WMO: 2025ರಲ್ಲೂ ದಾಖಲೆಯ ತಾಪಮಾನ: 10 ವರ್ಷಗಳಿಂದ ಹೆಚ್ಚುತ್ತಿದೆ ಬಿಸಿಯ ಮಾಪಕ
Team Udayavani, Dec 31, 2024, 11:24 PM IST
ಹೊಸದಿಲ್ಲಿ: 2024ರಲ್ಲಿ ದಾಖಲಾದ ಅತ್ಯಧಿಕ ತಾಪಮಾನವು 2025ರಲ್ಲೂ ಮುಂದುವರಿಯಲಿದ್ದು, ಇಡೀ ಜಗತ್ತು ಬಿಸಿಲಿನ ಬೇಗೆಯಿಂದ ಬಳಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ಭವಿಷ್ಯ ನುಡಿದಿದೆ.
ಹಸುರುಮನೆ ಅನಿಲದ ಪ್ರಮಾಣವು ದಾಖಲೆ ಮಟ್ಟಕ್ಕೆ ಏರಿಕೆಯಾಗಲಿದ್ದು, ಜಾಗತಿಕ ಸರಾಸರಿ ತಾಪಮಾನದ ಲೆಕ್ಕಾಚಾರದಲ್ಲಿ 2023 ಮತ್ತು 2024ರ ಬಳಿಕ 2025ರಲ್ಲೂ “ಅತ್ಯಧಿಕ ತಾಪದ ವರ್ಷ’ ವಾಗಿ ದಾಖಲೆ ಬರೆಯಲಿದೆ ಎಂದು ಡಬ್ಲ್ಯುಎಂಒ ಹೇಳಿದೆ.
ಈವರೆಗಿನ ಅತ್ಯಧಿಕ ತಾಪದ ವರ್ಷಗಳ ಪಟ್ಟಿಯನ್ನು ನೋಡಿದರೆ ಕಳೆದ 10 ವರ್ಷಗಳೇ ಟಾಪ್ 10 ಸ್ಥಾನ ಪಡೆದಿವೆ. ಕೈಗಾರಿಕಪೂರ್ವ ಮಟ್ಟ (1850- 1900) ಕ್ಕಿಂತ ತಾಪವು 1.5 ಡಿ.ಸೆ. ಮೀರಬಾರದು ಎಂದು ಪ್ಯಾರಿಸ್ ಒಪ್ಪಂದದಲ್ಲಿ ಮಿತಿ ಹೇರಲಾಗಿದ್ದರೂ, 2024ರಲ್ಲಿ ತಾಪ ಮಾನವು ಅದನ್ನೂ ದಾಟಿದೆ. 2025 ಕೂಡ ಭಾರೀ ಉಷ್ಣತೆಗೆ ಸಾಕ್ಷಿಯಾಗಲಿದ್ದು, ಎಲ್ಲ ದೇಶಗಳೂ ಇಂಗಾಲ ಹೊರಸೂಸುವಿಕೆ ಪ್ರಮಾಣ ತಗ್ಗಿಸದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಜತೆಗೆ ಹವಾಮಾನ ವೈಪರೀತ್ಯದಿಂದಾಗಿ 2024ರಲ್ಲಿ 3,700 ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.