ಪತ್ನಿ ಜತೆಗಿನ ಸೆಕ್ಸ್ ನೇರಪ್ರಸಾರ!
Team Udayavani, Apr 14, 2017, 3:50 AM IST
ಹೈದರಾಬಾದ್: ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು ಆಕೆಗೆ ಅರಿವಿಲ್ಲದಂತೆ ಪೋರ್ನ್ ವೆಬ್‌ಸೈಟ್‌ನಲ್ಲಿ ಲೈವ್ ಆಗಿ ಪ್ರಸಾರ ಮಾಡಿದ ಹೈದರಾಬಾದ್‌ನ ಟೆಕ್ಕಿ ಯನ್ನು ಸೈಬರ್‌ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರವೇ 33 ವರ್ಷದ ಟೆಕ್ಕಿಯನ್ನು ಬಂಧಿಸಲಾಗಿದೆಯಾದರೂ, ಆತನ ಪತ್ನಿಯ ಘನತೆಗೆ ಧಕ್ಕೆ ಬರುವ ಹಿನ್ನೆಲೆಯಲ್ಲಿ ಆಕೆಯ ಮನವಿಯ ಮೇರೆಗೆ ವಿಚಾರವನ್ನು ಬಹಿರಂಗ ಮಾಡಿರಲಿಲ್ಲ ಎಂದು ಪೊಲೀಸ್ ಸಹಾಯಕ ಆಯುಕ್ತ ಎಸ್. ಜಯರಾಂ ತಿಳಿಸಿದ್ದಾರೆ.
ಬೇರೆ ಬೇರೆ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ತಮ್ಮ ಹಾಗೂ ಪತಿಯ ಲೈಂಗಿಕ ಕ್ರಿಯೆಗಳು ಅಪ್‌ಲೋಡ್ ಆಗಿರುವ ಕುರಿತು ಸಾಫ್ಟ್ಧಿವೇರ್ ಎಂಜಿನಿಯರ್ ಆಗಿರುವ ಮಹಿಳೆ ದೂರು ನೀಡಿದ್ದರು. ಅದರ ವಿಡಿಯೋ ಲಿಂಕ್‌ನ ಐಪಿ ಅಡ್ರೆಸ್ ಕೇರಳದ ತ್ರಿಶೂರ್‌ನಲ್ಲಿ ಪತ್ತೆಯಾಗಿತ್ತು. ಆ ಐಪಿ ಅಡ್ರೆಸ್ ಇರುವ ಕಂಪ್ಯೂಟರ್ ಮಾಲೀಕನನ್ನು ವಿಚಾರಣೆ ನಡೆಸಿದಾಗ, ತಾನು ಪೋರ್ನ್ ವೆಬ್‌ಸೈಟ್‌ನಿಂದ ಕ್ಲಿಪ್ ಡೌನ್‌ಲೋಡ್ ಮಾಡಿ, ಬೇರೆ ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದ. ಹೆಚ್ಚಿನ ತನಿಖೆ ನಡೆಸಿದಾಗ, ಆ ವಿಡಿಯೋವು ವ್ಯಕ್ತಿಯ ಬೆಡ್‌ರೂಂನಿಂದ ಲೈವ್ ಸ್ಟ್ರೀಮಿಂಗ್ ಆಗಿತ್ತು ಎಂಬ ವಿಚಾರ ಪೊಲೀಸರಿಗೆ ಗೊತ್ತಾಯಿತು.
ಕೂಡಲೇ ದೂರು ನೀಡಿದ ಮಹಿಳೆಯ ಪತಿಯ ಪ್ರೊಫೈಲ್, ಇಮೇಲ್‌ಗಳು, ಬ್ಯಾಂಕು ವಹಿವಾಟು, ಸಾಮಾಜಿಕ ಜಾಲತಾಣಗಳಲ್ಲಿನ ಮಾತುಕತೆಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಇದರಿಂದ ಆತನೇ ತಪ್ಪಿತಸ್ಥ ಎಂಬುದು ಪೊಲೀಸರಿಗೆ ಮನದಟ್ಟಾಯಿತು. ಬಂಧಿಸಿ, ವಿಚಾರಣೆ ನಡೆಸಿದಾಗ ಟೆಕ್ಕಿ ತಪ್ಪೊಪ್ಪಿಕೊಂಡಿದ್ದು, ತಾನು ಬಾಲ್ಯದಿಂದಲೂ ಅಶ್ಲೀಲ ಚಿತ್ರ ವೀಕ್ಷಣೆಯ ದಾಸನಾಗಿದ್ದೆ. ನಂತರ, ಪೋರ್ನ್ ಸೈಟ್‌ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಹೆಚ್ಚು ಹಣ ಗಳಿಸಲು ನಿರ್ಧರಿಸಿದೆ. ಪತ್ನಿಗೆ ಗೊತ್ತಿಲ್ಲದಂತೆಯೇ ಲೈಂಗಿಕ ಕ್ರಿಯೆಯನ್ನು ಲೈವ್ ಸ್ಟ್ರೀಮಿಂಗ್ ಮಾಡಿದ್ದೆ ಎಂದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ