮೊದಲ ಬಾರಿ ಸೋನು ಸೈನಿ ಆರತಿ ದೇವಿ ಎನ್ನುವವರನ್ನು ದೇವಸ್ಥಾನವೊಂದರಲ್ಲಿ ನೋಡುತ್ತಾರೆ. ಆ ಬಳಿಕ ಆರತಿ ಹಾಗೂ ಸೋನು ನಡುವೆ ಪ್ರೇಮಾಂಕುರವಾಗಿ ಅದೇ ವರ್ಷ ಆರತಿ ತನ್ನ ಮನೆಯವರಿಗೆ ತಿಳಿಸದೇ ಸೋನು ಅವರೊಂದಿಗೆ ಕೋರ್ಟಿ ನಲ್ಲಿ ಮದುವೆಯಾಗಿದ್ದರು.
ಇದಾದ ಒಂದು ದಿನ ಆರತಿ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಗಳ ಕುರಿತು ವೃಂದಾವನ್ ಠಾಣೆಯಲ್ಲಿ ತಂದೆ ಸೂರಜ್ ಪ್ರಕಾಶ್ ಗುಪ್ತಾ ದೂರು ಕೊಡುತ್ತಾರೆ. ಅದೇ ವೇಳೆ ಊರಿನಲ್ಲಿ ಮಹಿಳೆಯೊಬ್ಬರ ದೇಹ ಪತ್ತೆಯಾಗುತ್ತದೆ. ಇದು ತನ್ನ ಮಗಳದೆಂದು ಪೊಲೀಸರ ಬಳಿ ಆರತಿಯ ತಂದೆ ಹೇಳಿ, ಕೃತ್ಯವೆಸಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.
ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿ 2016 ರಲ್ಲಿ ಆರತಿಯ ಪತಿ ಹಾಗೂ ಆತನ ಸ್ನೇಹಿತ ಗೋಪಾಲ್ ರನ್ನು ಬಂಧಿಸಿದ್ದರು. ಪ್ರಕರಣವನ್ನು ಬೇಧಿಸಿದ ತಂಡಕ್ಕೆ 15 ಸಾವಿರ ನಗದು ಕೂಡ ಸಿಗುತ್ತದೆ. 18 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ ಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿತ್ತು.
ಸೋನು ಹಾಗೂ ಆತನ ಸ್ನೇಹಿತ ಮೃತ ಪಟ್ಟಿದ್ದಾಳೆಂದು ಹೇಳಿರುವ ಆರತಿಗಾಗಿ ಹುಡುಕಾಟ ನಡೆಸಲು ಆರಂಭಿಸುತ್ತಾರೆ. ಹೀಗೆ ಹುಡುಕಾಟ ನಡೆಸುತ್ತಿರುವಾಗ ಇತ್ತೀಚೆಗೆ ಅಂದರೆ ಆರು ವರ್ಷದ ಬಳಿಕ ಆರತಿ ರಾಜಸ್ಥಾನದಲ್ಲಿ ತನ್ನ ಎರಡನೇ ಪತಿಯೊಂದಿಗೆ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಆ ಬಳಿಕ ಮಥುರಾ ಪೊಲೀಸರನ್ನು ಸಂಪರ್ಕಿಸಿ, ತನ್ನ ಪತ್ನಿ ಆರತಿ ಜೀವಂತವಾಗಿದ್ದಾಳೆ. ಆಕೆ ಮದುವೆಯಾದ ಕೆಲವೇ ದಿನಗಳ ಬಳಿಕ ಆಸ್ತಿಯ ವಿಚಾರವಾಗಿ ನನ್ನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಿದ ಬಳಿಕ ಪೊಲೀಸರು ರಾಜಸ್ಥಾನಕ್ಕೆ ತೆರಳಿ ಆರತಿಯನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯಲ್ಲಿ ಎರಡು ಆಧಾರ್ ಕಾರ್ಡ್ ಇದೆ ಅದರಲ್ಲಿ ಬೇರೆ ಬೇರೆ ಜನ್ಮ ದಿನಾಂಕವಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.